Close Menu
Ain Live News
    Facebook X (Twitter) Instagram YouTube
    Thursday, May 22
    Facebook X (Twitter) Instagram YouTube
    Ain Live News
    Demo
    • Home
    • ಬೆಂಗಳೂರು
    • ಜಿಲ್ಲೆ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಲೈಫ್ ಸ್ಟೈಲ್
    • ಚಲನಚಿತ್ರ
    • ಕ್ರೀಡೆ
    • ತಂತ್ರಜ್ಞಾನ
    • ಕೃಷಿ
    • ಗ್ಯಾಲರಿ
    • ವಿಡಿಯೋ
    • ಜ್ಯೋತಿಷ್ಯ
    Facebook X (Twitter) Instagram YouTube
    Ain Live News

    ಬೆಂಗಳೂರಿನ ಈ ಏರಿಯಾದಲ್ಲಿ ಮನೆ ಬಾಡಿಗೆ ಹುಡುಕ್ತಿದ್ದೀರಾ!? ಮೊದಲು ಈ ಸುದ್ದಿ ನೋಡಿ!

    By AIN AuthorMarch 16, 2025
    Share
    Facebook Twitter LinkedIn Pinterest Email
    Demo

    ಬೆಂಗಳೂರು:- ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಬಾಡಿಗೆ ಮನೆಗಳಲ್ಲಿ ನೆಲೆಸಿರುವವರೇ ಹೆಚ್ಚು. ಉದ್ಯೋಗ, ಶಿಕ್ಷಣ, ವ್ಯಾಪಾರ ಸೇರಿದಂತೆ ಹಲವು ಉದ್ದೇಶಗಳಿಗಾಗಿ ಬೇರೆ ಬೇರೆ ಊರುಗಳಿಂದ ಬಂದಿರುವವರು ಮನೆಗಳನ್ನು ಬಾಡಿಗೆ ಪಡೆಯುತ್ತಿದ್ದಾರೆ. ಹೊರ ರಾಜ್ಯಗಳಿಂದ ಮಾತ್ರವಲ್ಲದೆ ವಿದೇಶಗಳಿಂದಲೂ ಜನ ಬಂದು ಬೆಂಗಳೂರಿನಲ್ಲಿ ನೆಲೆಸುತ್ತಿದ್ದಾರೆ. ಹಾಗಾಗಿ ಬಾಡಿಗೆ ಮನೆಗಳು ಲಾಭದ ಮಾರ್ಗವಾಗಿ ಬದಲಾಗಿದೆ. ಮನೆಗಳನ್ನು ಬಾಡಿಗೆಗೆ ನೀಡುತ್ತಾ ತಿಂಗಳಿಗೆ ಲಕ್ಷಗಟ್ಟಲೆ ಹಣ ಸಂಪಾದಿಸುತ್ತಿದ್ದಾರೆ. ಇದೀಗ ಈ ಬಾಡಿಗೆ ಮನೆ ಮಾಲೀಕರಿಗೆ ಹೊಸ ಸಂಕಷ್ಟವೊಂದು ಎದುರಾಗಿದೆ.

    Virat Kohli: ಟಿ20 ಮಾದರಿಗೆ ಮರಳುವ ಬಗ್ಗೆ ಕಿಂಗ್ ಕೊಹ್ಲಿ ಅಚ್ಚರಿ ಹೇಳಿಕೆ!

