Close Menu
Ain Live News
    Facebook X (Twitter) Instagram YouTube
    Sunday, May 25
    Facebook X (Twitter) Instagram YouTube
    Ain Live News
    Demo
    • Home
    • ಬೆಂಗಳೂರು
    • ರಾಜಕೀಯ
    • ಜಿಲ್ಲೆ
    • ಸಿನಿಮಾ
    • ಲೈಫ್ ಸ್ಟೈಲ್
    • ಜ್ಯೋತಿಷ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಕ್ರೀಡೆ
    • ತಂತ್ರಜ್ಞಾನ
    • ಕೃಷಿ
    • ಗ್ಯಾಲರಿ
    • ವಿಡಿಯೋ
    Facebook X (Twitter) Instagram YouTube
    Ain Live News

    ಸೇತುವೆ ಕಾಮಗಾರಿ ವಿಳಂಬಕ್ಕೆ ಆಕ್ರೋಶ: ಭೂ ಸ್ವಾಧೀನಕ್ಕೆ ಅಧಿಕಾರಿಗಳು ಸಜ್ಜು

    By AIN AuthorNovember 17, 2023
    Share
    Facebook Twitter LinkedIn Pinterest Email
    Demo
    ಬಾಗಲಕೋಟೆ: ಕಳೆದೈದು ವರ್ಷಗಳಿಂದ ನಡೆಯುತ್ತಿರುವ ಬೆಳಗಾವಿ-ಬಾಗಲಕೋಟೆ ಜಿಲ್ಲೆ ಬೆಸುಗೆ ಮಾಡುವಲ್ಲಿ ಮಹತ್ತರ ಯೋಜನೆಯಾಗಿರುವ ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ರಬಕವಿ ಜಾಕವೆಲ್‌ನ ಕೃಷ್ಣಾ ನದಿಗೆ ಅಡ್ಡಲಾಗಿ ನಿರ್ಮಿಸಲಾಗುತ್ತಿರುವ ಮಹಿಷವಾಡಗಿ ಸೇತುವೆ ಕಾಮಗಾರಿಯ ವಿಳಂಬನೀತಿಗೆ ಜನತೆ ಆಕ್ರೋಶಗೊಂಡಿದ್ದು, ಶುಕ್ರವಾರ ಅಧಿಕಾರಿಗಳ ಸಭೆಯು ಕೊಂಚ ನಿರಾಳತೆ ತೋರುವಲ್ಲಿ ಕಾರಣವಾಗಿದೆ.
    ಕೇವಲ ಒಂದು ಕಿ.ಮೀ.ನಷ್ಟು ಸೇತುವೆ ನಿರ್ಮಾಣಕ್ಕೆ ಐದಾರು ವರ್ಷಗಳಿಂದ ವಿಳಂಬವಾಗುತ್ತಿರುವ ಬಗ್ಗೆ ತಾಲೂಕಿನ ಜನತೆಗೆ ಯಕ್ಷ ಪ್ರಶ್ನೆಯಾಗಿ ಕಾಡುತ್ತಿದ್ದರೆ, ಅಧಿಕಾರಿಗಳ ನಿರ್ಲಕ್ಷö್ಯವಂತು ಹೇಳತೀರದು. ಸೇತುವೆ ವೀಕ್ಷಣೆ ನಡೆಸಿ ಇಂದು ನಡೆದ ಮಹತ್ವದ ಸಭೆಯಲ್ಲಿ ನೀರಾವರಿ ಇಲಾಖೆ ಅಧೀಕ್ಷಕ ಅಭಿಯಂತರ ಸುಭಾಷ ಮಾತನಾಡಿ ಭೂ ಪರಿಹಾರದಲ್ಲಿ ರೈತರಿಗೆ ಕಡಿಮೆ ಹಣ ಒದಗಿಸುತ್ತಿರುವದಾಗಿ ರೈತರು ವಿರೋಧಿಸಿದ್ದಾರೆ. ತಿಳುವಳಿಕೆ ನೋಟಿಸ್ ನೀಡಿದಾಗ್ಯೂ ಪಡೆಯದ ಕಾರಣ ಭೂಸ್ವಾಧೀನ ಅನಿವಾರ್ಯವಾಗಿದ್ದು, ಶೀಘ್ರವೇ ಕಾರ್ಯ ನಡೆಯಲಿದೆ ಎಂದರು. 
    https://ainlivenews.com/wp-content/uploads/2023/11/WhatsApp-Video-2023-11-17-at-16.18.18_0d42e2ea.mp4
