Close Menu
Ain Live News
    Facebook X (Twitter) Instagram YouTube
    Sunday, July 6
    Facebook X (Twitter) Instagram YouTube
    Ain Live News
    Demo
    • Home
    • ಬೆಂಗಳೂರು
    • ರಾಜಕೀಯ
    • ಜಿಲ್ಲೆ
    • ಸಿನಿಮಾ
    • ಲೈಫ್ ಸ್ಟೈಲ್
    • ಜ್ಯೋತಿಷ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಕ್ರೀಡೆ
    • ತಂತ್ರಜ್ಞಾನ
    • ಕೃಷಿ
    • ಗ್ಯಾಲರಿ
    • ವಿಡಿಯೋ
    Facebook X (Twitter) Instagram YouTube
    Ain Live News

    Siddaramaiah: ಅಸಮಾನತೆಯಿಂದ ಬಳಲುವವರು ಮುಖ್ಯವಾಹಿನಿಗೆ ಬರಬೇಕು – CM ಸಿದ್ದರಾಮಯ್ಯ

    By AIN AuthorDecember 17, 2023
    Share
    Facebook Twitter LinkedIn Pinterest Email
    Demo

    ಧಾರವಾಡ:- ಅಸಮಾನತೆ ಇರೋವರೆಗೂ ಸಮಾಜದಲ್ಲಿ ನೆಮ್ಮದಿಯಿರುವುದಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

    ಕರ್ನಾಟಕ ಕಲಾ ಮೈದಾನದಲ್ಲಿ ಹಮ್ಮಿಕೊಂಡಿದ್ದ ವಿಶೇಷಚೇತನರಿಗೆ ವಾಹನ ವಿತರಣೆ ಹಾಗೂ ಕಟ್ಟಡ ಕಾರ್ಮಿಕರ ಮಕ್ಕಳಿಗೆ ಲ್ಯಾಪ್​​​ಟಾಪ್ ವಿತರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಸಿಎಂ, ಸಮಾಜದಲ್ಲಿಂದು ಶೇ. 90ರಷ್ಟು ಸಂಪತ್ತು ಕೇವಲ ಶೇ. 10ರಷ್ಟು ಜನರಲ್ಲಿ ಕೇಂದ್ರೀಕೃತವಾಗಿದೆ. ಇದರಿಂದಾಗಿಯೇ ಸಮಾಜದಲ್ಲಿ ಅಸಮಾನತೆ ಸೃಷ್ಟಿಯಾಗಿದೆ. ಈ ಅಸಮಾನತೆ ತೊಲಗಿಸುವ ಬಗ್ಗೆ ಅಂಬೇಡ್ಕರ್ ಹೇಳಿದ್ದರು. ಅಸಮಾನತೆ ಇರೋವರೆಗೂ ಸಮಾಜದಲ್ಲಿ ನೆಮ್ಮದಿ, ಶಾಂತಿ ಇರಲು ಸಾಧ್ಯವಿಲ್ಲ. ಅಸಮಾನತೆಯಿಂದ ಬಳಲುವವರು ಮುಖ್ಯವಾಹಿನಿಗೆ ಬರಬೇಕು. ಇಲ್ಲದೇ ಹೋದರೆ ಅಸಮಾನತೆ ಮುಂದುವರೆಯುತ್ತದೆ ಎಂದರು.

    ಅಂಬೇಡ್ಕರ್ ಅವರು 1949ರ ನ. 25ರಂದು ಭಾಷಣ ಮಾಡಿದ್ದರು. 1950ರ ಜನವರಿ 26ರಿಂದ ವೈವಿಧ್ಯತೆಯ ಸಮಾಜಕ್ಕೆ ಕಾಲಿಡುತ್ತೇವೆ ಎಂದು ಹೇಳಿದ್ದರು. ಇಂದು ನಮಗೆ ಸ್ವಾತಂತ್ರ್ಯ ಬಂದಿದೆ. ರಾಜಕೀಯ ಪ್ರಜಾಪ್ರಭುತ್ವ ಸಿಕ್ಕಿದೆ. ಅದು ಯಶಸ್ವಿಯಾಗಲು ಅಸಮಾನತೆಯನ್ನು ತೊಡೆದು ಹಾಕಲೇಬೇಕು. ಆದ್ರೆ ಸ್ವಾತಂತ್ರ್ಯ ಬಂದ ಮೇಲೂ ಅಸಮಾನತೆಯಿಂದ ಜನರು ನರಳುತ್ತಿದ್ದಾರೆ. ಈ ರಾಜಕೀಯ, ಪ್ರಜಾಪ್ರಭುತ್ವ ಗಟ್ಟಿಯಾಗಿ ಉಳಿಯಬೇಕು ಎಂದು ತಿಳಿಸಿದರು.

