Close Menu
Ain Live News
    Facebook X (Twitter) Instagram YouTube
    Sunday, May 11
    Facebook X (Twitter) Instagram YouTube
    Ain Live News
    Demo
    • Home
    • ಬೆಂಗಳೂರು
    • ಜಿಲ್ಲೆ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಲೈಫ್ ಸ್ಟೈಲ್
    • ಚಲನಚಿತ್ರ
    • ಕ್ರೀಡೆ
    • ತಂತ್ರಜ್ಞಾನ
    • ಕೃಷಿ
    • ಗ್ಯಾಲರಿ
    • ವಿಡಿಯೋ
    • ಜ್ಯೋತಿಷ್ಯ
    Facebook X (Twitter) Instagram YouTube
    Ain Live News

    ಕೃಷಿ, ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಗಳಲ್ಲಿ ತಂತ್ರಜ್ಞಾನದ ಪಾತ್ರ ದೊಡ್ಡದು: ಪ್ರಧಾನಿ ಮೋದಿ

    By Author AINMarch 29, 2024
    Share
    Facebook Twitter LinkedIn Pinterest Email
    Demo

    ಕೃಷಿ, ಶಿಕ್ಷಣ ಮತ್ತು ಆರೋಗ್ಯ ಈ ಮೂರು ಕ್ಷೇತ್ರಗಳಲ್ಲಿ ತಂತ್ರಜ್ಞಾನವು ದೊಡ್ಡ ಪಾತ್ರವನ್ನು ವಹಿಸುತ್ತದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ.

    ಲೋಕೋಪಕಾರಿ ಮತ್ತು ಮೈಕ್ರೋಸಾಫ್ಟ್ ಸಹ-ಸಂಸ್ಥಾಪಕ ಬಿಲ್ ಗೇಟ್ಸ್ ಅವರೊಂದಿಗೆ ದೆಹಲಿಯ ತಮ್ಮ ನಿವಾಸದಲ್ಲಿ ನಡೆಸಿದ ಸಂವಾದದಲ್ಲಿ ಅವರು, ಜಗತ್ತಿನಲ್ಲಿ ಡಿಜಿಟಲ್ ವಿಭಜನೆಯ ಬಗ್ಗೆ ಕೇಳುತ್ತಿದ್ದೇನೆ. ಆದರೆ ಭಾರತದಲ್ಲಿ ಇದು ಸಂಭವಿಸಲು ಬಿಡುವುದಿಲ್ಲ ಎಂದು ಹೇಳಿದ್ದಾರೆ.

    ಗರ್ಭಕಂಠದ ಕ್ಯಾನ್ಸರ್‌ ಗೆ ಕನಿಷ್ಠ ವೆಚ್ಚದಲ್ಲಿ ಲಸಿಕೆಗಳನ್ನು ಅಭಿವೃದ್ಧಿಪಡಿಸಲು ಸ್ಥಳೀಯ ಸಂಶೋಧನೆಗಾಗಿ ವಿಜ್ಞಾನಿಗಳಿಗೆ ಹಣವನ್ನು ವಿನಿಯೋಗಿಸಲು ಮುಂದೆ ಬರಲಿರುವ ತಮ್ಮ ಹೊಸ ಸರ್ಕಾರವು ವಿಶೇಷವಾಗಿ ಎಲ್ಲಾ ವರ್ಗದ ಹುಡುಗಿಯರಿಗೆ ಲಸಿಕೆಯನ್ನು ನೀಡಲು ಶ್ರಮಿಸುತ್ತದೆ ಎಂದಿದ್ದಾರೆ.

    ಸಾರ್ವತ್ರಿಕ ಚುನಾವಣೆಯ ನಂತರ ಸತತ ಮೂರನೇ ಅವಧಿಗೆ ಅಧಿಕಾರಕ್ಕೆ ಮರಳುವ ವಿಶ್ವಾಸ ವ್ಯಕ್ತಪಡಿಸಿರುವ ಮೋದಿ, ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯ ಅಗತ್ಯವಿದೆ, ಭಾರತವು ಈ ನಿಟ್ಟಿನಲ್ಲಿ ಮುನ್ನಡೆಯಲಿದೆ ಎಂದು ಹೇಳಿದರು.

    ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (AI) ವಿಷಯದ ಕುರಿತು ಪ್ರತಿಕ್ರಿಯಿಸಿದ ಮೋದಿ, ಇದನ್ನು ಮಾಂತ್ರಿಕ ಸಾಧನವಾಗಿ ಅಥವಾ ಕೆಲವು ಕೆಲಸಗಳನ್ನು ಮಾಡಲು ಜನರ ಬದಲಿಗೆ ಸೋಮಾರಿ ಸಾಧನವಾಗಿ ನೋಡಬಾರದು ಎಂದಿದ್ದಾರೆ.

    ತಂತ್ರಜ್ಞಾನದ ಪ್ರಜಾಪ್ರಭುತ್ವೀಕರಣದಲ್ಲಿ ನನಗೆ ನಂಬಿಕೆಯಿದೆ, ಅದು ಎಲ್ಲರಿಗೂ ಸಮಾನ ಅವಕಾಶವನ್ನು ನೀಡುತ್ತದೆ. ತಂತ್ರಜ್ಞಾನವನ್ನು ಹಳ್ಳಿಗಳಿಗೆ ಕೊಂಡೊಯ್ಯಬೇಕಾಗಿದೆ ಎಂದು ಸಹ ಹೇಳಿದರು. ತಾವು ತಂತ್ರಜ್ಞಾನಕ್ಕೆ ಆಕರ್ಷಿತನಾದರೂ ಕೂಡ ಅದರ ದಾಸನಲ್ಲ. ನಾನು ಪರಿಣಿತನಲ್ಲ ಆದರೆ ತಂತ್ರಜ್ಞಾನದ ಬಗ್ಗೆ ಮಗುವಿನಂತಹ ಕುತೂಹಲವನ್ನು ಹೊಂದಿದ್ದೇನೆ ಎಂದು ಅವರು ಹೇಳಿದರು, ಭಾರತದಲ್ಲಿ ಡಿಜಿಟಲ್ ಕ್ರಾಂತಿಯ ಬಗ್ಗೆ ಮಾತನಾಡುತ್ತಾ, ಪ್ರಧಾನ ಮಂತ್ರಿ ಅವರು ಅದರ ಮೇಲೆ ಯಾರೂ ಏಕಸ್ವಾಮ್ಯವನ್ನು ಹೊಂದಬಾರದು. ಅದನ್ನು ಸಾಮಾನ್ಯ ಜನರು ನಡೆಸಬೇಕು ಎಂದು ನಂಬುವವನು ನಾನು ಎಂದು ಮೋದಿ ಹೇಳಿದ್ದಾರೆ.

    Post Views: 1

    Demo
    Share. Facebook Twitter LinkedIn Email WhatsApp

    Related Posts

    Gold Rate Today: ಅಪರಂಜಿ ಚಿನ್ನದ ಬೆಲೆ ಮತ್ತೆ ಏರಿಕೆ.! ಇಂದಿನ ಚಿನ್ನ ಬೆಳ್ಳಿ ದರ ಪಟ್ಟಿ ಇಲ್ಲಿದೆ

    May 11, 2025

    ತಂತ್ರಜ್ಞಾನದಲ್ಲಿ ಕ್ರಾಂತಿಕಾರಿ ಬದಲಾವಣೆಗಳು: ಇಲ್ಲಿದೆ ಚಾರ್ಜ್ ಮಾಡದೆ 50 ವರ್ಷಗಳ ಕಾಲ ಕೆಲಸ ಮಾಡುವ ಬ್ಯಾಟರಿ!