    ಈ ಕಾರ್ಯ ಪ್ರಕ್ರಿಯೆಗೊಂಡ ಕೆಲವೇ ದಿನಗಳಲ್ಲಿ ಸೇತುವೆ ಎರಡೂ ಬದಿಯಲ್ಲಿ ರಸ್ತೆ ನಿರ್ಮಾಣ ನಡೆಸಲಾಗುವದು. ಈಗಾಗಲೇ ಸೇತುವೆ ಕಾರ್ಯ ಶೇ.೫೦ ರಷ್ಟು ಮುಕ್ತಾಯಗೊಂಡಿದೆ. ನದಿಯಲ್ಲಿ ನೀರು ಕಡಿಮೆಯಿರುವ ಕಾರಣ ನದಿಯೊಳಗಿನ ೮ ಪಿಲ್ಲರ್‌ಗಳನ್ನೂ ಸಹಿತ ಪ್ರಾರಂಭಿಸಲಾಗುವದೆಂದರು. ೨೦೧೮ ರಲ್ಲಿ ಅಂದಿನ ಸಚಿವೆ ಉಮಾಶ್ರೀಯವರು ೩೦ ಕೋಟಿ ರೂ.ಗಳಷ್ಟು ಟೆಂಡರ್ ಕಾಮಗಾರಿ ಮೂಲಕ ನಾಗಾರ್ಜುನ ಕನ್ಸ್ಟ್ರಕ್ಷನ್ಕ್ಷ  ಕಂಪನಿಗೆ ನೀಡಿತ್ತು. 
    ಕಳೆದ ಐದು ವರ್ಷಗಳಲ್ಲಿ ಕೇವಲ ಶೇ.೨೫ ರಷ್ಟು ಮಾತ್ರ ಕಾಮಗಾರಿ ನಡೆದಿದೆ. ಇದಕ್ಕೆ ಪೂರಕವಾಗಿ ೨೦೨೧ ರಲ್ಲಿ ಕಾಮಗಾರಿಗೆ ಮತ್ತಷ್ಟು ಉತ್ತೇಜನ ನೀಡುವ ಸಲುವಾಗಿ ಹಾಲಿ ಶಾಸಕ ಸಿದ್ದು ಸವದಿ ಈ ಟೆಂಡರ್ ಕಾಮಗಾರಿಯನ್ನು ೫೦ ಕೋಟಿ ರೂ.ಗಳವರೆಗೆ ಹೆಚ್ಚಳಗೊಳಿಸುವ ಮೂಲಕ ಕಾಮಗಾರಿ ಮತ್ತಷ್ಟು ಒಳ್ಳೆಯ ಹಾಗು ವಿಸ್ತರಣೆಯಾಗಲೆಂದು ಸರ್ಕಾರದಿಂದ ಅನುಮೋದನೆ ಮಾಡಿದ್ದರು.
    https://ainlivenews.com/wp-content/uploads/2023/11/WhatsApp-Video-2023-11-17-at-16.18.20_cc19df96.mp4
    ಆಕ್ರೋಶ: ಕೇವಲ ೮-೧೦ ರೈತರ ಭೂಮಿಗೆ ಪರಿಹಾರ ಒದಗಿಸುವ ಕಾರ್ಯಕ್ಕೆ ಇಷ್ಟೊಂದು ವಿಳಂಬನೀತಿಯನ್ನು ಜನತೆ ವಿರೋಧಿಸಿ ಆಕ್ರೋಶ ಹೊರಹಾಕಿದರು. ಸಣ್ಣ ಸೇತುವೆ ಕಾಮಗಾರಿಯನ್ನು ನಿರ್ಲಕ್ಷ್ಯ ಮಾಡುತ್ತಿರುವ ಸರ್ಕಾರದ ಕ್ರಮ ಸರಿಯಲ್ಲ.  ತಕ್ಷಣವೇ ಅಧಿಕಾರಿಗಳು ಎಚ್ಛೆತ್ತು ಕಾಮಗಾರಿ ನಡೆಸಬೇಕು. ಇಲ್ಲವಾದಲ್ಲಿ ಅನಿರ್ದಿಷ್ಠಕಾಲ ಹೋರಾಟ ಅನಿವಾರ್ಯವೆಂದು ನೆರೆದಿದ್ದ ಜನತೆ ಎಚ್ಚರಿಸಿದರು.
    https://ainlivenews.com/wp-content/uploads/2023/11/WhatsApp-Video-2023-11-17-at-16.19.00_6e11a032.mp4
    ಇದೇ ಸಂದರ್ಭದಲ್ಲಿ ಉಪವಿಭಾಗಾಧಿಕಾರಿ ಸಂತೋಷ ಕಾಮಗೊಂಡ, ಸಿದ್ದು ಕೊಣ್ಣೂರ, ಭೀಮಶಿ ಮಗದುಮ್, ರವಿ ಜಮಖಂಡಿ, ಬಾಬಾಗೌಡ ಪಾಟೀಲ, ಗಣಪತರಾವ  ಹಜಾರೆ, ರವಿ ಗಡಾದ, ಸಂಜಯ ತೆಗ್ಗಿ, ಧರೆಪ್ಪ ಉಳ್ಳಾಗಡ್ಡಿ, ವಿಶೇಷ ತಹಶೀಲ್ದಾರ ಎಸ್.ಬಿ. ಕಾಂಬಳೆ, ಅಧಿಕಾರಿಗಳಾದ ವೇಣುಗೋಪಾಲ, ಮುರಳಿಧರ. ರಾಮಣ್ಣ ಹುಲಕುಂದ. ನಿಲಕಂಠ ಮುತ್ತುರ. ಚಿದಾನಂದ ಗಾಳಿ.  ಬಸವರಾಜ್ ತೆಗ್ಗಿ. ಸಂಜು ತೇಗ್ಗಿ.  ಸೇರಿದಂತೆ ಅನೇಕರಿದ್ದರು. `ಭೂಸ್ವಾಧೀನ ಅನಿವಾರ್ಯವಾಗಿದೆ. ಶೀಘ್ರವೇ ಸೇತುವೆ ಕಾರ್ಯ ಪ್ರಾರಂಭವಾಗಲಿದೆ’.—-ಸಂತೋಷ ಕಾಮಗೊಂಡ, ಉಪವಿಭಾಗಾಧಿಕಾರಿ, ಜಮಖಂಡಿ.
    ಪ್ರಕಾಶ ಕುಂಬಾರ
    ಬಾಗಲಕೋಟೆ

