ಬೆಂಗಳೂರು: ಏರೋ ಇಂಡಿಯಾ ವೈಮಾನಿಕ ಪ್ರದರ್ಶನ 2025ಕ್ಕೆ ಕೆಲವೇ ದಿನಗಳು ಭಾಕಿ ಇದೆ. ಈ ಹಿನ್ನೆಲೆಯಲ್ಲಿ ವಾಯುಪ್ರದೇಶವನ್ನು ಮುಚ್ಚುವ ಪರಿಷ್ಕೃತ ಸಮಯ ಪಟ್ಟಿಯನ್ನು ಕೆಐಎ ಬಿಡುಡಗಡೆ ಮಾಡಿದೆ.
ಫೆಬ್ರವರಿ 5ರಿಂದ 14ರವರೆಗೆ ಕೆಲ ಅವಧಿಗಳಲ್ಲಿ ವಾಯುಪ್ರದೇಶವನ್ನು ಮುಚ್ಚುವುದಾಗಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ (ಕೆಐಎ) ತಿಳಿಸಿದೆ.
ಪರಿಷ್ಕೃತ ಸಮಯದ ಪಟ್ಟಿ..
ಫೆಬ್ರವರಿ 5, 6 ಮತ್ತು 8ರಂದು ಬೆಳಿಗ್ಗೆ 9ರಿಂದ ಮಧ್ಯಾಹ್ನ 12ರವರೆಗೆ ಮತ್ತು ಮಧ್ಯಾಹ್ನ 3ರಿಂದ 4.30 ರವರೆಗೆ
ಫೆಬ್ರವರಿ 7 ಬೆಳಿಗ್ಗೆ 9ರಿಂದ 11ರವರೆಗೆ ಮತ್ತು ಮಧ್ಯಾಹ್ನ 3 ರಿಂದ ಸಂಜೆ 4.30ರವರೆಗೆ
ಫೆಬ್ರವರಿ 8 ಬೆಳಿಗ್ಗೆ 9ರಿಂದ ಮಧ್ಯಾಹ್ನ 12ರವರೆಗೆ ಮತ್ತು ಮಧ್ಯಾಹ್ನ 3ರಿಂದ 4.30 ರವರೆಗೆ
ಫೆಬ್ರವರಿ 9 ಬೆಳಿಗ್ಗೆ 9ರಿಂದ 11ರವರೆಗೆ ಮತ್ತು ಮಧ್ಯಾಹ್ನ 3 ರಿಂದ ಸಂಜೆ 4.30 ರವರೆಗೆ
ಫೆಬ್ರವರಿ 10ರಂದು ಬೆಳಿಗ್ಗೆ 9ರಿಂದ 11.30ರವರೆಗೆ ಮತ್ತು ಮಧ್ಯಾಹ್ನ 2.30ರಿಂದ 3.30ರವರೆಗೆ.
ಫೆಬ್ರವರಿ 11 ಮತ್ತು 12ರಂದು ಮಧ್ಯಾಹ್ನ 12ರಿಂದ 2.30ರವರೆಗೆ.
ಫೆಬ್ರವರಿ 13 ಮತ್ತು 14ರಂದು ಬೆಳಿಗ್ಗೆ 9.30ರಿಂದ ಮಧ್ಯಾಹ್ನ 12ರವರೆಗೆ ಮತ್ತು ಮಧ್ಯಾಹ್ನ 2.30ರಿಂದ ಸಂಜೆ 5ರವರೆಗೆ ವಾಯುಪ್ರದೇಶವನ್ನು ಮುಚ್ಚಲಾಗುವುದು ಎಂದು ತಿಳಿಸಿದೆ.
ಏಷ್ಯಾದ ಅತಿ ದೊಡ್ಡ ಏರ್ ಶೋ ಯಲಹಂಕದ ವಾಯನೆಲೆಯಲ್ಲಿ ಫೆಬ್ರವರಿ 10 ರಿಂದ 14 ರವರಗೆ ನಡೆಯಲಿದ್ದು, ದೇಶ ವಿದೇಶಗಳ ಅನೇಕ ಗಣ್ಯರು, ಉದ್ಯಮಿಗಳು, ವಾಯುಪಡೆಗಳ ಸಿಬ್ಬಂದಿ ಆಗಮಿಸಲಿದ್ದಾರೆ.
15ನೇ ಆವೃತ್ತಿಯ ಏರ್ ಶೋ ಇದಾಗಿದ್ದು, ಲಕ್ಷಾಂತರ ಜನ ಆಗಮಿಸುವ ನಿರೀಕ್ಷೆ ಇದೆ.ಏರ್ ಶೋಗೆ ಆಗಮಿಸುವವರಿಗೆ ಪಾರ್ಕಿಂಗ್ ವ್ಯವಸ್ಥೆ, ಉಚಿತ ಬಸ್ ವ್ಯವಸ್ಥೆಯನ್ನು ವಾಯುಪಡೆ ಮಾಡಲಿದೆ.