    ಅಸಮಾನತೆ ಉಳಿದರೆ ಅದರಿಂದ ನರಳುವ ಜನರೇ ಪ್ರಜಾಪ್ರಭುತ್ವದ ಸೌಧ ದ್ವಂಸ ಮಾಡುತ್ತಾರೆ ಎಂದು ಅಂದು ಅಂಬೇಡ್ಕರ್ ಅವರು ಹೇಳಿದ್ದರು. ಸಮಾಜದಲ್ಲಿ ಬಡವರು, ದಲಿತರು, ಮಹಿಳೆಯರು, ಹಿಂದುಳಿದವರು, ವಿಕಲಚೇತನರು ಇದ್ದಾರೆ. ಅವರಿಗೆಲ್ಲ ರಾಜಕೀಯ ಸ್ವಾತಂತ್ರ್ಯದ ಲಾಭ ಸಿಗಬೇಕಲ್ವಾ? ಆ ನಿಟ್ಟಿನಲ್ಲಿ ಉಳ್ಳವರು ಇಲ್ಲದವರ ಸಹಾಯಕ್ಕೆ ಬರಬೇಕು ಎಂದು ಸಿಎಂ ಕರೆ ನೀಡಿದರು.

    Demo
    Share. Facebook Twitter LinkedIn Email WhatsApp

    Related Posts

    ಒಕ್ಕಲಿಗರು- ಲಿಂಗಾಯತರು ರಾಷ್ಟ್ರಮಟ್ಟದಲ್ಲಿ ಓಬಿಸಿಗಳೇ: ಡಿಕೆ ಶಿವಕುಮಾರ್!

    July 6, 2025

    ಮುಸ್ಲಿಮರೇ ಇಲ್ಲದ ಊರಲ್ಲಿ ಮೊಹರಂ ಆಚರಣೆ: ಇದರ ಪ್ರಮುಖ ಕಾರಣ ನೀವು ತಿಳಿಯಲೇಬೇಕು!

    July 6, 2025

    ಪತ್ನಿಗೆ ಚಾಕುವಿನಿಂದ ಇರಿದು ಬರ್ಬರ ಕೊಲೆ..! ಗಂಡ ಎಸ್ಕೇಪ್ – ಅನಾಥವಾಯ್ತು ಮಗು

    July 6, 2025

    KSRTC ಬಸ್ ಮತ್ತು ಕಾರು ನಡುವೆ ಭೀಕರ ಅಪಘಾತ: ಮೂವರು ಸ್ಥಳದಲ್ಲೇ ಸಾವು..!

    July 6, 2025

    ಮಕ್ಕಳ ಹೃದಯದ ಗೆಲುವಿಗಾಗಿ ಸರ್ಕಾರದ ಹೋರಾಟ: ಹಾಸನದಿಂದ ನವ ಚಿಂತನೆ!

    July 6, 2025

    ಪಿಎಂ ವಿಶ್ವಕರ್ಮ ಯೋಜನೆ ಪ್ರಗತಿ ಪರಿಶೀಲನಾ ಸಭೆ

    July 6, 2025

    ಸಿದ್ದರಾಮಯ್ಯ ದೆಹಲಿಗೆ? ನಾಯಕತ್ವ ಬದಲಾವಣೆಗೆ ವೇದಿಕೆ ಸಿದ್ಧ: ವಿಜಯೇಂದ್ರ ಭವಿಷ್ಯ

    July 6, 2025

    ಶಿವಮೊಗ್ಗದಲ್ಲಿ ದೇವರಿಗೆ ಅಪಮಾನ: ಇಬ್ಬರು ಕಿಡಿಗೇಡಿಗಳು ಅರೆಸ್ಟ್..!

    July 6, 2025

    ಚಿಕ್ಕಮಗಳೂರಿನಲ್ಲಿ ಮತ್ತೊಂದು ಹೃದಯಾಘಾತ ದುರಂತ: ಕುಸಿದು ಬಿದ್ದ ವೃದ್ಧ ಸಾವು..!

    July 6, 2025

    ಕೋಲಾರ: ಕೋಮುಲ್‌ ಅಧ್ಯಕ್ಷರಾಗಿ ಶಾಸಕ ಕೆ.ವೈ.ನಂಜೇಗೌಡ ಅವಿರೋಧ ಆಯ್ಕೆ

    July 6, 2025

    ಕೌಟುಂಬಿಕ ಕಲಹ: ದಾವಣಗೆರೆ PSI ತುಮಕೂರಿನಲ್ಲಿ ಆತ್ಮಹತ್ಯೆ..!

    July 6, 2025

    ಹಾರ್ಟ್ ಅಟ್ಯಾಕ್ ಭೂತ: ರಾಜ್ಯದಲ್ಲಿ ಒಂದೇ ದಿನ ಇಬ್ಬರು ಹೃದಯಾಘಾತಕ್ಕೆ ಬಲಿ..!

    July 6, 2025
    © 2025 Copyright � All rights reserved AIN Developed by Notch IT Solutions..
    • Latest Trending news today
    • Trending News in kannada
    • Kannada online news
    • latest trends and news from India and around the world
    • New Kannada news channel
    • latest and breaking news in Kannada
    • Business News Kannada
    • Karnataka news headlines
    • Live Updates on Karnataka
    • flash news in Kannada politics

    Type above and press Enter to search. Press Esc to cancel.