Close Menu
Ain Live News
    Facebook X (Twitter) Instagram YouTube
    Monday, June 23
    Facebook X (Twitter) Instagram YouTube
    Ain Live News
    Demo
    • Home
    • ಬೆಂಗಳೂರು
    • ರಾಜಕೀಯ
    • ಜಿಲ್ಲೆ
    • ಸಿನಿಮಾ
    • ಲೈಫ್ ಸ್ಟೈಲ್
    • ಜ್ಯೋತಿಷ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಕ್ರೀಡೆ
    • ತಂತ್ರಜ್ಞಾನ
    • ಕೃಷಿ
    • ಗ್ಯಾಲರಿ
    • ವಿಡಿಯೋ
    Facebook X (Twitter) Instagram YouTube
    Ain Live News

    ಚಳಿಗಾಲದಲ್ಲಿ ಬೆಡ್ ಶೀಟ್ ಮುಚ್ಚಿಕೊಂಡು ಮಲಗುತ್ತೀರಾ? ಹುಷಾರ್, ಇದು ಡೇಂಜರ್ ಅಂತಿದ್ದಾರೆ ತಜ್ಞರು!

    By AIN AuthorDecember 30, 2024
    Share
    Facebook Twitter LinkedIn Pinterest Email
    Demo

    ಈ ವರ್ಷ ಮಳೆಗಾಲ ಕಳೆದ ಚಳಿಗಾಲವು ಸ್ವಲ್ಪ ವಿಳಂಬವಾಗಿಯೇ ಆರಂಭವಾಗಿದ್ದು, ಚಳಿಗಾಲದ ವಾತಾವರಣವು ದೇಹಕ್ಕೆ ತುಂಬಾ ಕಠಿಣ ಸವಾಲನ್ನು ಒಡ್ಡುವಂತಹ ಕಾಲ. ಯಾಕೆಂದರೆ ಈ ಸಮಯದಲ್ಲಿ ಹೆಚ್ಚಿನ ಅನಾರೋಗ್ಯಗಳು ಬರುವುದು ಮಾತ್ರವಲ್ಲದೆ, ದೈಹಿಕವಾಗಿಯು ಇದು ಹಿಂಡಿಹಿಪ್ಪೆ ಮಾಡುವುದು. ಚಳಿಯಿಂದಾಗಿ ಚರ್ಮದ ಮೇಲೆ ತೀವ್ರ ಪರಿಣಾಮ ಬೀರುವುದು. ಇಷ್ಟು ಮಾತ್ರವಲ್ಲದೆ ಪಾದಗಳು ಕೂಡ ಒಡೆದು ರಕ್ತಸ್ರಾವ ಆಗುವಂತಹ ಪರಿಸ್ಥಿತಿ ನಿರ್ಮಾಣವಾಗುವುದು.

    ನೆಲಮಂಗಲದಲ್ಲಿ ಬೆಳ್ಳಂ ಬೆಳಗ್ಗೆ ಅಪಘಾತ: 10ಕ್ಕೂ ಹೆಚ್ಚು ಮಂದಿ ಗಂಭೀರ!

    ಚಳಿಗಾಲದಲ್ಲಿ ತಲೆಯವರೆಗೇ ಬೆಡ್ ಶೀಟ್ ಹೊದ್ದು ಮಲಗುವ ಅಭ್ಯಾಸವಿರುತ್ತದೆ. ಆದರೆ ಈ ರೀತಿ ಮಲಗುವುದು ನಾನಾ ರೀತಿಯ ಆರೋಗ್ಯ ಸಮಸ್ಯೆಗಳನ್ನು ತಂದೊಡ್ಡುತ್ತದೆ. ಈ ರೀತಿ ಮಲಗುವ ಅಭ್ಯಾಸದಿಂದ ಏನೆಲ್ಲಾ ಆರೋಗ್ಯ ಸಮಸ್ಯೆಗಳು ಬರುತ್ತದೆ ಎಂದು ತಿಳಿದುಕೊಳ್ಳುವುದು ಸೂಕ್ತ.

    ಚರ್ಮಕ್ಕೆ ಹಾನಿಕಾರಕ : ಚಳಿಗಾಲದ ಋತುವಿನಲ್ಲಿ ಮುಖಕ್ಕೆ ಬೆಡ್ ಶೀಟ್ ಹಾಕಿ ಮಲಗುವುದರಿಂದ, ಈ ಹೊದಿಕೆಯಲ್ಲಿರುವ ಅಶುದ್ಧ ಗಾಳಿ ಹೊರಗೆ ಹೋಗುವುದಿಲ್ಲ. ಈ ಕೆಟ್ಟ ಗಾಳಿಯಿಂದ ತ್ವಚೆಯ ಬಣ್ಣ ಮಾಸುವಂತೆ ಮಾಡುತ್ತದೆ. ಸುಕ್ಕುಗಳು, ಮೊಡವೆಗಳು ಸೇರಿದಂತೆ ಇನ್ನಿತ್ತರ ಚರ್ಮದ ಸಮಸ್ಯೆಗಳು ಕಾಣಿಸಿಕೊಳ್ಳುತ್ತದೆ ಎನ್ನುತ್ತಾರೆ ತಜ್ಞರು.

