Close Menu
Ain Live News
    Facebook X (Twitter) Instagram YouTube
    Friday, May 9
    Facebook X (Twitter) Instagram YouTube
    Ain Live News
    Demo
    • Home
    • ಬೆಂಗಳೂರು
    • ಜಿಲ್ಲೆ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಲೈಫ್ ಸ್ಟೈಲ್
    • ಚಲನಚಿತ್ರ
    • ಕ್ರೀಡೆ
    • ತಂತ್ರಜ್ಞಾನ
    • ಕೃಷಿ
    • ಗ್ಯಾಲರಿ
    • ವಿಡಿಯೋ
    • ಜ್ಯೋತಿಷ್ಯ
    Facebook X (Twitter) Instagram YouTube
    Ain Live News

    Crime News: ಬೆಂಗಳೂರಲ್ಲಿ ಉಗ್ರ ಕೃತ್ಯಗಳಿಗೆ ಸಂಚು: ರವಾಂಡದಲ್ಲಿ ತಲೆಮರೆಸಿಕೊಂಡಿದ್ದ ಲಷ್ಕರ್ ಉಗ್ರ ಅರೆಸ್ಟ್!

    By AIN AdminNovember 29, 2024
    Share
    Facebook Twitter LinkedIn Pinterest Email
    Demo

    ಬೆಂಗಳೂರು: ಬೆಂಗಳೂರಿನಲ್ಲಿ ಉಗ್ರ ಕೃತ್ಯಗಳಿಗೆ ಸ್ಫೋಟಕ ಸಂಗ್ರಹಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ರವಾಂಡದಲ್ಲಿ ತಲೆಮರೆಸಿಕೊಂಡಿದ್ದ ಪ್ರಮುಖ ಆರೋಪಿ ಭಾರತಕ್ಕೆ ಹಸ್ತಾಂತರ ಮಾಡಲಾಗಿದೆ. ಸಲ್ಮಾನ್‌ ಖಾನ್ ಬಂಧಿತ ಉಗ್ರ. ರುವಾಂಡಾ ತನಿಖಾ ಬ್ಯೂರೋ, ಇಂಟರ್‌ಪೋಲ್ ಮತ್ತು ರಾಷ್ಟ್ರೀಯ ಕೇಂದ್ರ ಬ್ಯೂರೋಗಳ ಸಹಯೋಗದೊಂದಿಗೆ ಬುಧವಾರ ರುವಾಂಡಾದ ರಾಜಧಾನಿ ಕಿಗಾಲಿಯಲ್ಲಿ ಬಂಧನ ಮಾಡಲಾಗಿದೆ. ಇಂದು ರುವಾಂಡ ಉಗ್ರನನ್ನು ಭಾರತಕ್ಕೆ ಹಸ್ತಾಂತರಿಸಿದೆ.

    ಬೆಂಗಳೂರು ಜೈಲಿನಲ್ಲಿದ್ದುಕೊಂಡೇ ಸಹ ಕೈದಿಗಳನ್ನು ಸೆಳೆದು ಉಗ್ರ ಚಟುವಟಿಕೆಗೆ ಬಳಕೆ ಮಾಡಿದ ಪ್ರಕರಣದಲ್ಲಿ ಸಲ್ಮಾನ್ ಆರೋಪಿಯಾಗಿದ್ದಾನೆ. ಈತ ಉಗ್ರರಿಗೆ ಸ್ಫೋಟಕಗಳನ್ನು ಪೂರೈಸುವ ಮೂಲಕ ದುಷ್ಕೃತ್ಯಗಳಿಗೆ ಸಹಕಾರ ನೀಡುತ್ತಿದ್ದ.

    ಅಂಚೆ ಕಚೇರಿಯಲ್ಲಿ “ಪ್ರೀಮಿಯಂ ಉಳಿತಾಯ ಖಾತೆ” ತೆರೆಯುವುದು ಹೇಗೆ.? ಪ್ರಯೋಜನಗಳೇನು.? ಇಲ್ಲಿದೆ ಮಾಹಿತಿ

