Close Menu
Ain Live News
    Facebook X (Twitter) Instagram YouTube
    Saturday, July 5
    Facebook X (Twitter) Instagram YouTube
    Ain Live News
    Demo
    • Home
    • ಬೆಂಗಳೂರು
    • ರಾಜಕೀಯ
    • ಜಿಲ್ಲೆ
    • ಸಿನಿಮಾ
    • ಲೈಫ್ ಸ್ಟೈಲ್
    • ಜ್ಯೋತಿಷ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಕ್ರೀಡೆ
    • ತಂತ್ರಜ್ಞಾನ
    • ಕೃಷಿ
    • ಗ್ಯಾಲರಿ
    • ವಿಡಿಯೋ
    Facebook X (Twitter) Instagram YouTube
    Ain Live News

    ಮಕ್ಕಳ ಸಾಮಾಜಿಕ ಜಾಲಾ ತಾಣಕ್ಕೆ ಬ್ರೇಕ್ ಹಾಕಲು ಮುಂದಾದ ಕೇಂದ್ರ ಸರ್ಕಾರ

    By Author AINJanuary 10, 2025
    Share
    Facebook Twitter LinkedIn Pinterest Email
    Demo

    ಕೋವಿಡ್ ಸಂದರ್ಭದಲ್ಲಿ ಮಕ್ಕಳಿಗೆ ಶುರುವಾದ ಮೊಬೈಲ್ ಗೀಳು ಇಂದಿಗೂ ನಿಂತಿಲ್ಲ.ಪ್ರತಿಯೊಂದು ಮಗುವೂ ಕೂಡ ಮೊಬೈಲ್ ಗೆ ಅಡಿಕ್ಟ್ ಆಗಿ ಬಿಟ್ಟಿದು. ಇದರಿಂದ ಮಕ್ಕಳ ಮೇಲೆ ಹಲವು ಸಮಸ್ಯೆಗಳು ಎದುರಾಗುತ್ತವೆ ಎಂದು ವೈದ್ಯರು ಎಚ್ಚರಿಕೆ ನೀಡುತ್ತಲೆ ಇದ್ದಾರೆ. ಈ ಮಧ್ಯೆ ಮಕ್ಕಳು ಸೋಷಿಯಲ್​ ಮೀಡಿಯಾ ಖಾತೆಗಳನ್ನು ತೆರೆದು ಇನ್ನಿಲ್ಲದಂತೆ ತೊಂದರೆಗೆ ಒಳಗಾಗುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಇದಕ್ಕೆ ಬ್ರೇಕ್​ ಹಾಕಲು ಕೇಂದ್ರ ಸರ್ಕಾರ ಮುಂದಾಗಿದೆ.  ಡಿಜಿಟಲ್ ಪರ್ಸನಲ್ ಡಾಟಾ ಪ್ರೊಟೆಕ್ಷನ್ (DPDP) ಕಾಯ್ದೆಯ ಕರಡು ನಿಯಮ ರೂಪಿಸಲಾಗಿದ್ದು, ಇದು ಅಂಗೀಕಾರಗೊಂಡರೆ ಶೀಘ್ರದಲ್ಲಿಯೇ ಮಕ್ಕಳ ಜಾಲತಾಣಗಳ ಖಾತೆಗೆ ಬ್ರೇಕ್​ ಬೀಳಲಿದೆ.

