Close Menu
Ain Live News
    Facebook X (Twitter) Instagram YouTube
    Sunday, June 22
    Facebook X (Twitter) Instagram YouTube
    Ain Live News
    Demo
    • Home
    • ಬೆಂಗಳೂರು
    • ರಾಜಕೀಯ
    • ಜಿಲ್ಲೆ
    • ಸಿನಿಮಾ
    • ಲೈಫ್ ಸ್ಟೈಲ್
    • ಜ್ಯೋತಿಷ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಕ್ರೀಡೆ
    • ತಂತ್ರಜ್ಞಾನ
    • ಕೃಷಿ
    • ಗ್ಯಾಲರಿ
    • ವಿಡಿಯೋ
    Facebook X (Twitter) Instagram YouTube
    Ain Live News

    India Car Market: 2024ರ ಹೆಚ್ಚು ಮಾರಾಟವಾದ ಕಾರುಗಳಲ್ಲಿ Tata Punchಗೆ ಮೊದಲ ಸ್ಥಾನ..!

    By Author AINJanuary 10, 2025
    Share
    Facebook Twitter LinkedIn Pinterest Email
    Demo

    ಟಾಟಾ ಮೋಟಾರ್ಸ್ ತನ್ನ ಕಾರುಗಳ ಶ್ರೇಣಿಯನ್ನು ವಿಸ್ತರಿಸುವತ್ತ ಇನ್ನಷ್ಟು ಕಾರ್ಯೋನ್ಮುಖವಾಗಿದೆ. ಈಗಾಗಲೇ ತನ್ನ ಜನಪ್ರಿಯ ಮಾದರಿಗಳ ಫೇಸ್‌ಲಿಫ್ಟ್‌ ಆವೃತ್ತಿಯನ್ನು ಟಾಟಾ ಮಾರುಕಟ್ಟೆಗೆ ಪರಿಚಯಿಸಿದ್ದು, ತನ್ಮೂಲಕ ಸಾಕಷ್ಟು ಗ್ರಾಹಕರನ್ನು ಸೆಳೆಯುವಲ್ಲಿಯೂ ಯಶಸ್ವಿಯಾಗಿದೆ. ಇದೀಗ ದೇಶದಲ್ಲಿ ವರ್ಷವೊಂದರಲ್ಲಿ ಅತಿ ಹೆಚ್ಚು ಮಾರುತಿ ಕಂಪನಿಯ ಕಾರುಗಳೇ ಮಾರಾಟವಾಗುತ್ತಿದ್ದವು. ಆದರೆ 2024 ರಲ್ಲಿ ಟಾಟಾ ಕಂಪನಿಯ ಪಂಚ್‌ ಅತಿ ಹೆಚ್ಚು ಮಾರಾಟವಾಗುವ ಮೂಲಕ ಮಾರುತಿಯ ದಾಖಲೆಯನ್ನು ಬ್ರೇಕ್‌ ಮಾಡಿದೆ.

    Fashion Tips: ನೈಲ್ ಪಾಲಿಶ್ ಹಚ್ಚಿದ ತಕ್ಷಣ ಒಣಗಬೇಕಾ..? ಹಾಗಾದ್ರೆ ಈ ಟಿಪ್ಸ್ ಫಾಲೋ ಮಾಡಿ

    ಅಟೋ ಕಾರು ಪ್ರೋ ವರದಿಯ ಪ್ರಕಾರ ಸಬ್‌ಕಾಂಪ್ಯಾಕ್ಟ್ ಎಸ್‌ಯುವಿ ಟಾಟಾ ಪಂಚ್, ಮಾರುತಿ ಸುಜುಕಿಯ ವ್ಯಾಗನ್ ಆರ್ ಮತ್ತು ಸ್ವಿಫ್ಟ್ ಅನ್ನು ಹಿಂದಿಕ್ಕಿದೆ. ವ್ಯಾಗನ್ ಆರ್‌ 1,90,855 ಮಾರಾಟವಾದರೆ ಟಾಟಾ ಪಂಚ್‌ 2,02,030 ಮಾರಾಟವಾಗುವ ಮೂಲಕ ಮೊದಲ ಸ್ಥಾನವನ್ನು ಪಡೆದುಕೊಂಡಿದೆ.