    May 11, 2025

    ಭಾರತೀಯ ವಾಯುಪಡೆ ದಾಳಿ: ಪಾಕಿಸ್ತಾನದಲ್ಲಿ ತೈಲ ಬಿಕ್ಕಟ್ಟು – ರಾಜಧಾನಿಯಲ್ಲಿ ಪೆಟ್ರೋಲ್ ಬಂಕ್‌ʼಗಳು ಬಂದ್

    May 10, 2025

    Delhi Airport: ಭಾರತ-ಪಾಕ್ ಪರಿಸ್ಥಿತಿ ಉದ್ವಿಗ್ನಗೊಂಡ ಬೆನ್ನಲ್ಲೇ 138 ವಿಮಾನಗಳ ಹಾರಾಟ ರದ್ದು..!

    May 9, 2025

    RBI Notes: 500 ರೂ. ನೋಟು ಬ್ಯಾನ್? RBI ಗವರ್ನರ್ ಕೊಟ್ರು ಮಹತ್ವದ ಅಪ್ಡೇಟ್..!

    May 9, 2025

    ಜಮ್ಮುವಿನ ಹಲವು ಪ್ರದೇಶಗಳ ಮೇಲೆ ಕ್ಷಿಪಣಿ ದಾಳಿ: ಪಾಕ್ ರಾಕೆಟ್ ಗಳನ್ನು ಹೊಡೆದುರುಳಿಸಿದ ಭಾರತ!

    May 9, 2025

    ಭಾರತದ ಮಿಸೈಲ್‌ ದಾಳಿಗೆ ಪಾಕ್‌ ಪ್ರಧಾನಿ ಶೇಕ್.. ಶೆಹಬಾಜ್‌ ಶರೀಫ್ ಮನೆ ಬಳಿಯೇ ದಾಳಿ!

    May 9, 2025

    Credit Card: ಪೇ ಸ್ಲಿಪ್ ಇಲ್ಲದೆ ಕ್ರೆಡಿಟ್ ಕಾರ್ಡ್ ಪಡೆಯುವುದು ಹೇಗೆ..? ಇಲ್ಲಿದೆ ಮಾಹಿತಿ

    May 8, 2025

    Gold Silver Price Today: ಮತ್ತೆ ಏರಿದ ಚಿನ್ನದ ದರ: ರಾಜ್ಯದ ಪ್ರಮುಖ ನಗರಗಳಲ್ಲಿ ಇಂದಿನ ಬೆಳ್ಳಿ – ಬಂಗಾರ ಬೆಲೆ ಹೀಗಿದೆ!

    May 8, 2025

    ಐಪಿಒ ಮೂಲಕ ₹ 1,900 ಕೋಟಿ ಸಂಗ್ರಹಿಸಲು ಕರಡು ಪ್ರಸ್ತಾವ ಸಲ್ಲಿಸಿದ ಅರ್ಬನ್‌ ಕಂಪನಿ

    May 7, 2025

    ಪಾಕ್ ವಿರುದ್ಧ “ಆಪರೇಷನ್ ಸಿಂಧೂರ”: ಬೆಂಗಳೂರಿನಿಂದ 5 ರಾಜ್ಯಗಳಿಗೆ ತೆರಳಬೇಕಿದ್ದ ವಿಮಾನಗಳು ರದ್ದು!

    May 7, 2025

    Indian Passport Holders: ಭಾರತೀಯ ಪ್ರಯಾಣಿಕರು ವೀಸಾ ಇಲ್ಲದೆ ಈ 58 ದೇಶಗಳಿಗೆ ಭೇಟಿ ನೀಡಬಹುದು..!

    May 7, 2025
    © 2025 Copyright � All rights reserved AIN Developed by Notch IT Solutions..
    • Latest Trending news today
    • Trending News in kannada
    • Kannada online news
    • latest trends and news from India and around the world
    • New Kannada news channel
    • latest and breaking news in Kannada
    • Business News Kannada
    • Karnataka news headlines
    • Live Updates on Karnataka
    • flash news in Kannada politics

    Type above and press Enter to search. Press Esc to cancel.