    ಈ ನಿಯಮದ ಅನ್ವಯ 18 ವರ್ಷದ ಒಳಗಿನ ಮಕ್ಕಳು ಯಾವುದೇ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳನ್ನು ಪ್ರವೇಶಿಸುವಂತಿಲ್ಲ. ಒಂದು ವೇಳೆ ಹಾಗೆ ಮಾಡುವುದು ಅನಿವಾರ್ಯವಾದರೆ,  ಪೋಷಕರ ಅಥವಾ ಹಿರಿಯರ ಒಪ್ಪಿಗೆಯನ್ನು ಪಡೆಯುವುದು ಅಗತ್ಯವಾಗಿದೆ. ಮಕ್ಕಳು ಆನ್​ಲೈನ್​ ಅಕೌಂಟ್​ ತೆರೆಯಲು ಹೋದರೆ ಅಲ್ಲಿ ಒಂದು ಬಾಕ್ಸ್​ ಓಪನ್​ ಆಗುತ್ತದೆ. ಅಲ್ಲಿ ಪೋಷಕರು ತಮ್ಮ ಪಾಸ್​ವರ್ಡ್​ ಎಂಟರ್​ ಮಾಡಿ ಓಕೆ ಎಂದು ಕೊಟ್ಟರೆ ಮಾತ್ರ ಅಂಥ ಅಕೌಂಟ್​ ತೆರೆಯಲು ಅನುಮತಿ ನೀಡಲಾಗುತ್ತದೆ. ಒಂದು ವೇಳೆ ಪೋಷಕರ ಬಳಿ ಯಾವುದಾದರೂ ಸೋಷಿಯಲ್​ಮೀಡಿಯಾ ಅಕೌಂಟ್​ ಇದ್ದರೆ ಅದರಿಂದಲೇ ಲಾಗಿನ್​ ಆಗಿ ಮಕ್ಕಳಿಗೆ ಅನುಮತಿ ಕೊಡಬಹುದು.

    ಪಾಲಕರ ಬಳಿ ಯಾವುದೇ ಸೋಷಿಯಲ್​ ಮೀಡಿಯಾ ಖಾತೆ ಇಲ್ಲದಿದ್ದರೆ ಗುರುತಿನ ಚೀಟಿಗಳಾದ ಆಧಾರ್​ ಕಾರ್ಡ್​, ಪ್ಯಾನ್​ ಕಾರ್ಡ್​, ರೇಷನ್​ ಕಾರ್ಡ್​ ಹೀಗೆ ಯಾವುದಾದರನ್ನೂ ಅಪ್​ಲೋಡ್​  ಮಾಡಿ ಅನುಮತಿ ಪಡೆದುಕೊಳ್ಳಬೇಕಾಗುತ್ತದೆ.

    ಸದ್ಯ ಈ ಕರಡು ಪ್ರತಿಯಲ್ಲಿ ಆ ಬಗ್ಗೆ ಸ್ಪಷ್ಟ ಚಿತ್ರಣ ಇಲ್ಲದಿದ್ದರೂ ಜಾಲತಾಣಗಳ ಮಾಲೀಕರಿಗೆ ನಿಯಮ ರೂಪಿಸುವಂತೆ ತಿಳಿಸಲಾಗಿದೆ. ಒಂದು ವೇಳೆ ವಯಸ್ಸಿನ ಬಗ್ಗೆ ಇಲ್ಲವೇ ಪಾಲಕರು ಎಂದು ಯಾರದ್ದಾದರೂ ಬಳಿ ವೆರಿಫಿಕೇಷನ್​  ಮಾಡಿಸುವುದು ಎಲ್ಲಾ ಮಾಡಿದರೆ ಮಕ್ಕಳು ಕಾನೂನಾತ್ಮಕ ಸಮಸ್ಯೆಗಳಿಗೆ ಎದುರಾಗಬಹುದು.

    Demo
    Share. Facebook Twitter LinkedIn Email WhatsApp

    Related Posts

    ಪಾಕ್’ನಲ್ಲಿ ನೆಲಕಚ್ಚಿದ ಆರ್ಥಿಕತೆ: Pakistanದಲ್ಲಿ ಎಲ್ಲಾ ವ್ಯವಹಾರ ಸ್ಥಗಿತಗೊಳಿಸಿದ ಮೈಕ್ರೋಸಾಫ್ಟ್!

    July 5, 2025

    ಶಿಕ್ಷಣದ ಹೆಸರಿನಲ್ಲಿ Instagram ನಕಲಿ ಖಾತೆ ತೆರೆದು ವಂಚನೆ: 18 ಲಕ್ಷ ಕಳೆದುಕೊಂಡ MBA ವಿದ್ಯಾರ್ಥಿನಿ..!