    ಪೋಸ್ಕೋ ಕೃತ್ಯ ಎಸಗಿ ಸಲ್ಮಾನ್‌ ಬೆಂಗಳೂರು ಜೈಲು ಸೇರಿದ್ದ. 2018 ಮತ್ತು 2022 ರ ಜೈಲುವಾಸದ ಅವಧಿಯಲ್ಲಿ ಜಿವಾವಾಧಿ ಶಿಕ್ಷೆಗೆ ಒಳಗಾಗಿದ್ದ ಉಗ್ರ ನಾಸೀರ್ ಸಂಪರ್ಕಕ್ಕೆ ಈತ ಬಂದಿದ್ದ. ಈತನ ಮಾತಿಗೆ ಮರುಳಾಗಿ ಮೂಲಭೂತವಾದ ಕಡೆಗೆ ಆಕರ್ಷಿತನಾಗಿದ್ದ. ಅಷ್ಟೇ ಅಲ್ಲದೇ ಸಹ ಕೈದಿಗಳನ್ನು ಸೆಳೆದು ಅವರನ್ನು ಉಗ್ರರನ್ನಾಗಿ ರೂಪಿಸುತ್ತಿದ್ದ.‌

    ಜೈಲಿನಿಂದ ಬಿಡುಗಡೆಯಾದ ಬಳಿಕ ಆತ ಉಗ್ರರ ಸಂಪರ್ಕ ಸಾಧಿಸಿ ಅವರಿಗೆ ಶಸ್ತ್ರಾಸ್ತ್ರಗಳು, ಮದ್ದುಗುಂಡುಗಳು ಮತ್ತು ಸ್ಫೋಟಕಗಳ ಸಂಗ್ರಹಣೆ ಮತ್ತು ವಿತರಣೆ ಮಾಡುವ ಮೂಲಕ ಸಹಕಾರ ನೀಡುತ್ತಿದ್ದ. ಭಯೋತ್ಪಾದನಾ ಕೃತ್ಯದಲ್ಲಿ ತನ್ನ ಹೆಸರು ಬೆಳಕಿಗೆ ಬರುತ್ತಿದ್ದಂತೆ ಸಲ್ಮಾನ್‌ ಭಾರತದಿಂದ ಪರಾರಿಯಾಗಿದ್ದ.

    ಕಳೆದ ವರ್ಷದ ಅಕ್ಟೋಬರ್ 25 ರಂದು ಬೆಂಗಳೂರು ಜೈಲಿನಲ್ಲಿದ್ದುಕೊಂಡೇ ಸಹ ಕೈದಿಗಳನ್ನು ಸೆಳೆದು ಉಗ್ರ ಚಟುವಟಿಕೆಗೆ ಬಳಕೆ ಮಾಡಿದ ಪ್ರಕರಣದ ತನಿಖೆಯನ್ನು ಸಿಸಿಬಿಯಿಂದ ಎನ್‌ಐಎ ವಹಿಸಿಕೊಂಡಿತ್ತು. ಸಲ್ಮಾನ್ ವಿರುದ್ಧ ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆ (ಯುಎಪಿಎ) ಶಸ್ತ್ರಾಸ್ತ್ರ ಕಾಯ್ದೆ ಮತ್ತು ಸ್ಫೋಟಕ ವಸ್ತುಗಳ ಕಾಯ್ದೆಯಡಿ ಆರೋಪ ಹೊರಿಸಿ ಪ್ರಕರಣ ದಾಖಲಿಸಲಾಗಿತ್ತು.

    ಈ ವರ್ಷ ಆಗಸ್ಟ್ 2 ರಂದು ಎನ್ಐಎ ಕೋರಿಕೆಯ ಮೇರೆಗೆ ಇಂಟರ್‌ಪೋಲ್‌ ರೆಡ್‌ ಕಾರ್ನರ್‌ ನೋಟಿಸ್‌ ಜಾರಿ ಮಾಡಿತ್ತು. ಈ ನೋಟಿಸ್‌ ಹಿನ್ನೆಲೆಯಲ್ಲಿ ರುವಾಂಡಾದ ಅಧಿಕಾರಿಗಳು ಸಲ್ಮಾನ್‌ನನ್ನು ಬಂಧಿಸಿ ಭಾರತೀಯ ತನಿಖಾ ಸಂಸ್ಥೆಗೆ ಹಸ್ತಾಂತರಿಸಿದ್ದಾರೆ. 2024 ರಲ್ಲಿ ಇಂಟರ್‌ಪೋಲ್ ಒಳಗೊಂಡಂತೆ ಸಂಘಟಿತ ಪ್ರಯತ್ನದ ಮೂಲಕ ದೇಶ ಬಿಟ್ಟು ಪರಾರಿಯಾಗಿದ್ದ 26 ಮಂದಿಯನ್ನು ಭಾರತಕ್ಕೆ ತನಿಖಾ ಸಂಸ್ಥೆಗಳು ಕರೆತಂದಿವೆ.

