ಪ್ರಧಾನಿ ನರೇಂದ್ರ ಮೋದಿ ಸರ್ಕಾರವು ದೇಶದ ಎಲ್ಲ ನೌಕರರಿಗೆ ಸಾರ್ವತ್ರಿಕ ಪಿಂಚಣಿ ಯೋಜನೆ ಪರಿಚಯಿಸಲು ಸಿದ್ಧತೆ ನಡೆಸುತ್ತಿದೆ. ಈ ಯೋಜನೆ ಕೇವಲ ಸರ್ಕಾರಿ ನೌಕರಿಗೆ ಮಾತ್ರವಲ್ಲ ದೇಶದ ಎಲ್ಲ ನೌಕರರಿಗೆ ಈ ಸೌಲಭ್ಯ ಸಿಗಲಿದೆ. ಹಾಗಿದ್ರೆ ಸಾರ್ವತ್ರಿಕ ಪಿಂಚಣಿಯಿಂದ ಏನೆಲ್ಲಾ ಪ್ರಯೋಜಗಳು ಇವೆ? ಹಿರಿಯ ನಾಗರಿಕರಿಗೆ ಏನೆಲ್ಲಾ ಅನುಕೂಲ ಎಂಬ ಹೆಚ್ಚಿನ ಮಾಹಿತಿಯನ್ನು ಇಲ್ಲಿ ತಿಳಿಯೋಣ.
ನಮ್ಮ ದೇಶದ ಜನರಿಗೆ, ಅದರಲ್ಲೂ ವಿಶೇಷವಾಗಿ ಆರ್ಥಿಕವಾಗಿ ಹಿಂದುಳಿದವರಿಗೆ ಆಸರೆ ನೀಡಲು ಸರ್ಕಾರ ಅನೇಕ ಕಾರ್ಯಕ್ರಮಗಳನ್ನು ರೂಪಿಸಿದೆ. ಅಂತಹ ಒಂದು ಮಹತ್ವದ ಯೋಜನೆ ಅಂದರೆ ಅಟಲ್ ಪಿಂಚಣಿ ಯೋಜನೆ. 2015 ರಲ್ಲಿ ನಮ್ಮ ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರು ಈ ಯೋಜನೆಯನ್ನು ಜನರಿಗೆ ಸಮರ್ಪಿಸಿದರು
ಸಂಘಟಿತ ವಲಯದಲ್ಲಿ ಕೆಲಸ ಮಾಡದೆ, ವಯಸ್ಸಾದ ಕಾಲದಲ್ಲಿ ಆರ್ಥಿಕ ಸ್ವಾತಂತ್ರ್ಯವಿಲ್ಲದೆ ಕಷ್ಟಪಡುವ ಜನರಿಗೆ ಈ ಯೋಜನೆ ಒಂದು ಆಧಾರ. ನಿತ್ಯ ಕೂಲಿ ಮಾಡುವವರು, ಸಣ್ಣ ಪುಟ್ಟ ವ್ಯಾಪಾರ ಮಾಡುವವರು, ಸ್ವಂತ ಕೆಲಸ ಮಾಡುವವರು ಈ ಯೋಜನೆಯ ಸದುಪಯೋಗ ಪಡೆಯಬಹುದು.
60 ವರ್ಷ ದಾಟಿದ ಮೇಲೆ ಪ್ರತಿ ತಿಂಗಳು ನಿಗದಿತ ಹಣ ಪಿಂಚಣಿಯಾಗಿ ಪಡೆಯಲು ಈ ಯೋಜನೆಯಲ್ಲಿ ಸೇರಬಹುದು. ಅಟಲ್ ಪಿಂಚಣಿ ಯೋಜನೆಯಲ್ಲಿ ಸೇರಿದವರು 60 ವರ್ಷದ ನಂತರ ತಿಂಗಳಿಗೆ 1000, 2000, 3000, 4000 ಅಥವಾ 5000 ರೂಪಾಯಿಗಳವರೆಗೆ ಪಿಂಚಣಿ ಪಡೆಯಬಹುದು.
ಇದಕ್ಕಾಗಿ ಅವರು ಅವರ ವಯಸ್ಸಿಗೆ ಅನುಗುಣವಾಗಿ ಪ್ರತಿ ತಿಂಗಳು ಸ್ವಲ್ಪ ಹಣ ಕಟ್ಟಬೇಕು. 18 ರಿಂದ 40 ವರ್ಷದೊಳಗಿನ ಯಾರೇ ಆಗಲಿ ಈ ಯೋಜನೆಯ ಸದಸ್ಯರಾಗಬಹುದು. ರೈತರು ಸೇರಿದಂತೆ ಅಸಂಘಟಿತ ವಲಯದಲ್ಲಿ ದುಡಿಯುವ ಎಲ್ಲರಿಗೂ ಈ ಯೋಜನೆ ಅನ್ವಯಿಸುತ್ತದೆ.
ವಯಸ್ಸಿಗೆ ತಕ್ಕಂತೆ ಕಡಿಮೆ ಹಣ ಕಟ್ಟಿ ಹೆಚ್ಚಿನ ಪಿಂಚಣಿ ಪಡೆಯುವ ಅವಕಾಶ ಇಲ್ಲಿದೆ. ಉದಾಹರಣೆಗೆ, 18 ವರ್ಷದ ಯುವಕ ತಿಂಗಳಿಗೆ ಕೇವಲ 42 ರೂಪಾಯಿ ಕಟ್ಟುವ ಮೂಲಕ ಈ ಯೋಜನೆಗೆ ಸೇರಬಹುದು ಹಾಗೂ 60 ವರ್ಷದ ನಂತರ ಪ್ರತಿ ತಿಂಗಳು 5000 ರೂಪಾಯಿ ಪಿಂಚಣಿ ಪಡೆಯಬಹುದು.
40 ವರ್ಷದ ವ್ಯಕ್ತಿಯೊಬ್ಬರು ತಿಂಗಳಿಗೆ 1,454 ರೂಪಾಯಿ ಕಟ್ಟಿ 60 ವರ್ಷದ ನಂತರ 5000 ರೂಪಾಯಿ ಪಿಂಚಣಿ ಪಡೆಯುವ ಅವಕಾಶವಿದೆ. ತಮ್ಮ ಆರ್ಥಿಕ ಸ್ಥಿತಿಗೆ ಅನುಗುಣವಾಗಿ ಕಡಿಮೆ ಪಿಂಚಣಿ ಪಡೆಯಲು ಬಯಸುವವರು, ಕಡಿಮೆ ಪ್ರೀಮಿಯಂ ಕಟ್ಟಲು ಅವಕಾಶವಿದೆ.
ಒಟ್ಟಿನಲ್ಲಿ, ಅಟಲ್ ಪಿಂಚಣಿ ಯೋಜನೆಯು ವೃದ್ಧಾಪ್ಯದಲ್ಲಿ ಆರ್ಥಿಕ ಭದ್ರತೆ ಒದಗಿಸುವ ಒಂದು ಸುವರ್ಣ ಅವಕಾಶ. ನೀವು ಕೂಡ ನಿಮ್ಮ ಅಪ್ಪ-ಅಮ್ಮನ ಹೆಸರಲ್ಲಿ ಇಲ್ಲಿ ರಿಜಿಸ್ಟರ್ ಮಾಡಿ, ಈ ಯೋಜನೆಯ ಪ್ರಯೋಜನಗಳನ್ನು ಪಡೆದುಕೊಳ್ಳಬಹುದು.