    ಯಾವ ಕಾರು ಎಷ್ಟು ಮಾರಾಟ
    1. ಟಾಟಾ ಪಂಚ್‌ (SUV) – 2,02,030
    2. ವ್ಯಾಗನ್‌ ಆರ್‌(Hatchback) – 1,90,855
    3. ಮಾರುತಿ ಎರ್ಟಿಗಾ(MUV) – 1,90,091
    4. ಮಾರುತಿ ಬ್ರೀಜಾ (SUV) – 1,88, 160
    5. ಹುಂಡೈ ಕ್ರೇಟಾ (SUV) – 1,86,919

    ಮಾರುತಿ ಕಂಪನಿಯ ಕಾರು ಮೊದಲ ಸ್ಥಾನ ಪಡೆಯದೇ ಇದ್ದರೂ ಟಾಪ್‌-5 ರಲ್ಲಿ ಮೂರು ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದೆ. ಇಲ್ಲಿಯವರೆಗೆ ಭಾರತದ ಗ್ರಾಹಕರು ಬೆಲೆ ಕಡಿಮೆ ಜೊತೆಗೆ ಹೆಚ್ಚು ಮೈಲೇಜ್‌ ನೀಡುವ ಕಾರುಗಳನ್ನೇ ಹೆಚ್ಚು ಇಷ್ಟ ಪಡುತ್ತಿದ್ದರು. ಆದರೆ ಈಗ ಸುರಕ್ಷತೆಯ ಜೊತೆ ಮೈಲೇಜ್‌ ನೀಡುವ ಕಾರುಗಳತ್ತ ಗಮನ ನೀಡುತ್ತಿದ್ದು ಕ್ಯಾಂಪಕ್ಟ್‌ ಎಸ್‌ಯುವಿ, ಎಸ್‌ಯುವಿ ಕಾರಿನತ್ತ ವಾಲುತ್ತಿರುವುದು ಸ್ಪಷ್ಟವಾಗಿದೆ.

    2024 ರಲ್ಲಿ ಒಟ್ಟು 42.86 ಲಕ್ಷ ಕಾರುಗಳು ಮಾರಾಟವಾಗಿದ್ದು ಮಾರುತಿ ಕಾರುಗಳ ಮಾರುಕಟ್ಟೆ 41%ಕ್ಕೆ ಕುಸಿದಿದೆ. ವಿಶೇಷವಾಗಿ 10 ಲಕ್ಷ ರೂ. ಒಳಗಿನ ಮಾರುಕಟ್ಟೆಯಲ್ಲಿ ಪ್ರಬಲ ಸ್ಪರ್ಧೆ ಇರುವುದರಿಂದ ಮಾರುತಿ ಕಾರುಗಳ ಮಾರುಕಟ್ಟೆ ಕುಸಿತವಾಗಿದೆ. 2018 ರಲ್ಲಿ ಭಾರತದಲ್ಲಿ ಒಟ್ಟು 33.49 ಲಕ್ಷ ಕಾರುಗಳು ಮಾರಾಟವಾಗಿತ್ತು. ಈ ಸಂದರ್ಭದಲ್ಲಿ ಟಾಪ್‌-5 ಒಳಗಡೆ ಎಲ್ಲಾ ಮಾರುತಿ ಕಂಪನಿಯ ಕಾರುಗಳೇ ಸ್ಥಾನ ಪಡೆದಿದ್ದವು.

    ಯಾವ ಕಂಪನಿಯ ಕಾರುಗಳಿಗೆ ಮೊದಲ ಸ್ಥಾನ?
    1957 – 1984 : ಅಂಬಾಸಿಡರ್‌( ಹಿಂದೂಸ್ಥಾನ್‌ ಮೋಟಾರ್ಸ್‌)
    1985-2004 – ಮಾರುತಿ 800
    2005-2017 – ಮಾರುತಿ ಅಲ್ಟೋ

    ಯಾವ ವರ್ಷ ಯಾವ ಕಾರು ಹೆಚ್ಚು ಮಾರಾಟ?
    2018 – ಮಾರುತಿ ಡಿಸೈರ್‌ – 2,64,612
    2019 – ಮಾರುತಿ ಅಲ್ಟೋ – 2,08,087
    2020 – ಮಾರುತಿ ಸ್ವಿಫ್ಟ್‌ – 1,60,765
    2021 – ಮಾರುತಿ ವ್ಯಾಗನ್‌ ಆರ್‌ – 1,83,851
    2022 – ಮಾರುತಿ ವ್ಯಾಗನ್‌ ಆರ್‌ – 2,17,317
    2023 – ಮಾರುತಿ ಸ್ವಿಫ್ಟ್‌ – 2,03,469
    2024 – ಟಾಟಾ ಪಂಚ್‌ – 2,02,030

     

    Demo
    Share. Facebook Twitter LinkedIn Email WhatsApp

    Related Posts

    ಬೆಂಗಳೂರಿಗರ ಗಮನಕ್ಕೆ: ಇಂದು ಈ ಪ್ರದೇಶದಲ್ಲಿ ಇರಲ್ಲ ಕರೆಂಟ್!

