Close Menu
Ain Live News
    Facebook X (Twitter) Instagram YouTube
    Monday, June 30
    Facebook X (Twitter) Instagram YouTube
    Ain Live News
    Demo
    • Home
    • ಬೆಂಗಳೂರು
    • ರಾಜಕೀಯ
    • ಜಿಲ್ಲೆ
    • ಸಿನಿಮಾ
    • ಲೈಫ್ ಸ್ಟೈಲ್
    • ಜ್ಯೋತಿಷ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಕ್ರೀಡೆ
    • ತಂತ್ರಜ್ಞಾನ
    • ಕೃಷಿ
    • ಗ್ಯಾಲರಿ
    • ವಿಡಿಯೋ
    Facebook X (Twitter) Instagram YouTube
    Ain Live News

    Mohan Yadav: ಮಧ್ಯಪ್ರದೇಶ ಸಿಎಂ ಆಗಿ ಮೋಹನ್ ಯಾದವ್ ಪ್ರಮಾಣ ವಚನ ಸ್ವೀಕಾರ.!

    By AIN AuthorDecember 13, 2023
    Share
    Facebook Twitter LinkedIn Pinterest Email
    Demo

    ಭೋಪಾಲ್ : ಮಧ್ಯಪ್ರದೇಶದ (Madhya Pradesh) ನೂತನ ಮುಖ್ಯಮಂತ್ರಿಯಾಗಿ ಡಾ.ಮೋಹನ್ ಯಾದವ್ (Mohan Yadav) ಅಧಿಕಾರ ಸ್ವೀಕರಿಸಿದ್ದಾರೆ. ಮುಖ್ಯಮಂತ್ರಿಯವರೊಂದಿಗೆ ಅವರ ಸಂಪುಟದ ಇಬ್ಬರು ಉಪಮುಖ್ಯಮಂತ್ರಿಗಳಾಗಿ ರಾಜೇಂದ್ರ ಶುಕ್ಲಾ ಮತ್ತು ಜಗದೀಶ್ ದಿಯೋರಾ ಕೂಡ ಪ್ರಮಾಣ ವಚನ ಸ್ವೀಕರಿಸಿದರು. ರಾಜ್ಯಪಾಲ ಮಂಗುಭಾಯಿ ಸಿ. ಪಟೇಲ್ ಪ್ರಮಾಣವಚನ ಬೋಧಿಸಿದರು.

    ಹದಿನೆಂಟು ವರ್ಷಗಳ ಕಾಲ ಮುಖ್ಯಮಂತ್ರಿಯಾಗಿದ್ದ ಶಿವರಾಜ್ ಸಿಂಗ್ ಚೌಹಾಣ್‌ (Shivraj Singh Chouhan) ಅವರನ್ನು ಕೈ ಬಿಟ್ಟು ಬಿಜೆಪಿ ಹೈಕಮಾಂಡ್ (BJP High Command) ಮುಖ್ಯಮಂತ್ರಿ ಹುದ್ದೆಗೆ ಡಾ.ಮೋಹನ್ ಯಾದವ್ ಹೆಸರನ್ನು ಪರಿಗಣಿಸುವ ಮೂಲಕ ಎಲ್ಲರಿಗೂ ಅಚ್ಚರಿ ಮೂಡಿಸಿತ್ತು. ಮೂರು ಬಾರಿ ಶಾಸಕರಾಗಿರುವ ಡಾ.ಮೋಹನ್ ಯಾದವ್ ಸಚಿವರಾಗಿ ಕಾರ್ಯ ನಿರ್ವಹಿಸಿದ್ದಾರೆ ಅಲ್ಲದೇ ಸಂಘದ ಜೊತೆಗೆ ಗುರಿತಿಸಿಕೊಂಡಿದ್ದಾರೆ. ಅಲ್ಲದೇ ರಾಜ್ಯದ ಜನಸಂಖ್ಯೆಯ 48% ಕ್ಕಿಂತ ಹೆಚ್ಚು ಹೊಂದಿರುವ ಇತರ ಹಿಂದುಳಿದ ವರ್ಗಗಳ (ಒಬಿಸಿ) ಸಮುದಾಯ ಪ್ರತಿನಿಧಿಸುತ್ತಿದ್ದಾರೆ.

    Winter Health: ಚಳಿಗಾಲದಲ್ಲಿ ವಸಡು ಮತ್ತು ಹಲ್ಲುಗಳ ಆರೈಕೆ ಹೇಗೆ ಗೊತ್ತಾ: ಇಲ್ಲಿದೆ ಟಿಪ್ಸ್!