    ಶ್ವಾಸಕೋಶದ ಸಮಸ್ಯೆ : ಮುಖವನ್ನು ಹೊದಿಕೆಯಿಂದ ಮುಚ್ಚಿಕೊಂಡು ಮಲಗುವುದರಿಂದ ಶ್ವಾಸಕೋಶಕ್ಕೆ ಗಾಳಿ ಸಿಗುವುದಿಲ್ಲ. ಇದರಿಂದ ಶ್ವಾಸಕೋಶಗಳು ಸಂಕುಚಿತಗೊಳ್ಳುತ್ತವೆ. ತಜ್ಞರು ಹೇಳುವಂತೆ ಈ ರೀತಿಯ ಅಭ್ಯಾಸದಿಂದ ಕ್ರಮೇಣವಾಗಿ ತಲೆನೋವು ಮತ್ತು ಅಸ್ತಮಾದಂತಹ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತದೆ.

    ರಕ್ತ ಪರಿಚಲನೆಯ ಮೇಲೆ ಪರಿಣಾಮ ಬೀರುತ್ತದೆ : ಹೊದಿಕೆ ಹೊದ್ದು ಮಲಗುವುದರಿಂದ ದೇಹಕ್ಕೆ ಅಗತ್ಯವಿರುವಷ್ಟು ಆಮ್ಲಜನಕ ಸಿಗುವುದಿಲ್ಲ. ದೇಹದ ಪ್ರತಿಯೊಂದು ರಕ್ತವು ಸರಿಯಾದ ಪ್ರಮಾಣದಲ್ಲಿ ಹರಿಯುವುದಿಲ್ಲ.

    ಆಯಾಸ : ಮುಖದ ಮೇಲೆ ಹೊದಿಕೆ ಹಾಕಿಕೊಂಡು ಮಲಗಿದರೆ ಆಮ್ಲಜನಕವು ಸರಿಯಾಗಿ ಸಿಗುವುದಿಲ್ಲ. ಇದರಿಂದ ಅತಿಯಾದ ಆಯಾಸ, ಸುಸ್ತು ಉಂಟಾಗುತ್ತದೆ. ಅದಲ್ಲದೇ, ತಲೆನೋವು, ವಾಕರಿಕೆ, ತಲೆಸುತ್ತು ಮುಂತಾದ ಸಮಸ್ಯೆಗಳು ಕಾಣಿಸಿಕೊಳ್ಳುತ್ತದೆ.

    ಕೂದಲು ಉದುರುವಿಕೆ ಸಮಸ್ಯೆ : ತಲೆಯನ್ನು ಹೊದಿಕೆಯಿಂದ ಮುಚ್ಚಿಕೊಂಡು ಮಲಗುವುದರಿಂದ ಕೂದಲಿನ ಬೇರುಗಳನ್ನು ದುರ್ಬಲಗೊಳಿಸಿ, ಕೂದಲು ಉದುರುವಿಕೆಗೆ ಕಾರಣವಾಗುತ್ತದೆ ಎನ್ನುತ್ತಾರೆ ತಜ್ಞರು.

    ನಿದ್ರೆಗೆ ತೊಂದರೆ : ಕಾಲಿನಿಂದ ತಲೆಯವರೆಗೆ ಹೊದಿಕೆ ಹೊದ್ದು ಮಲಗುವ ಅಭ್ಯಾಸದಿಂದ ದೇಹದ ಉಷ್ಣತೆಯೂ ಹೆಚ್ಚಾಗಿ ಇದರಿಂದ ದೇಹವು ಬೆವರಲು ಪ್ರಾರಂಭವಾಗುತ್ತದೆ. ಇದರಿಂದ ಸರಿಯಾಗಿ ನಿದ್ದೆ ಮಾಡಲಾಗುವುದಿಲ್ಲ.

    ಹೃದಯಾಘಾತದ ಸಾಧ್ಯತೆ ಹೆಚ್ಚು : ತಲೆಯಿಂದ ಕಾಲಿನವರೆಗೆ ಹೊದಿಕೆ ಹೊದ್ದು ಮಲಗುವ ಅಭ್ಯಾಸದಿಂದ ದೇಹಕ್ಕೆ ಅಗತ್ಯವಿರುವಷ್ಟು ಆಮ್ಲಜನಕವು ಸಿಗುವುದಿಲ್ಲ. ಈ ರೀತಿ ಅಭ್ಯಾಸದಿಂದ ಹೃದಯಾಘಾತ ಹಾಗೂ ಉಸಿರಾಟ ತೊಂದರೆಯ ಅಪಾಯವೇ ಹೆಚ್ಚು ಎಂದು ತಜ್ಞರು ಹೇಳುತ್ತಾರೆ.

