ಬೆಂಗಳೂರು: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸತತ 8 ನೇ ಬಾರಿಗೆ ಬಜೆಟ್ ಮಂಡಿಸಿದ್ದಾರೆ. ಸುಮಾರು 1.4 ಶತಕೋಟಿ ದೇಶವಾಸಿಗಳ ಕಣ್ಣು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರ ಬಜೆಟ್ ಮೇಲೆ ನೆಟ್ಟಿತ್ತು.
ಶನಿವಾರದಂದು ಅಪ್ಪಿ ತಪ್ಪಿಯೂ ಈ ಕೆಲಸಗಳನ್ನ ಮಾಡಬೇಡಿ…! ಶನಿ ಹೆಗಲೇರುತ್ತೆ
ಈ ವರ್ಷದ ಬಜೆಟ್ ಕೃಷಿ, ಉತ್ಪಾದನೆ, ಉದ್ಯೋಗ, ಎಂಎಸ್‌ಎಂಇಗಳು, ಗ್ರಾಮೀಣ ಪ್ರದೇಶಗಳ ಉನ್ನತಿ, ನಾವೀನ್ಯತೆ ಸೇರಿದಂತೆ 10 ವಿಶಾಲ ಕ್ಷೇತ್ರಗಳ ಮೇಲೆ ಕೇಂದ್ರೀಕರಿಸುತ್ತದೆ. ಈ ಬಾರಿಯ ಬಜೆಟ್ನ ಅನುಸಾರ ಯಾವೆಲ್ಲ ವಸ್ತುಗಳು, ಸೌಲಭ್ಯಗಳು ದುಬಾರಿಯಾಗಲಿವೆ ಎಂಬುದರ ಬಗ್ಗೆ ಮಾಹಿತಿ ಇಲ್ಲಿದೆ.
ಯಾವುದು ದುಬಾರಿ?:
– ಫ್ಲ್ಯಾಟ್ ಪ್ಯಾನೆಲ್ ಡಿಸ್ ಪ್ಲೇ
– ಕೈಯಲ್ಲಿ ಹೆಣೆದ ಬಟ್ಟೆಗಳು
– ತಂತ್ರಜ್ಞಾನ ಕ್ಷೇತ್ರದ ಸರಕುಗಳು
– ಮೊಬೈಲ್ ರೀಚಾರ್ಜ್ ಮತ್ತು ಇಂಟರ್ನೆಟ್ ಸೇವೆಗಳು
-ವಿಮಾನ ಟಿಕೆಟ್ ದರ
-ಹೈಟೆಕ್ ಎಲೆಕ್ಟ್ರಾನಿಕ್ಸ್
– ಆಮದು ಕಾರುಗಳು
-ತಂಬಾಕು ಮತ್ತು ಸಿಗರೇಟ್
ಯಾವುದು ಅಗ್ಗ?:
– ಕ್ಯಾನ್ಸರ್, ಅಪರೂಪದ ಕಾಯಿಲೆಗಳಿಗೆ ನೀಡುವ 36 ಔಷಧಿಗಳು.
– ಕೋಬಾಲ್ಟ್ ಉತ್ಪನ್ನಗಳು
– ಎಲ್‌ಇಡಿ ಟಿವಿ
– ಎಲೆಕ್ಟ್ರಿಕ್ ವಾಹನಗಳು
– ಕರಕುಶಲ ವಸ್ತುಗಳು.
– ಸ್ವದೇಶಿ ಬಟ್ಟೆಗಳು
– ಚರ್ಮದ ಶೂ, ಬೆಲ್ಟ್
– ಫ್ರೋಜನ್ ಫಿಶ್
– ಮೊಬೈಲ್
– ಚರ್ಮದ ಉತ್ಪನ್ನಗಳು