ಪ್ರತಿ ಹೊಸ ತಿಂಗಳು ಪ್ರಾರಂಭವಾಗೋದಕ್ಕೂ ಮುನ್ನ ಭಾರತೀಯ ರಿಸರ್ವ್ ಬ್ಯಾಂಕ್ (ಆರ್ ಬಿಐ) ಬ್ಯಾಂಕುಗಳ ರಜಾಪಟ್ಟಿ ಬಿಡುಗಡೆ ಮಾಡುತ್ತದೆ. ಅದೇರೀತಿ ಏಪ್ರಿಲ್ ತಿಂಗಳ ಪ್ರಾರಂಭಕ್ಕೆ ಇನ್ನು ಬೆರಳೆಣಿಕೆ ದಿನಗಳಷ್ಟೇ ಬಾಕಿ ಉಳಿದಿದ್ದು, ರಜಾಪಟ್ಟಿಯನ್ನು ಬಿಡುಗಡೆ ಮಾಡಿದೆ. ಅದರ ಪ್ರಕಾರ ಏಪ್ರಿಲ್ ತಿಂಗಳಲ್ಲಿ ಸಾಕಷ್ಟು ದಿನಗಳ ಕಾಲ ಬ್ಯಾಂಕುಗಳು ಕಾರ್ಯನಿರ್ವಹಿಸೋದಿಲ್ಲ. ಇನ್ನು ಭಾನುವಾರ, ಎರಡನೇ ಹಾಗೂ ನಾಲ್ಕನೇ ಶನಿವಾರ ಕೂಡ ಬ್ಯಾಂಕುಗಳಿಗೆ ಎಂದಿನಂತೆ ರಜೆಯಿರುತ್ತದೆ. ಇನ್ನು ಏಪ್ರಿಲ್ ತಿಂಗಳು 2025-26ನೇ ಆರ್ಥಿಕ ಸಾಲಿನ ಮೊದಲ ತಿಂಗಳಾಗಿರುವ ಕಾರಣ ಕೆಲವರಿಗೆ ಒಂದಿಷ್ಟು ಹಣಕಾಸು ಸಂಬಂಧಿ ಕೆಲಸಗಳಿಗೆ ಬ್ಯಾಂಕಿಗೆ ಭೇಟಿ ನೀಡಬೇಕಾದ ಪ್ರಸಂಗ ಎದುರಾಗಬಹುದು. ಅಂಥ ತುರ್ತು ಕೆಲಸಗಳಿದ್ರೆ ರಜಾಪಟ್ಟಿಯನ್ನು ನೋಡಿಕೊಂಡು ಬ್ಯಾಂಕಿಗೆ ಭೇಟಿ ನೀಡಿ.
ಶಾಸಕ ಪ್ರದೀಪ್ ಈಶ್ವರ್ ನಿಜಾರ್ಥದಲ್ಲಿ ಹುಚ್ಚ ವೆಂಕಟ್: ಎಸ್ ಮುನಿಸ್ವಾಮಿ ವ್ಯಂಗ್ಯ!
ವಾರದಲ್ಲಿ 6 ಬ್ಯಾಂಕ್ ಕಾರ್ಯನಿರ್ವಹಿಸುತ್ತೆ. ಎರಡನೇ ಶನಿವಾರ ಹಾಗೂ ನಾಲ್ಕನೇ ಶನಿವಾರ ಮಾತ್ರ 5 ದಿನ ಕಾರ್ಯನಿರ್ವಿಸುತ್ತದೆ. ಆದರೆ ಈ ನಿಯಮ ಬದಲಾಗುತ್ತಿದೆ. ಕಾರಣ ಕೇಂದ್ರ ಸರ್ಕಾರ ಇದೀಗ ನೌಕರರ ಬೇಡಿಕೆ ಒಪ್ಪಿಕೊಂಡಿದೆ. ಇದರ ಪರಿಣಾಮ ಬ್ಯಾಂಕ್ ನೌಕರರ ಕನಸು ನನಸಾಗೋ ಸಮಯ ಬಂದಿದೆ. ಬ್ಯಾಂಕ್ ನೌಕರರು ಮುಂದಿಟ್ಟ ರಜೆ ಬೇಡಿಕೆಯನ್ನು ಒಪ್ಪಿಕೊಂಡಿದೆ. ಹೀಗಾಗಿ ಇನ್ನು ವಾರಕ್ಕೆ ಎರಡು ದಿನ ಬ್ಯಾಂಕ್ ನೌಕರರಿಗೆ ರಜೆ ಸಿಗಲಿದೆ.
