Close Menu
Ain Live News
    Facebook X (Twitter) Instagram YouTube
    Monday, May 19
    Facebook X (Twitter) Instagram YouTube
    Ain Live News
    Demo
    • Home
    • ಬೆಂಗಳೂರು
    • ಜಿಲ್ಲೆ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಲೈಫ್ ಸ್ಟೈಲ್
    • ಚಲನಚಿತ್ರ
    • ಕ್ರೀಡೆ
    • ತಂತ್ರಜ್ಞಾನ
    • ಕೃಷಿ
    • ಗ್ಯಾಲರಿ
    • ವಿಡಿಯೋ
    • ಜ್ಯೋತಿಷ್ಯ
    Facebook X (Twitter) Instagram YouTube
    Ain Live News

    IND vs SA: ಇಂದು ಭಾರತ ಮತ್ತು ಆಫ್ರಿಕಾ ನಡುವಿನ ಕೊನೆ ಟಿ20 ಪಂದ್ಯ! ಎಷ್ಟು ಗಂಟೆಗೆ ಆರಂಭ? ಇಲ್ಲಿದೆ ಮಾಹಿತಿ

    By AINNovember 15, 2024
    Share
    Facebook Twitter LinkedIn Pinterest Email
    Demo

    ಇಂದು  ವ್ಯಾಂಡರರ್ಸ್ ಕ್ರೀಡಾಂಗಣದಲ್ಲಿ ನಡೆಯಲಿರುವ 4ನೇ ಹಾಗೂ ಅಂತಿಮ ಟಿ20 ಪಂದ್ಯದಲ್ಲಿ ಗೆಲುವಿನ ನಗಾರಿ ಬಾರಿಸಲು ಸಜ್ಜಾಗಿದೆ. ರಿಂಕು ಸಿಂಗ್‌ ಬ್ಯಾಟಿಂಗ್ ಕ್ರಮಾಂಕ ಹಾಗೂ ಅವರ ಪಾತ್ರದ ಬಗ್ಗೆ ಹೆಚ್ಚು ಸ್ಪಷ್ಟನೆ ಸಿಗಬೇಕಿದೆ. ಭಾರತ ಟಿ20 ತಂಡದಲ್ಲಿ ಬಹುಕಾಲ ಉಳಿಯಬಲ್ಲ ಆಟಗಾರ ಎಂದು ಗುರುತಿಸಿಕೊಂಡಿರುವ ರಿಂಕು, ಮೊದಲೆರಡು ಪಂದ್ಯಗಳಲ್ಲಿ 6ನೇ ಹಾಗೂ ಕಳೆದ ಪಂದ್ಯದಲ್ಲಿ 7ನೇ ಕ್ರಮಾಂಕದಲ್ಲಿ ಆಡಿದ್ದರು.

    3 ಇನ್ನಿಂಗ್ಸ್‌ಗಳಿಂದ ಕೇವಲ 28 ರನ್ ಗಳಿಸಲು ರಿಂಕು, 34 ಎಸೆತಗಳನ್ನು ತೆಗೆದುಕೊಂಡಿದ್ದಾರೆ ಎನ್ನುವ ಅಂಶ ತಂಡದ ಆಡಳಿತವನ್ನು ಗೊಂದಲಕ್ಕೆ ಸಿಲುಕಿಸಬಹುದು. ಜೊತೆಗೆ ರಿಂಕುರ ಮನದಲ್ಲೂ ಆತಂಕ ಮೂಡಿಸಿರಬಹುದು. ಈ ಪಂದ್ಯದಲ್ಲಿ ಅವರ ಬ್ಯಾಟ್‌ನಿಂದ ಸ್ಫೋಟಕ ಇನ್ನಿಂಗ್ಸ್ ಮೂಡಿಬರಬಹುದೇ ಎನ್ನುವ ಕುತೂಹಲವಿದೆ.

    ರೈತರೇ ಗಮನಿಸಿ.. ಕಡಿಮೆ ಬಂಡವಾಳ, ಅಧಿಕ ಲಾಭ! ಈ ಬೆಳೆಯಿಂದ ಲಕ್ಷಗಟ್ಟಲೆ ಲಾಭ ಪಡೆಯಬಹುದು!