    July 4, 2025

    PUC, ಡಿಗ್ರಿ ಪಾಸಾಗಿದ್ಯಾ!? ಹಾಗಿದ್ರೆ ಇಲ್ಲಿದೆ ಭರ್ಜರಿ ಉದ್ಯೋಗವಕಾಶ! ಬೇಗ ಸಂದರ್ಶನಕ್ಕೆ ಹಾಜರಾಗಿ

    July 4, 2025

    ಪೋಷಕರೇ ನಿಮ್ಮ ಮಗುವಿಗೆ ಈ ಫುಡ್ ಕೊಡ್ತಿದ್ರೆ ಮಿಸ್ ಮಾಡ್ದೇ ಸುದ್ದಿ ಓದಿ!

    July 2, 2025

    ಓವರ್ ಟೈಮ್ ಮಾಡ್ಲೇಬೇಡಿ, ಆರೋಗ್ಯ ನೋಡಿಕೊಳ್ಳಿ ಎಂದ ಉದ್ಯೋಗಿಗಳಿಗೆ Infosys ಖಡಕ್ ಆದೇಶ

    July 2, 2025

    Bike Taxi ಸವಾರರಿಗೆ ಬಿಗ್ ರಿಲೀಫ್: ಬೈಕ್ ಟ್ಯಾಕ್ಸಿ ಓಡಾಟಕ್ಕೆ ಕೇಂದ್ರ ಸರ್ಕಾರ ಅನುಮತಿ!

    July 2, 2025

    ನಿಮ್ಮ ಆಧಾರ್ ಕಾರ್ಡ್ ಕಳೆದುಹೋಗಿದೆಯೇ? ಇದನ್ನು ಸುಲಭವಾಗಿ ಹಿಂಪಡೆಯಲು ಈ ಟಿಫ್ಸ್ ಫಾಲೋ ಮಾಡಿ

    July 2, 2025

    Anant Ambani: ಕಂಪನಿಯ ವ್ಯವಹಾರಗಳನ್ನು ನಿಭಾಯಿಸಲು ಅನಂತ್ ಅಂಬಾನಿ ಪಡೆಯುವ ಸಂಬಳ ಎಷ್ಟು ಗೊತ್ತಾ..?

    July 2, 2025

    Gold Rate Today: ಆಭರಣ ಪ್ರಿಯರಿಗೆ ಶಾಕಿಂಗ್ ನ್ಯೂಸ್: ದೇಶಾದ್ಯಂತ ಇಂದು ಚಿನ್ನದ ಬೆಲೆಯಲ್ಲಿ ಭಾರೀ ಏರಿಕೆ!

    July 1, 2025

    Commercial Cylinder Price: ಗ್ರಾಹಕರಿಗೆ ಸಿಹಿ ಸುದ್ದಿ: ಸಿಲಿಂಡರ್ ಬೆಲೆಯಲ್ಲಿ ಇಳಿಕೆ..!

    July 1, 2025

    ಚಿನ್ನಸ್ವಾಮಿ ಸ್ಟೇಡಿಯಂನ ಕರೆಂಟ್ ಕಟ್: ಸಂಪೂರ್ಣ ಪವರ್ ಕಟ್ ಮಾಡಿದ್ಯಾಕೆ ಬೆಸ್ಕಾಂ?

    July 1, 2025

    ನೀವು HDFC ಕ್ರೆಡಿಟ್ ಕಾರ್ಡ್ ಬಳಸುತ್ತಿದ್ದೀರಾ? ಹಾಗಾದ್ರೆ ಈ ಪ್ರಮುಖ ಬದಲಾವಣೆಗಳ ಬಗ್ಗೆ ತಿಳಿದುಕೊಳ್ಳಲೇಬೇಕು!

    July 1, 2025
    © 2025 Copyright � All rights reserved AIN Developed by Notch IT Solutions..
    • Latest Trending news today
    • Trending News in kannada
    • Kannada online news
    • latest trends and news from India and around the world
    • New Kannada news channel
    • latest and breaking news in Kannada
    • Business News Kannada
    • Karnataka news headlines
    • Live Updates on Karnataka
    • flash news in Kannada politics

    Type above and press Enter to search. Press Esc to cancel.