    Demo
    Share. Facebook Twitter LinkedIn Email WhatsApp

    Related Posts

    ವಿಜಯಪುರ: ಕೆನರಾ ಬ್ಯಾಂಕ್‌ನಲ್ಲಿ ಕಳ್ಳತನ.. ದೂರು ದಾಖಲು!

    May 25, 2025

    ಮಳೆ ಆರ್ಭಟ: ಆಟೋ ಮೇಲೆ ಮುರಿದು ಬಿದ್ದ ಮರ – ಚಾಲಕ ಸಾವು!

    May 25, 2025

    ಮೀನುಗಾರಿಕಾ ಬೋಟ್ ನಲ್ಲಿ ಅನುಮಾನಾಸ್ಪದವಾಗಿ ಕಾರ್ಮಿಕ ಸಾವು!

    May 25, 2025

    ಶ್ರೀಗಂಧನ ಸೋಪಿನ ರಾಯಭಾರಿ ತಮನ್ನಾ: ಇದು ಮೈಸೂರು ರಾಜಮನೆತನಕ್ಕೆ ಮಾಡಿದ ಅಪಮಾನ ಎಂದ ವಿಜಯೇಂದ್ರ!

    May 25, 2025

    ಮಳೆ ಅವಾಂತರ: ಚಿಕ್ಕಮಗಳೂರಿನಲ್ಲಿ ಹಳ್ಳಕ್ಕೆ ಉರುಳಿದ ಕಾರುಗಳು!

    May 25, 2025

    ಹುಬ್ಬಳ್ಳಿಯಲ್ಲಿ ಜಿಟಿ-ಜಿಜಿ ಮಳೆ: ಜನಜೀವನ ಅಸ್ತವ್ಯಸ್ತ!

    May 25, 2025

    ಒಂದೇ ಕುಟುಂಬದ ಮೂವರು ಆತ್ಮಹತ್ಯೆ: ಸಾವಿಗೆ ಕಾರಣವಾಯ್ತು ಹಿರಿಯ ಮಗಳ ಆ ದುಡುಕು ನಿರ್ಧಾರ!

    May 25, 2025

    ಮಲತಂದೆಯಿಂದ ಘನಘೋರ ಕೃತ್ಯ: ಮೂರು ವರ್ಷದ ಬಾಲಕನ ಬರ್ಬರ ಹತ್ಯೆ, ನಾಲ್ವರು ಅರೆಸ್ಟ್!

    May 25, 2025

    ಕೊರೊನಾ ಬಗ್ಗೆ ಭಯ ಬೇಡ, ಸೋಂಕಿನ ವಿರುದ್ಧ ಹೋರಾಡಲು ಸರ್ಕಾರ ಸಿದ್ಧ -ಸಚಿವ ಶರಣಪ್ರಕಾಶ ಪಾಟೀಲ್!

    May 25, 2025

    ಹೃದಯಾಘಾತದಿಂದ ಹೊಸಪೇಟೆ ಪಟ್ಟಣ ಪೊಲೀಸ್ ಪೇದೆ ಸಾವು!

    May 25, 2025

    ರೇವ್ ಪಾರ್ಟಿ ಮೇಲೆ ದಾಳಿ: 30ಕ್ಕೂ ಹೆಚ್ಚು ಯುವಕ-ಯುವತಿಯರು ನಶೆಯಲ್ಲಿ ತೇಲಾಟ.. ಬಿಸಿ ಮುಟ್ಟಿಸಿದ ಖಾಕಿ!

    May 25, 2025

    ಕೋವಿಡ್‌ ಚಿಕಿತ್ಸೆಗೆ ಧಾರವಾಡ ಸಜ್ಜು: ಜಿಲ್ಲಾಸ್ಪತ್ರೆಯ 10ಬೆಡ್‌ಗಳು ಕೋವಿಡ್‌ಗೆ ಮೀಸಲು

    May 24, 2025
    © 2025 Copyright � All rights reserved AIN Developed by Notch IT Solutions..
    • Latest Trending news today
    • Trending News in kannada
    • Kannada online news
    • latest trends and news from India and around the world
    • New Kannada news channel
    • latest and breaking news in Kannada
    • Business News Kannada
    • Karnataka news headlines
    • Live Updates on Karnataka
    • flash news in Kannada politics

    Type above and press Enter to search. Press Esc to cancel.