    Demo
    Share. Facebook Twitter LinkedIn Email WhatsApp

    Related Posts

    ಸಾರ್ವಜನಿಕರೇ ಗಮನಿಸಿ.. ಹೊಸ ರೀತಿಯ ವಂಚನೆ: ಕೆಲವೇ ಸೆಕೆಂಡುಗಳಲ್ಲಿ 45 ಲಕ್ಷ ರೂ. ಮಾಯ!

    June 23, 2025

    ಗೋಲ್ಡ್ ಬೆಲೆಯಲ್ಲಿ ಇಳಿಕೆ! ದೇಶದ ಪ್ರಮುಖ ನಗರಗಳಲ್ಲಿ ಇಂದಿನ ಚಿನ್ನ-ಬೆಳ್ಳಿ ದರ ಎಷ್ಟಿದೆ? ಇಲ್ಲಿದೆ ಮಾಹಿತಿ

    June 23, 2025

    ನಿಂಬೆ ಸಿಪ್ಪೆ ಬಿಸಾಕೋ ಮುನ್ನ ಈ ಸ್ಟೋರಿ ನೋಡಿ: ಇದರಿಂದಾಗುವ ಲಾಭ ಎಷ್ಟು ಗೊತ್ತಾ?

    June 23, 2025

    ನಿರುದ್ಯೋಗಿಗಳಿಗೆ ಗುಡ್ ನ್ಯೂಸ್: ಸೆಂಟ್ರಲ್ ಬ್ಯಾಂಕಿನಲ್ಲಿ 4500 ಹುದ್ದೆಗಳು ಖಾಲಿ.. ಅರ್ಹರು ಇಂದೇ ಅಪ್ಲೈ ಮಾಡಿ!

    June 22, 2025

    ಕೊಲೆಸ್ಟ್ರಾಲ್‌, ಗ್ಯಾಸ್ಟ್ರಿಕ್ ಇರೋರಿಗೆ ಒಣ ಶುಂಠಿ ಸೇವನೆ ಬೆಸ್ಟ್ ಅಂತೆ!

    June 22, 2025

    ಇನ್ಮುಂದೆ ಸುಳ್ಳು ಸುದ್ದಿ, ದ್ವೇಷ ಭಾಷಣ ಮಾಡಿದ್ರೆ ದಂಡದ ಜೊತೆ ಜೈಲೂಟ ಫಿಕ್ಸ್!

    June 22, 2025

    ವಿದ್ಯಾರ್ಥಿಗಳು, ಪೋಷಕರು ಮಿಸ್ ಮಾಡ್ದೆ ಸುದ್ದಿ ಓದಿ: ಇನ್ಮುಂದೆ ಶಾಲೆಗಳಲ್ಲಿ ಹೊಸ ರೂಲ್ಸ್! ಏನದು?

    June 22, 2025

    ಹಳೇ ಬಟ್ಟೆ ದಾನ ಮಾಡ್ತಿದ್ದೀರಾ!? ಎಚ್ಚರ, ಈ ತಪ್ಪು ಮಾಡೋ ಮುನ್ನ ಸುದ್ದಿ ನೋಡಿ!

    June 22, 2025

    ರಾತ್ರಿ ಮಲಗಿದ್ದಾಗ ಕೈ-ಕಾಲು ಸೆಳೆತ ಆಗೋದ್ಯಾಕೆ? ಕಾರಣ ತಿಳಿದ್ರೆ ಶಾಕ್ ಆಗ್ತೀರಾ?

    June 22, 2025

    ಐಟಿ ಕ್ಷೇತ್ರದ ಹುದ್ದೆಗಳನ್ನ ಎಐ ಕಿತ್ತುಕೊಳ್ಳುತ್ತಾ!? ಇನ್ಫೋಸಿಸ್ ದಿಗ್ಗಜ ಎನ್‌.ಆರ್ ನಾರಾಯಣಮೂರ್ತಿ ಏನಂದ್ರೂ!?

    June 21, 2025

    ರಾತ್ರಿ ಮಲಗುವಾಗ ಈ ಲಕ್ಷಣ ಕಂಡುಬರುತ್ತಾ!? ಹಾಗಿದ್ರೆ ಇದು ಕಿಡ್ನಿ ಅಪಾಯದ ಮುನ್ಸೂಚನೆ!

    June 21, 2025

    ಮಳೆಗಾಲದಲ್ಲಿ ಬಟ್ಟೆ ಬೇಗ ಒಣಗುತ್ತಿಲ್ವಾ..? ಹಾಗಾದ್ರೆ ಬೇಗನೆ ಒಣಗಿಸಲು ಇಲ್ಲಿದೆ ಸಿಂಪಲ್ ಟಿಪ್ಸ್

    June 21, 2025
    © 2025 Copyright � All rights reserved AIN Developed by Notch IT Solutions..
    • Latest Trending news today
    • Trending News in kannada
    • Kannada online news
    • latest trends and news from India and around the world
    • New Kannada news channel
    • latest and breaking news in Kannada
    • Business News Kannada
    • Karnataka news headlines
    • Live Updates on Karnataka
    • flash news in Kannada politics

    Type above and press Enter to search. Press Esc to cancel.