    ಪ್ರಮಾಣ ವಚನ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ (PM Narendra Modi), ಗೃಹ ಸಚಿವ ಅಮಿತ್ ಶಾ (Amit Shah) ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ (JP Nadda) ಸೇರಿದಂತೆ ಕೇಂದ್ರ ಸಚಿವರು ಎನ್‌ಡಿಎ (NDA) ಆಡಳಿತ ನಾಯಕರು ಭಾಗಿಯಾಗಿದ್ದರು. ಪ್ರಮಾಣ ವಚನ ಸಮಾರಂಭಕ್ಕೆ ತೆರಳುವ ಮುನ್ನ ಮೋಹನ್ ಯಾದವ್ ಭೋಪಾಲ್‌ನ ದೇವಸ್ಥಾನಕ್ಕೆ ಭೇಟಿ ನೀಡಿದ್ದರು. ಬಳಿಕ ಬಿಜೆಪಿ ರಾಜ್ಯ ಕಚೇರಿಗೆ ತೆರಳಿ ಜನಸಂಘದ ಸಂಸ್ಥಾಪಕ ಸದಸ್ಯರಲ್ಲಿ ಒಬ್ಬರಾದ ಪಂಡಿತ್ ದೀನದಯಾಳ್ ಉಪಾಧ್ಯಾಯ ಮತ್ತು ಬಿಜೆಪಿಯ ಸಂಸ್ಥಾಪಕ ವಿಚಾರವಾದಿ ಶ್ಯಾಮ ಪ್ರಸಾದ್ ಮುಖರ್ಜಿ ಅವರಿಗೆ ಗೌರವ ಸಲ್ಲಿಸಿದರು‌.

    Demo
    Share. Facebook Twitter LinkedIn Email WhatsApp

    Related Posts

    ಆತನಿಗೆ ಹಲವರೊಂದಿಗೆ ಅಫೇರ್ ಇತ್ತು; ಯಶ್‌ ದಯಾಳ್‌ ವಿರುದ್ಧ ಮಹಿಳೆಯಿಂದ ಮತ್ತೊಂದು ಆರೋಪ!

    June 30, 2025

    ಭಾರತೀಯ ಸಿಬ್ಬಂದಿಯನ್ನು ಹೊತ್ತೊಯ್ಯುತ್ತಿದ್ದ ಹಡಗಿನಲ್ಲಿ ಬೆಂಕಿ: ನೌಕಾಪಡೆಯಿಂದ ರಕ್ಷಣೆ

    June 30, 2025

    ಪದ್ಮಶ್ರೀ ಪುರಸ್ಕೃತ ಕಣ್ಣಪ್ಪ ತಂಬಿರಾರ್’ಗೆ ವೀರಶೈವ ಮಹಾಸಭಾ ಅಭಿನಂದನೆ

    June 30, 2025

    ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ಹೋರಟವರು ಮಸಣ ಸೇರಿದರು: ಚಿಕ್ಕಬಳ್ಳಾಪುರದ ಮೂವರು ಸಾವು!

    June 30, 2025

    ಕುಕ್ಕೆ ಸುಬ್ರಹ್ಮಣ್ಯನ ದರ್ಶನ ಪಡೆದ ಅಣ್ಣಾಮಲೈ!

    June 30, 2025

    ಚಲಿಸುವ ಬೈಕ್‌ನಲ್ಲೇ ರೊಮ್ಯಾನ್ಸ್ ಮಾಡಿದ ಲವ್ ಬರ್ಡ್ಸ್!

    June 29, 2025

    ಅರೇಂಜ್ಡ್​ ಮ್ಯಾರೇಜ್ ಆಗಿ ಅಮೆರಿಕಕ್ಕೆ ಹೋಗಿದ್ದ ಭಾರತೀಯ ಮಹಿಳೆ ನಾಪತ್ತೆ!

    June 29, 2025

    ಕಲಬುರ್ಗಿ ಜೋಳದ ರೊಟ್ಟಿಗೆ ಮೋದಿ ಮೆಚ್ಚುಗೆ: ಮನ್ ಕಿ ಬಾತ್‌ನಲ್ಲಿ ಹೇಳಿದ್ದೇನು?

    June 29, 2025

    ಮೇಘಸ್ಫೋಟ, ಹಠಾತ್ ಪ್ರವಾಹ: ಉತ್ತರಾಖಂಡದಲ್ಲಿ 9 ಕಾರ್ಮಿಕರು ನಾಪತ್ತೆ!

    June 29, 2025

    ಕಾಲ್ತುಳಿತ: ಪುರಿ ಜಗನ್ನಾಥ ರಥಯಾತ್ರೆ ವೇಳೆ ಉಸಿರು ಚಲ್ಲಿದ ಮೂವರು.. 30ಕ್ಕೂ ಅಧಿಕ ಮಂದಿಗೆ ಗಾಯ!

    June 29, 2025

    ಆರ್ ಸಿಬಿ ವೇಗಿ ವಿರುದ್ಧ ಕೇಳಿಬಂತು ಗಂಭೀರ ಆರೋಪ: ದೈಹಿಕ ಕಿರುಕುಳದ ದೂರುಕೊಟ್ಟ ಮಹಿಳೆ!

    June 28, 2025

    Rath Yatra: ಪುರಿ ಜಗನ್ನಾಥ ಯಾತ್ರೆ: ಜನಸಂದಣಿಯಿಂದಾಗಿ 600 ಜನರು ಅಸ್ವಸ್ಥ.!

    June 28, 2025
    © 2025 Copyright � All rights reserved AIN Developed by Notch IT Solutions..
    • Latest Trending news today
    • Trending News in kannada
    • Kannada online news
    • latest trends and news from India and around the world
    • New Kannada news channel
    • latest and breaking news in Kannada
    • Business News Kannada
    • Karnataka news headlines
    • Live Updates on Karnataka
    • flash news in Kannada politics

    Type above and press Enter to search. Press Esc to cancel.