ಚಿಕ್ಕಮಗಳೂರು ಜಿಲ್ಲೆಯಲ್ಲಿ ಬೆಳೆಯಬಹುದಾದ ವಿವಿಧ ಅಪ್ರಧಾನ ಹಣ್ಣು (Exotic fruits) ಗಳ ಬೇಸಾಯದ ಬಗ್ಗೆ ರೈತರಿಗೆ ತೋಟಗಾರಿಕೆ ಇಲಾಖೆ ವತಿಯಿಂದ ಒಂದು ದಿನದ ಕಾರ್ಯಗಾರವನ್ನು ಮೂಡಿಗೆರೆ ತಾಲೂಕಿನಲ್ಲಿ ಆಯೋಜಿಸಲಾಗಿದೆ.
ಕೃಷಿ ವಿಜ್ಞಾನ ಕೇಂದ್ರ, ಮೂಡಿಗೆರೆಯಲ್ಲಿ ವಿವಿಧ ಅಪ್ರಧಾನ ಹಣ್ಣು (Exotic fruits) ಗಳ ಬೇಸಾಯದ ಬಗ್ಗೆ ಒಂದು ದಿನದ ಕಾರ್ಯಗಾರ ನಡೆಯಲಿದೆ. ದಿನಾಂಕ: 26-08-2024ರಂದು ನಡೆಯುತ್ತಿದ್ದು ಬೆಳಿಗ್ಗೆ 10.30ಕ್ಕೆ ಕಾರ್ಯಕ್ರಮಕ್ಕೆ ಚಾಲನೆ ದೊರೆಯಲಿದೆ.
ವಿವಿಧ ಅಪ್ರಧಾನ ಹಣ್ಣು (Exotic fruits): ಡ್ರ್ಯಾಗನ್ ಫ್ರೂಟ್, ಕಿವಿ ಫ್ರೂಟ್, ಬೆಣ್ಣೆ ಹಣ್ಣು, ಲಿಚಿ ಹಾಗೂ ಇತ್ಯಾದಿ ಹಣ್ಣುಗಳ ಬಗ್ಗೆ ಒಂದು ದಿನದ ಕಾರ್ಯಗಾರವನ್ನು ಹಮ್ಮಿಕೊಳ್ಳಲಾಗಿದೆ.
ಹೆಚ್ಚಿನ ಮಾಹಿತಿಗಾಗಿ ತೋಟಗಾರಿಕೆ ಇಲಾಖೆ ಮೂಡಿಗೆರೆ ಇವರನ್ನ ಸಂಪರ್ಕಿಸಬಹುದಾಗಿದ್ದು ಆಸಕ್ತ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಈ ಕಾರ್ಯಕ್ರಮದ ಪ್ರಯೋಜನ ಪಡೆದುಕೊಳ್ಳಲು ಕೋರಲಾಗಿದೆ.