Close Menu
Ain Live News
    Facebook X (Twitter) Instagram YouTube
    Tuesday, July 1
    Facebook X (Twitter) Instagram YouTube
    Ain Live News
    Demo
    • Home
    • ಬೆಂಗಳೂರು
    • ರಾಜಕೀಯ
    • ಜಿಲ್ಲೆ
    • ಸಿನಿಮಾ
    • ಲೈಫ್ ಸ್ಟೈಲ್
    • ಜ್ಯೋತಿಷ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಕ್ರೀಡೆ
    • ತಂತ್ರಜ್ಞಾನ
    • ಕೃಷಿ
    • ಗ್ಯಾಲರಿ
    • ವಿಡಿಯೋ
    Facebook X (Twitter) Instagram YouTube
    Ain Live News

    Lok Sabha Incident: ಲೋಕಸಭೆಯಲ್ಲಿ ಭದ್ರತಾ ವೈಫಲ್ಯ: ಮತ್ತೊಂದು ಸ್ಫೋಟಕ ಮಾಹಿತಿ ಬಯಲು

    By AIN AuthorDecember 14, 2023
    Share
    Facebook Twitter LinkedIn Pinterest Email
    Demo

    ನವದೆಹಲಿ: ಲೋಕಸಭೆಯ (Lok Sabha) ಒಳಗೆ ಸ್ಮೋಕ್‌ ಬಾಂಬ್‌ (Smoke Bomb) ಸಿಡಿಸಿದ ಮನೋರಂಜನ್‌ (Manoranjan) ಮತ್ತು ಸಾಗರ್‌ ಶರ್ಮಾ (Sagar Sharma) 45 ನಿಮಿಷಗಳ ಕಾಲ ಪಾಸ್‌ ಪಡೆದು 2 ಗಂಟೆಗಳ ಕಾಲ ವೀಕ್ಷಕರ ಗ್ಯಾಲರಿಯಲ್ಲಿ ಕುಳಿತಿದ್ದು ಹೇಗೆ ಎನ್ನುವುದು ದೊಡ್ಡ ಪ್ರಶ್ನೆಯಾಗಿದೆ. ಹೌದು. ಬೆಳಗ್ಗೆ 11:30 ರಿಂದ ಮಧ್ಯಾಹ್ನ 12:15 ರವರೆಗೆ ಕಲಾಪ ವೀಕ್ಷಣೆಗೆ ಸಮಯ ನೀಡಲಾಗಿತ್ತು. 45 ನಿಮಿಷಗಳವರೆಗೆ ಪಾಸ್‌ ಪಡೆದ ಇವರು ಸುಮಾರು 2 ಗಂಟೆಗಳ ಕಾಲ ಕಲಾಪ ವೀಕ್ಷಣೆ ಮಾಡಿದ್ದರು.  

    ಸಂಸತ್‌ನಲ್ಲಿ ಕಲಾಪ ನಡೆಯಲಿ, ನಡೆಯದೇ ಇರಲಿ 45 ನಿಮಿಷಗಳ ಅವಧಿ ಮುಗಿದ ಕೂಡಲೇ ವೀಕ್ಷಕರ ಗ್ಯಾಲರಿಯಿಂದ ತೆರಳಬೇಕಾಗುತ್ತದೆ. ಈ ನಿರ್ದೇಶನವಿದ್ದರೂ ಇಬ್ಬರನ್ನು 2 ಗಂಟೆಗಳ ಕಾಲ ಕಲಾಪ ವೀಕ್ಷಣೆಗೆ ಅನುಮತಿ ನೀಡಿದ್ದೇ ಅತಿದೊಡ್ಡ ಭದ್ರತಾಲೋಪ. ವೀಕ್ಷಕರ ಜಾಗ ಖಾಲಿ ಇದ್ದ ಕಾರಣ ಭದ್ರತಾ ಸಿಬ್ಬಂದಿ  ಈ ವಿಷಯವನ್ನು ಗಮನಿಸದ ಕಾರಣ ಈ ಲೋಪ ಉಂಟಾಗಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ. 