    June 22, 2025

    ಎತ್ತಿನಹೊಳೆ ಯೋಜನೆಯಲ್ಲಿ ಮೊದಲು ಕುಡಿಯುವ ನೀರು ಪೂರೈಕೆ, ನಂತರ ಕೆರೆಗಳಿಗೆ ನೀರು: ಡಿಸಿಎಂ ಡಿ.ಕೆ. ಶಿವಕುಮಾರ್

    June 21, 2025

    ಬೆಚ್ಚಿಬೀಳಿಸೋ ಘಟನೆ: ಸೊಸೆ ಕೊಂದು ಮನೆ ಮುಂದೆಯೇ ಹೂತು ಹಾಕಿದ ಮಾವ!

    June 21, 2025

    ವಂಚನೆ ಆರೋಪ: ಬೆಂಗಳೂರಿನ ಸಂಧ್ಯಾ ಪವಿತ್ರ ವಿರುದ್ಧ FIR!

    June 21, 2025

    ಐಟಿ ಕ್ಷೇತ್ರದ ಹುದ್ದೆಗಳನ್ನ ಎಐ ಕಿತ್ತುಕೊಳ್ಳುತ್ತಾ!? ಇನ್ಫೋಸಿಸ್ ದಿಗ್ಗಜ ಎನ್‌.ಆರ್ ನಾರಾಯಣಮೂರ್ತಿ ಏನಂದ್ರೂ!?

    June 21, 2025

    ಮಾವು ಮಾರುಕಟ್ಟೆ ಮಧ್ಯಪ್ರವೇಶ : ಬೆಲೆ ವ್ಯತ್ಯಾಸ ಪಾವತಿಗೆ ಸರ್ಕಾರದ ಒಪ್ಪಿಗೆ ಎನ್. ಚಲುವರಾಯಸ್ವಾಮಿ!

    June 21, 2025

    19 ವರ್ಷದ ಯುವಕ ಪಾರ್ಕ್ ನಲ್ಲಿ ನೇಣಿಗೆ ಶರಣು: ಸೂಸೈಡ್ ಗೆ ಕಾರಣ!?

    June 21, 2025

    ಜಲಮಂಡಳಿಯ ವತಿಯಿಂದ ತ್ವರಿತವಾಗಿ ಹೊಸ ಚರಂಡಿ ನಿರ್ಮಿಸಲು ಸೂಚನೆ: ಸ್ನೇಹಲ್

    June 21, 2025

    ಕಾಂಗ್ರೆಸ್ ಸರ್ಕಾರದ ಜನಪ್ರಿಯತೆ ಬಿಜೆಪಿಗೆ ಸಹಿಸಲಾಗುತ್ತಿಲ್ಲ: ಈಶ್ವರ್ ಖಂಡ್ರೆ!

    June 21, 2025

    ಇಂದು ದೇಶಾದ್ಯಂತ 11ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ: ಪರಿಷತ್ ಶಾಸಕ ಟಿ. ಎ.ಶರವಣ ಭಾಗಿ

    June 21, 2025

    BJP ರಾಜ್ಯಾಧ್ಯಕ್ಷನಾಗಿ ಒಂದೂಕಾಲು ವರ್ಷ ಶ್ರದ್ಧೆಯಿಂದ ಕೆಲಸ ಮಾಡಿರುವ ತೃಪ್ತಿ ನನಗಿದೆ ಎಂದು ವಿಜಯೇಂದ್ರ ಹೇಳಿದ್ಯಾಕೆ..?

    June 21, 2025

    BSY ಮೇಲೆ ಈಶ್ವರಪ್ಪಗೆ ಸಾಪ್ಟ್ ಕಾರ್ನರ್, BJPಗೆ ವಾಪಸ್ ಆಗ್ತಾರಾ ಮಾಜಿ ಸಚಿವ..!?

    June 21, 2025
    © 2025 Copyright � All rights reserved AIN Developed by Notch IT Solutions..
    • Latest Trending news today
    • Trending News in kannada
    • Kannada online news
    • latest trends and news from India and around the world
    • New Kannada news channel
    • latest and breaking news in Kannada
    • Business News Kannada
    • Karnataka news headlines
    • Live Updates on Karnataka
    • flash news in Kannada politics

    Type above and press Enter to search. Press Esc to cancel.