    ಮತ್ತೊಂದೆಡೆ, ಬೌಲರ್‌ಗಳು ಸುಧಾರಿತ ಪ್ರದರ್ಶನ ತೋರಿದರೆ ಸರಣಿ ಗೆಲುವಿನ ಹಾದಿ ಸುಗಮಗೊಳ್ಳಬಹುದು. ಅರ್ಶದೀಪ್ ಸಿಂಗ್ ಹಾಗೂ ವರುಣ್ ಚಕ್ರವರ್ತಿ ಮೇಲೆ ಹೆಚ್ಚಿನ ಜವಾಬ್ದಾರಿ ಇರಲಿದೆ. ಇನ್ನು, ಅವಕಾಶಕ್ಕಾಗಿ ಕಾಯುತ್ತಿರುವ ವೇಗಿಗಳಾದ ವೈಶಾಖ್ ವಿಜಯ್‌ ಕುಮಾರ್ ಹಾಗೂ ಯಶ್ ದಯಾಳ್‌ಗೆ ಭಾರತ ತಂಡದ ಕ್ಯಾಪ್ ದೊರೆಯುತ್ತಾ ಎನ್ನುವುದನ್ನು ಕಾದು ನೋಡಬೇಕು.

    ಆತಿಥೇಯ ದಕ್ಷಿಣ ಆಫ್ರಿಕಾ, ಭಾರತೀಯ ಸ್ಪಿನ್ನರ್ ಗಳ ಎದುರು ರನ್ ಗಳಿಸಲು ಪರದಾಡುತ್ತಿದೆ. ಸದ್ಯ ಸರಣಿಯಲ್ಲಿ ಆಡುತ್ತಿರುವ ಹಲವು ಆಟಗಾರರು 2026ರಲ್ಲಿ ಭಾರತದಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ಗೆ ತಂಡದಲ್ಲಿ ಸ್ಥಾನ ಪಡೆಯಬಹುದು. ಹೀಗಾಗಿ, ಈ ಸರಣಿ ಅವರಿಗೆಲ್ಲ ಉತ್ತಮ ಪಾಠವಾಗಲಿದೆ. ಸದ್ಯಕ್ಕೆ ತವರಿನಲ್ಲಿ ಸರಣಿ ಸೋಲಿನ ಮುಖಭಂಗದಿಂದ ಪಾರಾಗುವುದು ಹರಿಣ ಪಡೆಯ ಮುಂದಿರುವ ಬಹುದೊಡ್ಡ ಗುರಿ.

    ಸಂಭವನೀಯ ಆಟಗಾರರ ಪಟ್ಟಿ

    ಭಾರತ: ಸಂಜು ಸ್ಯಾಮನ್, ಅಭಿಷೇಕ್ ಶರ್ಮಾ, ತಿಲಕ್ ವರ್ಮಾ, ಸೂರ್ಯಕುಮಾರ್ ಯಾದವ್ (ನಾಯಕ), ಹಾರ್ದಿಕ್ ಪಾಂಡ್ಯ, ರಿಂಕು ಸಿಂಗ್, ರಮಣ್ ದೀಪ್, ಅಕ್ಷರ್ ಪಟೇಲ್, ರವಿ ಬಿಷ್ಣೋಯಿ, ವರುಣ್ ಚಕ್ರವರ್ತಿ, ಅರ್ಶ್‌ದೀಪ್ ಸಿಂಗ್.

    ದಕ್ಷಿಣ ಆಫ್ರಿಕಾ: ರಿಕಲ್ಟನ್, ರೀಜಾ ಹೆಂಡ್ರಿಕ್ಟ್, ಏಯ್ಡನ್ ಮಾರ್ಕರಮ್ (ನಾಯಕ), ಟ್ರಿಸ್ಟನ್ ಸ್ಟಬ್ಸ್, ಹೆನ್ರಿಚ್ ಕ್ಲಾಸೆನ್, ಡೇವಿಡ್ ಮಿಲ್ಲರ್, ಮಾರ್ಕೊ ಯಾನ್ಸನ್, ಗೆರಾಲ್ಡ್ ಕೋಟ್ಜಿ/ ಎನ್‌ಕಾಬಾಯೋಮಿ ಪೀಟ‌, ಸಿಮಿಲಾನೆ, ಕೇಶವ್ ಮಹರಾಜ್, ಸಿಪಾಮ್ಹಾ.

    ಪಂದ್ಯ: ಸಂಜೆ. 8:30ಕ್ಕೆ
    ಪ್ರಸಾರ: ಸ್ಟಾರ್ ಸ್ಪೋರ್ಟ್ಸ್, ಜಿಯೋ ಸಿನಿಮಾ

    Post Views: 1

    Demo
    Share. Facebook Twitter LinkedIn Email WhatsApp

    Related Posts

    ಡೆಲ್ಲಿ ವಿರುದ್ಧ ಗೆದ್ದು ಬೀಗಿದ ಗುಜರಾತ್: ಪ್ಲೇ ಆಫ್ ಗೆ RCB, ಪಂಜಾಬ್, ಜಿಟಿ ಎಂಟ್ರಿ!

