ಬೆಂಗಳೂರು:- ನೀವು ಕೆಲಸ ಇಲ್ಲದೇ ಖಾಲಿ ಕೂತಿದ್ದೀರಾ!? Job ಸರ್ಚ್ ಮಾಡ್ತಿದ್ದೀರಾ!? ಡೋಂಟ್ ವರಿ ನೀವು ಇಲ್ಲಿ ಅಪ್ಲೈ ಮಾಡಬಹುದು.
ಪುರುಷರಲ್ಲಿ ಅಧಿಕ ಕೊಲೆಸ್ಟ್ರಾಲ್ ಇದೆ ಎಂದು ತಿಳಿಯೋದು ಹೇಗೆ!? ನಿಮ್ಮ ಉಗುರುಗಳೇ ಹೇಳುತ್ತೆ ಸ್ವಾಮಿ!
ಅದರಂತೆ ನಗರದಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗೆ ಬೆಸ್ಕಾಂ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ.
ಬೆಸ್ಕಾಂ ಆನ್ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನ ಮಾಡಿದ್ದು ಇತರೆ ಮೂಲಗಳಿಂದ ಬರುವ ಅರ್ಜಿಗಳನ್ನು ಸ್ವೀಕಾರ ಮಾಡಲ್ಲ ಎಂದು ಇಲಾಖೆ ಹೇಳಿದೆ. ಎಸ್ಸಿ, ಎಸ್ಟಿ, ಒಬಿಸಿ ಮೀಸಲಾತಿಗೆ ನೀಡಿರುವ ಮಾರ್ಗಸೂಚಿಗಳಿಗೆ ಅನುಗುಣವಾಗಿ ಮೀಸಲಾತಿ ಅನ್ವಯವಾಗುತ್ತದೆ. ಹೀಗಾಗಿ ಅರ್ಜಿ ಸಲ್ಲಿಕೆ ಮಾಡುವಾಗ ಅಭ್ಯರ್ಥಿ ಕೇಳಿದ ಮೀಸಲಾತಿ ಮಾತ್ರ ಉದ್ಯೋಗದಲ್ಲಿ ಅನ್ವಯ ಆಗುತ್ತದೆ. 18 ವರ್ಷ ಮೇಲ್ಪಟ್ಟವರಿಗೆ ಅವಕಾಶ ಇದೆ. ಒಂದು ವರ್ಷದವರೆಗೆ ತರಬೇತಿ ನೀಡಲಾಗುತ್ತದೆ.
ಅಪ್ರೆಂಟೀಸ್ ಉದ್ಯೋಗದ ಮಾಹಿತಿ
ಬಿಇ/ ಬಿಟೆಕ್- ಇಇ ಇಂಜಿನಿಯರಿಂಗ್- 130 ಹುದ್ದೆಗಳು
ಬಿಎ, ಬಿಎಸ್ಸಿ, ಬಿಕಾಮ್, ಬಿಬಿಎ, ಬಿಸಿಎ, ಬಿಬಿಎಂ, ಬಿಇ, ಬಿಟೆಕ್- 305 ಕೆಲಸಗಳು
ಡಿಪ್ಲೋಮಾದಲ್ಲಿ ಎಲ್ಲ ಕೋರ್ಸ್ಗಳು- 75
ಒಟ್ಟು ಉದ್ಯೋಗಗಳು= 510
ತರಬೇತಿ ವೇಳೆ ಮಾಸಿಕ ವೇತನ
8,000 ದಿಂದ 9,008 ರೂಪಾಯಿಗಳು
ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ- 20 ಫೆಬ್ರುವರಿ 2025