ರಾಜ್ಯ ವಿದ್ಯುತ್ ಸರಬರಾಜು ಕಂಪನಿಗಳ ಪ್ರಕಟಣೆಯನ್ವಯ ಹೊಸದಾಗಿ ಕೃಷಿ ಜಮೀನನ್ನು ಖರೀದಿ ಮಾಡಿದವರು ಮತ್ತು ಮರಣ ಹೊಂದಿದವರ ಹೆಸರಿನಲ್ಲಿ RR ಸಂಖ್ಯೆಯನ್ನು ಹೊಂದಿರುವವರು ತಮ್ಮ ಹೆಸರಿಗೆ RR ಸಂಖ್ಯೆಯನ್ನು ಕಡ್ಡಾಯವಾಗಿ ಬದಲಾವಣೆ ಮಾಡಿಕೊಳ್ಳುವಂತೆ ಸೂಚನೆ ನೀಡಲಾಗಿದೆ.
ರಾಜ್ಯ ವಿದ್ಯುತ್ ಸರಬರಾಜು ಕಂಪನಿಯಿಂದ ಕೃಷಿ ಪಂಪ್ ಸೆಟ್ ಹೊಂದಿರುವ ರೈತರಿಗೆ ನೂತನ ಆದೇಶವನ್ನು ಹೊರಡಿಸಲಾಗಿದೆ.ಈ ಕ್ರಮದಿಂದ ರೈತರಿಗೆ ಕೃಷಿ ಪಂಪ್ ಸೆಟ್ ವಿದ್ಯುತ್ ಬಿಲ್ ಪಾವತಿಯ ಅರ್ಥಿಕವಾಗಿ ಹೊರೆ ತಪ್ಪುವುದರಿಂದ ಬೆಳೆಗಳನ್ನು ಬೆಳೆಯ ತಗಲುವ ವೆಚ್ಚ ಕಡಿಮೆ ಮಾಡಿದಂತಾಗುತ್ತದೆ.
ಸಂಖ್ಯೆಯ ಹೆಸರು ಬದಲಾವಣೆಗೆ ಎಲ್ಲಿ ಅರ್ಜಿ ಸಲ್ಲಿಸಬೇಕು?
ಗ್ರಾಹಕರು/ರೈತರು RR ಸಂಖ್ಯೆಯ ಹೆಸರು ಬದಲಾವಣೆಗೆ ನಿಮ್ಮ ಹಳ್ಳಿಯ ಲೈನ್ ಮ್ಯಾನ್ ಅವರವನ್ನು ನೇರವಾಗಿ ಭೇಟಿ ಮಾಡಿ ಅಗತ್ಯ ದಾಖಲಾತಿಗಳನ್ನು ಒದಗಿಸಿ ಅರ್ಜಿ ಸಲ್ಲಿಸಬಹುದು ಅಥವಾ ನಿಮ್ಮ ಹೋಬಳಿ/ಹತ್ತಿರ ವಿದ್ಯುತ್ ಸರಬರಾಜು ಕಂಪನಿ(KEB) ಕಚೇರಿಯನ್ನು ಭೇಟಿ ಮಾಡಿ ಕೃಷಿ ಪಂಪ್ ಸೆಟ್ ನ RR ಸಂಖ್ಯೆ ಹೆಸರು ಬದಲಾವಣೆಗೆ ಅರ್ಜಿ ಸಲ್ಲಿಸಬಹುದು.
ಅರ್ಜಿ ಸಲ್ಲಿಸಲು ಅಗತ್ಯ ದಾಖಲೆಗಳು?
1) ಅರ್ಜಿದಾರರ ಆಧಾರ್ ಕಾರ್ಡ.
2) ಅರ್ಜಿದಾರರ ಪೋಟೋ.
3) RR ಸಂಖ್ಯೆ ವಿವರ.
4) ಮೊಬೈಲ್ ಸಂಖ್ಯೆ.
5) ಅರ್ಜಿ ನಮೂನೆ.