ಇಂದಿನ ಡಿಜಿಟಲ್ ಯುಗದಲ್ಲಿ ನಮಗೆ ಏನೇ ಮಾಹಿತಿ ಬೇಕಿದ್ದರು ಥಟ್ ಅಂತ ಸಿಗುತ್ತದೆ. ಅದರಲ್ಲೂ ಸ್ಮಾರ್ಟ್ಫೋನ್ ಬಳಸುವವರು ಅಥವಾ ಇಂಟರ್ನೆಟ್ ಬಳಕೆ ತಿಳಿದಿರುವ ಅನೇಕರು ಯಾವುದೇ ವಿಷಯದ ಬಗ್ಗೆ ಅನುಮಾನ ಇದ್ದರೂ ತಕ್ಷಣ ಅದನ್ನು ಹುಡುಕುವುದಕ್ಕೆ ಗೂಗಲ್ ಸರ್ಚ್ನ ಮೊರೆ ಹೋಗುವುದು ಸರ್ವೇ ಸಾಮಾನ್ಯವಾಗಿದೆ.
ಹಾಗಂತ ಮಿತಿ ಮೀರಬಾರದು, ಅಂದರೆ ಗೂಗಲ್ ಸರ್ಚ್ಗೂ ಒಂದು ಲಿಮಿಟ್ ಇದೆ, ಅದನ್ನು ಅರ್ಥೈಸಿಕೊಂಡು ಅನ್ವಯಿಸಿಕೊಳ್ಳಬೇಕು. ಗೂಗಲ್‌ನಲ್ಲಿ ಎಲ್ಲವನ್ನೂ ಹುಡುಕುವುದು ಯಾವುದೇ ಅಪಾಯದಿಂದ ಮುಕ್ತವಾಗಿಲ್ಲ ಎಂಬ ಮಾಹಿತಿಯನ್ನು ಗೂಗಲ್ ಸ್ವತಃ ನಿಮಗೆ ನೀಡುವುದಿಲ್ಲ. ಏಕೆಂದರೆ, ಗೂಗಲ್ ಯಾವುದೇ ವಿಷಯವನ್ನು ರಚಿಸುವುದಿಲ್ಲ, ಬದಲಿಗೆ ಅದು ವಿಭಿನ್ನ ವೆಬ್‌ಸೈಟ್‌ಗಳಿಗೆ ವೇದಿಕೆಗಳನ್ನು ಒದಗಿಸುತ್ತದೆ. ಎಲ್ಲಾ ಪ್ರಶ್ನೆಗಳಿಗೂ ಗೂಗಲ್‌ನಲ್ಲಿ ಉತ್ತರ ಸಿಕ್ಕಿದ್ರೂ, ಕೆಲವು ಹುಡುಕಾಟಗಳು ಅಪಾಯಕಾರಿ. ಜೈಲಿಗೆ ಕಳಿಸಬಹುದು.
ಮಕ್ಕಳ ಅಶ್ಲೀಲ ಚಿತ್ರಗಳನ್ನು ಹುಡುಕುವಂತಿಲ್ಲ: ಮಕ್ಕಳ ಅಶ್ಲೀಲ ಚಿತ್ರಗಳ ವಿರುದ್ಧ ಸರ್ಕಾರ ಕಠಿಣ ಕ್ರಮ ಕೈಗೊಂಡಿದೆ. POSCO ಕಾಯಿದೆ 2012 ರ ಪ್ರಕಾರ, ಮಕ್ಕಳ ಪೋರ್ನೋಗ್ರಫಿಗಾಗಿ Google ಹುಡುಕಾಟವು 5 ರಿಂದ 7 ವರ್ಷಗಳವರೆಗೆ ಜೈಲು ಶಿಕ್ಷೆಯನ್ನು ಹೊಂದಿರುತ್ತದೆ. ಆದ್ದರಿಂದ Google ನಲ್ಲಿ ಮಕ್ಕಳ ಪೋರ್ನ್ ಅನ್ನು ಎಂದಿಗೂ ಹುಡುಕಬೇಡಿ.
ಬಾಂಬ್ ತಯಾರಿಕೆ ಬಗ್ಗೆ ಸರ್ಚ್ ಮಾಡಬೇಡಿ: ಬಾಂಬ್ ತಯಾರಿಕೆಯ ಪ್ರಕ್ರಿಯೆಯನ್ನು ಗೂಗಲ್ ಮಾಡಿದರೆ ಜೈಲು ಪಾಲಾಗಬಹುದು. ನೀವೇನಾದರೂ ಈ ಬಗ್ಗೆ ಹುಡುಕಿದ್ರೆ ಡೆಸ್ಕ್ ಟಾಪ್ ಅಥವಾ ಪೋರ್ಟಬಲ್ ಸಾಧನದ IP ವಿಳಾಸದಿಂದ ನಿಮ್ಮನ್ನು ಪೊಲೀಸರು ಟ್ರ್ಯಾಕ್ ಮಾಡಬಹುದು.
ಖಾಸಗಿ ಮಾಹಿತಿ: ಲೈಂಗಿಕ ಕಿರುಕುಳ ಅಥವಾ ಇತರ ಕಿರುಕುಳಕ್ಕೆ ಒಳಗಾದವರ ಖಾಸಗಿ ಮಾಹಿತಿಯನ್ನು ಹಂಚಿಕೊಳ್ಳುವುದು ಸಹ ಅಪರಾಧವಾಗಿದೆ. ಅಂತಹ ಮಹಿಳೆಯ ಹೆಸರು, ಫೋಟೋ ಮತ್ತು ಇತರ ಮಾಹಿತಿಯನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳುವುದನ್ನು ತಪ್ಪಿಸಿ.
ಸಿನಿಮಾ ಪೈರಸಿ: ಹೊಸ ಸಿನಿಮಾ ನಕಲಿಕರಣ ಕಾನೂನು ಬಾಹಿರ. ಈ ಗೂಗಲ್ ನಲ್ಲಿ ಹುಡುಕಿದರೂ 3 ವರ್ಷ ಜೈಲು ಶಿಕ್ಷೆಯಾಗುವ ಸಾಧ್ಯತೆ ಇದೆ. ಇದಲ್ಲದೇ 10 ಲಕ್ಷ ದಂಡವನ್ನೂ ವಿಧಿಸಬಹುದಾಗಿದೆ.
ಗರ್ಭಪಾತ ಮಾಡುವುದು ಹೇಗೆ: ಗರ್ಭಪಾತ ಮಾಡುವುದು ಹೇಗೆ ಎಂದು Google ನಲ್ಲಿ ಎಂದಿಗೂ ಹುಡುಕಬೇಡಿ. ಗರ್ಭಪಾತದ ಬಗ್ಗೆ ಯಾವಾಗಲೂ ವೈದ್ಯರನ್ನು ಸಂಪರ್ಕಿಸಿ. ಗರ್ಭಪಾತ ಮಾಡುವುದು ಹೇಗೆ ಎಂದು ಹುಡುಕಿದರೆ ಜೈಲಿಗೆ ಹೋಗಬಹುದು. ಇನ್ನು ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದ ವಿಷಯಗಳನ್ನು ಸಹ ಹುಡುಕದಿರುವುದು ಉತ್ತಮ.