    ಬೆಂಗಳೂರು ಬೆಳೆದಂತೆ ಇಲ್ಲಿಗೆ ಬೇರೆ ಸ್ಥಳಗಳಿಂದ ಬಂದು ಜನ ಬಾಡಿಗೆ ಮನೆಗಳಲ್ಲಿ ವಾಸವಿದ್ದಾರೆ. ವಿಶೇಷವಾಗಿ ಈಜಿಪುರ ಮತ್ತು ಕೋರಮಂಗಲದಲ್ಲಿ ಫ್ಲಾಟ್‌ಗಳನ್ನು ಬಾಡಿಗೆಗೆ ಪಡೆಯುತ್ತಿರುವವರಿಗೆ ಹೊಸ ಭೀತಿ ಶುರುವಾಗಿದೆ. ಮೊದಲೆಲ್ಲ ಮನೆಗಳ್ಳರ ಹಾವಳಿ ಹೆಚ್ಚಾಗಿತ್ತು. ಇದನ್ನ ಮನಗಂಡು ಭದ್ರತಾ ಸಿಬ್ಬಂದಿ ನಿಯೋಜನೆ, ಸಿಸಿಟಿವಿ ಕ್ಯಾಮರಾ ಅಳವಡಿಕೆ, ಗೇಟ್‌ ಸೇರಿದಂತೆ ರಕ್ಷಣಾ ಕ್ರಮಗಳನ್ನು ಬಹುತೇಕ ಎಲ್ಲ ಮನೆಗಳಲ್ಲಿ ಕಾಣಬಹುದು. ಆದರೆ ಇದೀಗ ಬೆಂಗಳೂರಿನಲ್ಲಿ ಎಲ್‌ಪಿಜಿ ಸಿಲಿಂಡರ್‌ ಕದಿಯುವ ಗ್ಯಾಂಗ್‌ವೊಂದು ಸಕ್ರಿಯವಾಗಿದ್ದು, ಈ ಭಾಗದ ನಿವಾಸಿಗಳಿಗೆ ಶಾಕ್‌ ನೀಡಿದೆ.

    ಈಜಿಪುರ ಮತ್ತು ಕೋರಮಂಗಲದ ಮನೆ ಮಾಲೀಕರಿಗೆ ಇದೀಗ ಸಿಲಿಂಡರ್‌ ಕಳ್ಳರ ಕಾಟ ಹೆಚ್ಚಾಗಿದೆ. ಈ ಭಾಗದ ಬಾಡಿಗೆ ಮನೆಗಳು, ಫ್ಲ್ಯಾಟ್‌ಗಳು, ವಸತಿ ಕಟ್ಟಡಗಳನ್ನು ಗುರಿಯಾಗಿಸಿಕೊಂಡು ಸಿಲಿಂಡರ್‌ ಕಳ್ಳತನ ಮಾಡಲಾಗುತ್ತಿದೆ ಎಂಬ ವಿಚಾರ ಬೆಳಕಿಗೆ ಬಂದಿದೆ. ಕಳ್ಳನೊಬ್ಬ ಬಂದು ಸಲೀಸಾಗಿ ಸಿಲಿಂಡರ್‌ ಕದಿಯುತ್ತಿರುವ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲೂ ಸೆರೆಯಾಗಿದೆ.

    ಸಿಲಿಂಡರ್ ಕಳ್ಳರ ತಂಡವೊಂದು ಈ ಪ್ರದೇಶಗಳಲ್ಲಿ ಸಕ್ರಿಯವಾಗಿದ್ದು, ವಸತಿ ಕಟ್ಟಡಗಳನ್ನು ಗುರಿಯಾಗಿಸಿಕೊಂಡು ಪಾರ್ಕಿಂಗ್ ಸ್ಥಳಗಳಲ್ಲಿ ಇಟ್ಟಿರುವ ಅಡುಗೆ ಅನಿಲ ಸಿಲಿಂಡರ್‌ಗಳನ್ನು ಕದಿಯುತ್ತಿದ್ದಾರೆ. ಇದೇ ರೀತಿಯ ಘಟನೆ ಮಾರ್ಚ್ 14ರಂದ ಮಧ್ಯಾಹ್ನ ನಡೆದಿದೆ. ಈಜಿಪುರದ 20 ಕೆ ಕ್ರಾಸ್‌ನಲ್ಲಿರುವ ಮನೆಯೊಂದರಲ್ಲಿ ಸಿಲಿಂಡರ್‌ ಕಳ್ಳರ ಕೈಚಳಕ ಸೆರೆಯಾಗಿದೆ. ಇಬ್ಬರು ವ್ಯಕ್ತಿಗಳು ಈ ಕಳ್ಳತನದಲ್ಲಿ ಭಾಗಿಯಾಗಿರುವುದು ಕಂಡುಬಂದಿದೆ. ಒಬ್ಬ ವ್ಯಕ್ತಿ ಸ್ಕೂಟಿಯಲ್ಲಿ ಹೊರಗೆ ಕಾಯುತ್ತಿದ್ದರೆ, ಇನ್ನೊಬ್ಬ ಕಟ್ಟಡದ ಆವರಣವನ್ನು ಪ್ರವೇಶಿಸಿ ಗ್ಯಾಸ್ ಸಿಲಿಂಡರ್ ಅನ್ನು ಸಲೀಸಾಗಿ ಹೊತ್ತೊಯ್ದಿದ್ದಾನೆ.