    Nail Cutting At Night: ರಾತ್ರಿ ಯಾಕೆ ಉಗುರು ಕತ್ತರಿಸಬಾರದು ಗೊತ್ತಾ..? ಇಲ್ಲಿದೆ ನೋಡಿ ಕಾರಣ

    ಸುಮಾರು ಎರಡು ಗಂಟೆಗಳ ಕಾಲ ಪ್ರೇಕ್ಷಕರ ಗ್ಯಾಲರಿಯಲ್ಲಿ ಇದ್ದ ಇವರು ಮಧ್ಯಾಹ್ನ 1:01ರ ವೇಳೆಗೆ ಗ್ಯಾಲರಿಯಿಂದ ಕೆಳಗಡೆ ಜಿಗಿದು ಹಳದಿ ಬಣ್ಣದ ಸ್ಮೋಕ್‌ ಬಾಂಬ್‌ ಸಿಡಿಸಿದ್ದಾರೆ. ಕೆಳಗಡೆ ಜಿಗಿದ ಬಳಿಕ ಮೂರು ಸಾಲುಗಳನ್ನು ದಾಟಿ ಸೀಟಿನ ಕಡೆಗೆ ತಲುಪಿ ಶೂ ಒಳಗಿದ್ದ ವಸ್ತುವನ್ನು ಹೊರತೆಗೆದಿದ್ದಾನೆ. ನಂತರ ಸದನದಲ್ಲಿ ಹಳದಿ ಬಣ್ಣದ ಹೊಗೆ ಏಳಲಾರಂಭಿಸಿದೆ.

    ನಾಲ್ವರು ಆರೋಪಿಗಳು ಸಾಮಾಜಿಕ ಜಾಲತಾಣದ ಮೂಲಕ ಪರಿಚಯ ಹೊಂದಿದ್ದು ಗುರುಗ್ರಾಮ ಸೆಕ್ಟರ್ 7 ರಲ್ಲಿ ದಾಳಿ ನಡೆಸುವ ಬಗ್ಗೆ ಸಂಪೂರ್ಣ ಪ್ಲ್ಯಾನ್‌ ಮಾಡಿದ್ದರು. ಈ ಆರೋಪಿಗಳು ಲಲಿತ್ ಝಾ ಎಂದು ಗುರುತಿಸಲಾದ ವ್ಯಕ್ತಿಯ ನಿವಾಸದಲ್ಲಿ ಒಟ್ಟಿಗೆ ತಂಗಿದ್ದರು. ಈಗ ಪೊಲೀಸರು ಲಲಿತ್‌ ಝಾಗೆ ಮನೆಯನ್ನು ಬಾಡಿಗೆ ನೀಡಿದ ವಿಶಾಲ್‌ ಶರ್ಮಾ ಅಲಿಯಾಸ್‌ ವಿಕ್ಕಿ ಶರ್ಮಾ ಅವರ ಪತ್ನಿ ವೃಂದಾ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

    Demo
    Share. Facebook Twitter LinkedIn Email WhatsApp

    Related Posts

    ರೈತರಿಗೆ ಭರ್ಜರಿ ಸಿಹಿ ಸುದ್ದಿ: ಕೃಷಿ ಭೂಮಿಯಲ್ಲಿ ಮರ ಕಡಿಯಲು ನಿಯಮ ಸರಳೀಕರಣ!

    July 1, 2025

    Gold Rate Today: ಆಭರಣ ಪ್ರಿಯರಿಗೆ ಶಾಕಿಂಗ್ ನ್ಯೂಸ್: ದೇಶಾದ್ಯಂತ ಇಂದು ಚಿನ್ನದ ಬೆಲೆಯಲ್ಲಿ ಭಾರೀ ಏರಿಕೆ!