     

    Demo
    Share. Facebook Twitter LinkedIn Email WhatsApp

    Related Posts

    ಆಪರೇಷನ್ ಸಿಂಧೂರ: ಇದು ಆರಂಭ ಅಷ್ಟೇ.. ರಾಜನಾಥ್ ಸಿಂಗ್ ಮಹತ್ವದ ಸುಳಿವು!

    May 8, 2025

    IPL 2025: ಕ್ರಿಕೆಟ್ ಪ್ರಿಯರಿಗೆ ಶಾಕಿಂಗ್ ಸುದ್ದಿ: IPL ರದ್ದು!?

    May 8, 2025

    Operation Sindoor: ಬೆಂಗಳೂರಿಗರೇ ಗಮನಿಸಿ.. ಚಿನ್ನಸ್ವಾಮಿ ಸ್ಟೇಡಿಯಂ ಸುತ್ತ ಬಿಗಿ ಭದ್ರತೆ: 70ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ ನಿಯೋಜನೆ

    May 8, 2025

    Operation Sindoor: ಪ್ರತಿಯೊಂದಕ್ಕೂ ಆಧಾರ ಕೇಳ್ತಿದ್ದವರು ಯಾಕೋ ಸೈಲೆಂಟ್‌ ಆಗ್ಯಾರ: ʻಕೈʼ ನಾಯಕರ ಕಾಲೆಳೆದ ಕಾರಜೋಳ

    May 8, 2025

    ಆಪರೇಷನ್ ಸಿಂಧೂರ್ ದಾಳಿ: ಓ ದೇವರೇ, ಇಂದು ನಮ್ಮನ್ನು ರಕ್ಷಿಸು: ಸಂಸತ್ತಿನಲ್ಲಿ ಕಣ್ಣೀರಿಟ್ಟ ಪಾಕ್ ಸಂಸದ

    May 8, 2025

    ಸಂಜೆ 5:30ಕ್ಕೆ ಭಾರತದ ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಶ್ರಿ ಪತ್ರಿಕಾಗೋಷ್ಠಿ

    May 8, 2025

    ಆಪರೇಷನ್ ಸಿಂಧೂರ್: ರಾಜಕೀಯ, ಪಕ್ಷ ಭೇದ ಬಿಟ್ಟು ಒಗ್ಗಟ್ಟಾಗಿ ಕೆಲಸ ಮಾಡುತ್ತೇವೆ: ಸಚಿವ ಜಿ.ಪರಮೇಶ್ವರ್

    May 8, 2025

    ಆಪರೇಷನ್‌ ಸಿಂಧೂರ: ಗಟ್ಟಿಗಿತ್ತಿ ಕರ್ನಲ್ ಸೋಫಿಯಾ ಬೆಳಗಾವಿ ಸೊಸೆ- ಮನೆಯಲ್ಲಿ ಸಂಭ್ರಮವೋ ಸಂಭ್ರಮ

    May 8, 2025

    ಭಾರತೀಯ ಸಿಂಧೂರದ ಮಹತ್ವ ಸಾರಿದೆ AIR STRIKE: ಮಹೇಶ ಟೆಂಗಿನಕಾಯಿ ಬಣ್ಣನೆ

    May 8, 2025

    ಅಮೃತಸರದ ಗೋಲ್ಡನ್‌ ಟೆಂಪಲ್ ಮೇಲೆ ಪಾಪಿ ಪಾಕ್ ಕಣ್ಣು..ಪಾಕಿಸ್ತಾನ ಸೇನೆ ಕೃತ್ಯ ವಿಫಲಗೊಳಿಸಿದ ಭಾರತೀಯ ಸೇನೆ!

    May 8, 2025

    India-Pakistan: ಪಾಕಿಸ್ತಾನದ ಕ್ಷಿಪಣಿಯನ್ನು ಆಕಾಶದಲ್ಲಿಯೇ ಉಡೀಸ್‌ ಮಾಡಿದ ಭಾರತೀಯ ಸೇನೆ..!

    May 8, 2025

    ಭಾರತದ‌ ಮೇಲೆ ಪಾಪಿ ಪಾಕ್ ದಾಳಿ ವಿಫಲ..ಆ 15 ನಗರಗಳು ಟಾರ್ಗೆಟ್‌ ಮಾಡಿದ್ದೇಕೆ?

    May 8, 2025
    © 2025 Copyright � All rights reserved AIN Developed by Notch IT Solutions..
    • Latest Trending news today
    • Trending News in kannada
    • Kannada online news
    • latest trends and news from India and around the world
    • New Kannada news channel
    • latest and breaking news in Kannada
    • Business News Kannada
    • Karnataka news headlines
    • Live Updates on Karnataka
    • flash news in Kannada politics

    Type above and press Enter to search. Press Esc to cancel.