    ಈ ಕೃತ್ಯಕ್ಕೆ ಬಳಸಲಾದ ಸ್ಕೂಟಿಯ ನೋಂದಣಿ ಸಂಖ್ಯೆ ಕೂಡ ಸೆರೆಯಾಗಿದೆ. ಇಂತಹ ಘಟನೆಗಳು ಇತ್ತೀಚೆಗೆ ಈ ಭಾಗದಲ್ಲಿ ಹೆಚ್ಚಾಗಿದ್ದು, ಮನೆ ಮಾಲೀಕರಿಗೆ ಢವಢವ ಶುರುವಾಗಿದೆ. ಸುರಕ್ಷತಾ ದೃಷ್ಟಿಯಿಂದ ಈಗ ಗ್ಯಾಸ್‌ ಸಿಲಿಂಡರ್‌ಗಳನ್ನು ಮನೆಯ ಹೊರಭಾಗಗಳಲ್ಲಿ ಅಥವಾ ಪಾರ್ಕಿಂಗ್‌ ಜಾಗಗಳಲ್ಲಿ ಅವಡಿಸಿ ಸಂಪರ್ಕ ಪಡೆಯಲಾಗುತ್ತಿದೆ. ಇದನ್ನೇ ಬಂಡವಾಳ ಮಾಡಿಕೊಂಡಿರುವ ಕಳ್ಳರು ಸಿಲಿಂಡರ್‌ ಅನ್ನು ಕದಿಯುವುದನ್ನೇ ವೃತ್ತಿ ಮಾಡಿಕೊಂಡಿದ್ದಾರೆ ಎಂದು ನೆಟ್ಟಿಗರು ಆತಂಕ ವ್ಯಕ್ತಪಡಿಸಿದ್ದಾರೆ.

    ಈ ವಿಡಿಯೋ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ. ಈ ಆರೋಪಗಳ ವಿರುದ್ಧ ತಕ್ಷಣವೇ ಕ್ರಮ ಕೈಗೊಳಗಳ್ಳಬೇಕು ಎಂದು ಬೆಂಗಳೂರು ಪೊಲೀಸರನ್ನು ಟ್ಯಾಗ್‌ ಮಾಡಿ ಒತ್ತಾಯಿಸಿದ್ದಾರೆ.

    Post Views: 1

    Demo
    Share. Facebook Twitter LinkedIn Email WhatsApp

    Related Posts

    ಕ್ಯಾನ್ಸರ್‌ ರೋಗಿಗಳಿಗೆ ಗುಡ್‌ ನ್ಯೂಸ್.. 16 ಜಿಲ್ಲಾಸ್ಪತ್ರೆಗಳಲ್ಲಿ ಕೀಮೋಥೆರಪಿ ಕೇಂದ್ರಗಳ ಆರಂಭಕ್ಕೆ ಸರ್ಕಾರ ನಿರ್ಧಾರ!

    May 22, 2025

    ಮಳೆ ಹಾನಿ ಪ್ರದೇಶಕ್ಕೆ JDS ಭೇಟಿ: ಕೆಲಸ ಮಾಡೋಕೆ ಆಗಲ್ಲ ಅಂದ್ರೆ ರಾಜೀನಾಮೆ ಕೊಟ್ಟು ಮನೆಗೆ ಹೋಗ್ರಿ – ಕಾಂಗ್ರೆಸ್ ವಿರುದ್ಧ ಟಿ ಎ ಶರವಣ ಆಕ್ರೋಶ

    May 22, 2025

    ಸಹನಟಿ ಜೊತೆ ವಾಟ್ಸಪ್‌ ಚಾಟ್‌ ವೈರಲ್‌..ಮಿಡ್‌ ನೈಟ್‌ನಲ್ಲಿ ಮೂಡ್‌ ಬರ್ತಿದೆ ಎಂದ್ರಾ ಮಡೆನೂರು ಮನು?