    May 19, 2025

    IPL 2025: ಬೆಂಗಳೂರಿನಲ್ಲಿ ಮಳೆಗೆ ಬಲಿಯಾಯ್ತು RCB Vs KKR ಮ್ಯಾಚ್.. ಟೂರ್ನಿಯಿಂದ ಹೊರಬಿದ್ದ ಕೋಲ್ಕತ್ತ!

    May 18, 2025

    ಮಳೆಗಾಹುತಿಯಾದ RCB ಮ್ಯಾಚ್: ವೈಟ್ ಜರ್ಸಿಯಲ್ಲಿ ಮಿಂದೆದ್ದ ಫ್ಯಾನ್ಸ್.. ಭಾವುಕರಾದ ವಿರಾಟ್ ಕೊಹ್ಲಿ!

    May 18, 2025

    ಚಿನ್ನಸ್ವಾಮಿ ಕ್ರೀಡಾಂಗಣ ಸುತ್ತಮುತ್ತ ಮಳೆ ಆರ್ಭಟ: RCB Vs KKR ಪಂದ್ಯ ರದ್ದು!? ಫ್ಯಾನ್ಸ್ ಬೇಸರ!

    May 17, 2025

    ನಾನು ಭಾರತಕ್ಕೆ ಬರುತ್ತೇನೆ ಎಂದ ABD.. RCB ಫ್ಯಾನ್ಸ್ ದಿಲ್ ಖುಷ್!

    May 17, 2025

    IPL 2025: ಜಸ್ಟ್ 5 ಓವರ್ ಗೆ ಸೀಮಿತವಾಗುತ್ತಾ ಆರ್‌ಸಿಬಿ, ಕೆಕೆಆರ್‌ ಪಂದ್ಯ!

    May 17, 2025

    IPL 2025: ಆರ್ ಸಿಬಿ ಅಭಿಮಾನಿಗಳಿಗೆ ಬ್ಯಾಡ್ ನ್ಯೂಸ್: ಪಂದ್ಯ ನಡೆಯೋದು ಡೌಟ್!

    May 17, 2025

    IPL 2025: RCB vs KKR ಸೆಣಸಾಟಕ್ಕೆ ಕ್ಷಣಗಣನೆ: ಬೆಂಗಳೂರಿನ ಪ್ಲೇಯಿಂಗ್ XI ನಲ್ಲಿ ಅನಿರೀಕ್ಷಿತ ಬದಲಾವಣೆಗಳು?

    May 17, 2025

    Sanjiv Goenka: ತಿಮ್ಮಪ್ಪನಿಗೆ 3.63 ಕೋಟಿ ಮೌಲ್ಯದ ಚಿನ್ನದ ಆಭರಣ ನೀಡಿದ ಲಕ್ನೋ IPL ಟೀಂ ಮಾಲೀಕ..!

    May 17, 2025

    IPL 2025: ಇಂದು RCB ಮ್ಯಾಚ್: ಚಿನ್ನಸ್ವಾಮಿ ಸ್ಟೇಡಿಯಂ ಸುತ್ತಮುತ್ತ ಬಾಂಬ್ ಸ್ಕ್ವಾಡ್‌ʼನಿಂದ ಭದ್ರತೆ ಪರಿಶೀಲನೆ

    May 17, 2025

    IPL 2025: RCB ಅಭಿಮಾನಿಗಳೇ ಗಮನಿಸಿ..ಇಂದು ಮಧ್ಯಾಹ್ನ 3 ಗಂಟೆಯಿಂದ ಈ ರಸ್ತೆಯಲ್ಲಿ ಸಂಚಾರ ಬದಲಾವಣೆ..!

    May 17, 2025

    IPL 2025: ಇಂದು ಕೆಕೆಆರ್ vs ಆರ್ಸಿಬಿ ಹೈವೋಲ್ಟೇಜ್ ಪಂದ್ಯ: 10 ವರ್ಷಗಳ ಇತಿಹಾಸವನ್ನು ಬದಲಾಯಿಸಲು RCB ಸಿದ್ಧ..!

    May 17, 2025
    © 2025 Copyright � All rights reserved AIN Developed by Notch IT Solutions..
    • Latest Trending news today
    • Trending News in kannada
    • Kannada online news
    • latest trends and news from India and around the world
    • New Kannada news channel
    • latest and breaking news in Kannada
    • Business News Kannada
    • Karnataka news headlines
    • Live Updates on Karnataka
    • flash news in Kannada politics

    Type above and press Enter to search. Press Esc to cancel.