    July 1, 2025

    National Doctors Day.. ಇಂದು ರಾಷ್ಟ್ರೀಯ ವೈದ್ಯರ ದಿನ: ಈ ದಿನದ ಇತಿಹಾಸ, ಮಹತ್ವದ ಮಾಹಿತಿ ಇಲ್ಲಿದೆ

    July 1, 2025

    ತೆಲಂಗಾಣ ಔಷಧ ಕಾರ್ಖಾನೆಯಲ್ಲಿ ಸ್ಫೋಟ: ಸಾವಿನ ಸಂಖ್ಯೆ 45 ಕ್ಕೆ ಏರಿಕೆ..!

    July 1, 2025

    Commercial Cylinder Price: ಗ್ರಾಹಕರಿಗೆ ಸಿಹಿ ಸುದ್ದಿ: ಸಿಲಿಂಡರ್ ಬೆಲೆಯಲ್ಲಿ ಇಳಿಕೆ..!

    July 1, 2025

    ನೀವು HDFC ಕ್ರೆಡಿಟ್ ಕಾರ್ಡ್ ಬಳಸುತ್ತಿದ್ದೀರಾ? ಹಾಗಾದ್ರೆ ಈ ಪ್ರಮುಖ ಬದಲಾವಣೆಗಳ ಬಗ್ಗೆ ತಿಳಿದುಕೊಳ್ಳಲೇಬೇಕು!

    July 1, 2025

    ಕರ್ನಾಟಕ ಸೇರಿ ವಿವಿಧ ರಾಜ್ಯಗಳಲ್ಲಿ ಜ. 5ರವರೆಗೆ ಭಾರೀ ಮಳೆ!

    July 1, 2025

    ಗ್ರಾಹಕರಿಗೆ ಎಚ್ಚರಿಕೆ.. ನೀವು ಈ ವಿಷಯಗಳನ್ನು ತಿಳಿದುಕೊಳ್ಳಲೇಬೇಕು..! ಇಂದಿನಿಂದ ಹೊಸ ನಿಯಮಗಳು ಜಾರಿಗೆ!

    July 1, 2025

    ಆತನಿಗೆ ಹಲವರೊಂದಿಗೆ ಅಫೇರ್ ಇತ್ತು; ಯಶ್‌ ದಯಾಳ್‌ ವಿರುದ್ಧ ಮಹಿಳೆಯಿಂದ ಮತ್ತೊಂದು ಆರೋಪ!

    June 30, 2025

    ಭಾರತೀಯ ಸಿಬ್ಬಂದಿಯನ್ನು ಹೊತ್ತೊಯ್ಯುತ್ತಿದ್ದ ಹಡಗಿನಲ್ಲಿ ಬೆಂಕಿ: ನೌಕಾಪಡೆಯಿಂದ ರಕ್ಷಣೆ

    June 30, 2025

    ಪದ್ಮಶ್ರೀ ಪುರಸ್ಕೃತ ಕಣ್ಣಪ್ಪ ತಂಬಿರಾರ್’ಗೆ ವೀರಶೈವ ಮಹಾಸಭಾ ಅಭಿನಂದನೆ

    June 30, 2025

    ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ಹೋರಟವರು ಮಸಣ ಸೇರಿದರು: ಚಿಕ್ಕಬಳ್ಳಾಪುರದ ಮೂವರು ಸಾವು!

    June 30, 2025
    © 2025 Copyright � All rights reserved AIN Developed by Notch IT Solutions..
    • Latest Trending news today
    • Trending News in kannada
    • Kannada online news
    • latest trends and news from India and around the world
    • New Kannada news channel
    • latest and breaking news in Kannada
    • Business News Kannada
    • Karnataka news headlines
    • Live Updates on Karnataka
    • flash news in Kannada politics

    Type above and press Enter to search. Press Esc to cancel.