    May 22, 2025

    ಅತ್ಯಾಚಾರ ಎಸಗಿದ ಮುನಿರತ್ನನನ್ನು ಬಿಜೆಪಿ ಇನ್ನೂ ಯಾಕೆ ಪಕ್ಷದಲ್ಲಿ ಉಳಿಸಿಕೊಂಡಿದೆ?: ಪ್ರಿಯಾಂಕ್ ಖರ್ಗೆ

    May 22, 2025

    ಅತ್ಯಾಚಾರ ಕೇಸ್: ಕಾಮಿಡಿ ಕಿಲಾಡಿ ಮಡೆನೂರು ಮನು ಅರೆಸ್ಟ್‌

    May 22, 2025

    ರಾಮನಗರ ಜಿಲ್ಲೆ ಇನ್ಮುಂದೆ ಬೆಂಗಳೂರು ದಕ್ಷಿಣ ಜಿಲ್ಲೆಯಾಗಿ ಮರುನಾಮಕರಣ!

    May 22, 2025

    ಕೊಳ್ಳೇಗಾಲ: ಹಸೆಮಣೆಯಿಂದ ನೇರವಾಗಿ ಪರೀಕ್ಷೆಗೆ ಹಾಜರಾದ ನವವಧು

    May 22, 2025

    ನಿಂತಿದ್ದ ಜಾಗದಲ್ಲೇ ಹೃದಯಾಘಾತ: ಕುಸಿದು ಬಿದ್ದ 19 ವರ್ಷದ ಯುವಕ ಸಾವು..!

    May 22, 2025

    ಮಾಂಗಲ್ಯಧಾರಣೆ ಬಳಿಕ ಪರೀಕ್ಷಾ ಕೇಂದ್ರಕ್ಕೆ ಬಂದು ಬಿಕಾಂ ಫೈನಲ್‌ ಪರೀಕ್ಷೆ ಬರೆದ ನವವಧು: Video

    May 22, 2025

    ಮೈಸೂರು ಸ್ಯಾಂಡಲ್‌ಸೋಪ್‌ಗೆ ತಮನ್ನಾ ಭಾಟಿಯಾ ರಾಯಭಾರಿ..2 ವರ್ಷ 2 ತಿಂಗಳಿಗೆ ಪಡೆದಿದೆಷ್ಟು ಕೋಟಿ ಮಿಲ್ಕಿ ಬ್ಯೂಟಿ?

    May 22, 2025

    ಪರಮೇಶ್ವರ್ ಒಡೆತನದ ಸಂಸ್ಥೆಗಳ ಮೇಲೆ ಇಡಿ ದಾಳಿ: ಡಿಸಿಎಂ ಡಿಕೆ ಶಿವಕುಮಾರ್ ಹೇಳಿದ್ದೇನು..?

    May 22, 2025

    ಅತ್ಯಾಚಾರ, ಗರ್ಭಪಾತ, ಹಲ್ಲೆ : ಮಡೆನೂರು ಮನು ಮೇಲೆ ಸಹ ನಟಿಯಿಂದ ಆರೋಪ..FIRನಲ್ಲಿ ಏನಿದೆ?

    May 22, 2025
    © 2025 Copyright � All rights reserved AIN Developed by Notch IT Solutions..
    • Latest Trending news today
    • Trending News in kannada
    • Kannada online news
    • latest trends and news from India and around the world
    • New Kannada news channel
    • latest and breaking news in Kannada
    • Business News Kannada
    • Karnataka news headlines
    • Live Updates on Karnataka
    • flash news in Kannada politics

    Type above and press Enter to search. Press Esc to cancel.