ಏಪ್ರಿಲ್ ತಿಂಗಳಿಂದ ವಾರಕ್ಕೆ 5 ದಿನ ಮಾತ್ರ ಬ್ಯಾಂಕ್ ತೆರೆದಿರತ್ತೆ. ಉಳಿದ ದಿನ ಬ್ಯಾಂಕ್ ಬಂದ್ ಇರತ್ತೆ. ಶನಿವಾರ ಯಾವುದೇ ವ್ಯವಹಾರ ಇರಲ್ಲ. ಸೋಮವಾರದಿಂದ ಶುಕ್ರವಾರದ ವರೆಗೆ ಮಾತ್ರ ಬ್ಯಾಂಕ್ ಕಾರ್ಯನಿರ್ವಹಿಸಲಿದೆ. ಕಾರ್ಪೋರೇಟ್ ಕಚೇರಿಗಳ ರೀತಿಯಲ್ಲಿ ಬ್ಯಾಂಕ್ 5 ದಿನ ಕೆಲಸ, 2 ದಿನ ರಜಾ ದಿನಗಳಾಗಿರುತ್ತದೆ.
ಶನಿವಾರ ಮತ್ತು ಭಾನುವಾರ 2 ದಿನ ರಜೆ ಬೇಕು ಅಂತ ಬ್ಯಾಂಕ್ ನೌಕರರು ಹಲವು ಬೇಡಿಕೆ ಮುಂದಿಟ್ಟಿದ್ದಾರೆ.. ಈ ಕುರಿತು ಪ್ರತಿಭಟನೆಗಳು, ಹೋರಾಟಗಳು ನಡೆದಿದೆ. ಆರ್‌ಬಿಐಗೂ ಹಲವು ಮನವಿ ಸಲ್ಲಿಸಿದ್ದರು. ಕೊನೆಗೂ ನೌಕರರ ಬೇಡಿಕೆಯಂತೆ ವಾರಕ್ಕೆ 2 ದಿನ ರಜಾ ದಿನವಾಗಿ ಘೋಷಿಸಲು ಸರ್ಕಾರ ಮುಂದಾಗಿದೆ.
ಎಪ್ರಿಲ್ ತಿಂಗಳಿನಿಂದ ಹೊಸ ನಿಯಮ ಜಾರಿಯಾಗುತ್ತಿದೆ. ಹೀಗಾಗಿ ಗ್ರಾಹಕರು ಬ್ಯಾಂಕ್ ಕೆಲಸಕ್ಕಾಗಿ ತೆರಳುವ ಮುನ್ನ ವಾರ ಯಾವುದು ಎಂದು ಗಮನದಲ್ಲಿರಲಿ. ಎಂದಿನಂತೆ ಶನಿವಾರ ಬ್ಯಾಂಕ್ ಕೆಲೆಸ ಕಾರ್ಯಗಳನ್ನು ಮುಗಸಿಕೊಳ್ಳುವ ಆಲೋಚನೆ ಇದ್ದರೆ, ಏಪ್ರಿಲ್ ತಿಂಗಳಿನಿಂದ ಸಾಧ್ಯವಾಗುವುದಿಲ್ಲ
ಶನಿವಾರ ಬ್ಯಾಂಕ್ ಬಂದ್ ಇರೋದ್ರಿಂದ ಎರಡು ಶಿಫ್ಟ್‌ನಲ್ಲಿ ಬ್ಯಾಂಕ್ ತೆರೆಯೋಕೆ ಕೇಂದ್ರ ಸರ್ಕಾರ ಯೋಚನೆ ಮಾಡ್ತಿದೆ. ಅಂದ್ರೆ ಸಂಜೆ ಮೇಲೂ ವ್ಯವಹಾರ ಸಿಗುವ ಸಾಧ್ಯತೆ ಇದೆ.
ವಾರ ಪೂರ್ತಿ ಆಫೀಸ್ ಕೆಲಸದಲ್ಲಿ ತುಂಬಾ ಜನ ಬ್ಯುಸಿ ಇರ್ತಾರೆ. ಅದಕ್ಕೆ ಶನಿವಾರ ಒಂದೇ ದಿನ ಅವರಿಗೆ ವ್ಯವಹಾರ ಮಾಡೋಕೆ ಸರಿ ಇರೋ ದಿನ. ಅದಕ್ಕೆ ಗ್ರಾಹಕರನ್ನ ಗಮನದಲ್ಲಿ ಇಟ್ಕೊಂಡು ಸಂಜೆ ಮೇಲೂ ಬ್ಯಾಂಕ್ ತೆರೆಯೋಕೆ ಯೋಚನೆ ಮಾಡ್ತಿದೆ.ವಾರಕ್ಕೆ 2 ದಿನ ರಜೆ ಸಿಗಬೇಕಂದ್ರೆ ಉಳಿದ 5 ದಿನ ಬ್ಯಾಂಕ್ ನೌಕರರು ಜಾಸ್ತಿ ಕೆಲಸ ಮಾಡಬೇಕಾಗತ್ತೆ. ಅದಲ್ಲದೆ ಎರಡು ಶಿಫ್ಟ್‌ನಲ್ಲಿ ಕೆಲಸ ಇರಬಹುದು.