ಸೆಕ್ಸ್ ಮಾಡುವಾಗ ಜನರು ಕೆಲವೊಂದು ತಪ್ಪುಗಳನ್ನು ಮಾಡ್ತಾರೆ. ಇದರಿಂದಾಗಿ ಅವರ ಲೈಂಗಿಕ ಜೀವನದಲ್ಲಿ ಅನೇಕ ರೀತಿಯ ಸಮಸ್ಯೆಗಳು ಎದುರಿಸಬೇಕಾಗಿ ಬರುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ನಿಮ್ಮ ಸಂಗಾತಿಯೊಂದಿಗೆ ಸಂಬಂಧವನ್ನು ರೂಪಿಸುವ ಮೊದಲು ಕೆಲವು ಪ್ರಮುಖ ಕೆಲಸವನ್ನು ಮಾಡುವುದು ಅಗತ್ಯ. ಆವಾಗ ಮಾತ್ರ ನೀವು ಆರೋಗ್ಯಕರ ಲೈಂಗಿಕ ಜೀವನವನ್ನು ನಡೆಸಲು ಸಾಧ್ಯವಾಗುತ್ತದೆ.
ಸೋಮಾರಿತನ ಮತ್ತು ಅಜಾಗರೂಕತೆಯಿಂದಾಗಿ ಸಾಮಾನ್ಯವಾಗಿ ಕಡೆಗಣಿಸಲ್ಪಡುವ ವಿಷಯಗಳನ್ನು ನಾವು ಇಲ್ಲಿ ಚರ್ಚಿಸಲಿದ್ದೇವೆ. ಈ ಸಮಸ್ಯೆ ದೀರ್ಘಕಾಲದಿಂದ ಕಂಡು ಬಂದರೂ ಅದರ ಬಗ್ಗೆ ಹೆಚ್ಚಿನ ಜನರು ಗಂಭೀರವಾಗಿ ಪರಿಗಣಿಸೋದಿಲ್ಲ. ಹಾಗಾದ್ರೆ ಬನ್ನಿ, ಸೆಕ್ಸ್ ಸಮಯದಲ್ಲಿ ಏನು ಮಾಡಬೇಕು ಅನ್ನೋದನ್ನು ತಿಳಿಯಿರಿ.
ದೇಹದ ಮೇಲಿರುವ ಪ್ರೀತಿ!
ತನ್ನ ದೇಹದ ಬಗ್ಗೆ ಮಹಿಳೆಗೆ ಯಾವ ರೀತಿಯ ಭಾವನೆಯಿದೆ ಎನ್ನುವುದರ ಮೇಲೆ ಆಕೆ ಲೈಂಗಿಕ ಕ್ರಿಯೆ ಆನಂದಿಸುವುದು ಅವಲಂಬಿಸಿದೆ. ಮಹಿಳೆಯರಿಗೆ ತಮ್ಮ ದೇಹದ ಮೇಲಿರುವ ಪ್ರೀತಿಯು ಅವರ ಲೈಂಗಿಕ ಕ್ರಿಯೆ ಮೇಲೆ ಪರಿಣಾಮ ಬೀರುವುದು. ದೇಹದ ಬಗ್ಗೆ ಧನಾತ್ಮಕವಾಗಿರುವ ಭಾವನೆಗಳಿದ್ದರೆ ಆಗ ಲೈಂಗಿಕ ಜೀವನವು ತೃಪ್ತಿದಾಯಕ ವಾಗಿರುವುದು ಮತ್ತು ನಕಾರಾತ್ಮಕ ವಾಗಿದ್ದರೆ ಆಗ ಲೈಂಗಿಕ ಜೀವನ ತೃಪ್ತಿ ನೀಡಲ್ಲ.
ನಕಾರಾತ್ಮಕ ಭಾವನೆ
ನಕಾರಾತ್ಮಕ ಭಾವನೆ ಹೊಂದಿರುವ ಮಹಿಳೆಯು ಲೈಂಗಿಕ ಕ್ರಿಯೆ ವೇಳೆ ಚಂಚಲತೆ ಹಾಗೂ ಸ್ವಯಂ ಜಾಗೃತ ವಾಗಿರುವರು. ಇದರಿಂದ ಲೈಂಗಿಕ ಪರಾಕಾಷ್ಠೆ ಮೇಲೆ ಪರಿಣಾಮ ಬೀರುವುದು. ತುಂಬಾ ಸುಂದರವಾಗಿ ಕಾಣುವ ಮಹಿಳೆಯೊಂದಿಗೆ ಹಾಸಿಗೆ ಹಂಚಿಕೊಳ್ಳುವ ಪುರುಷರು ಇಂತಹ ವಿಷಯಗಳನ್ನೆಲ್ಲಾ ಅರಗಿಸಿಕೊಳ್ಳುವರು. ಆದರೆ ಆಕೆ ತುಂಬಾ ಸುಂದರವಾಗಿ ಕಾಣುತ್ತಾಳೆನ್ನುವ ಕಾರಣಕ್ಕೆ ಒಳ್ಳೆಯ ಭಾವನೆ ಕೂಡ ಮೂಡಬೇಕೆನ್ನುವ ಅರ್ಥವಲ್ಲ.
ಮಹಿಳೆಯರ ಪರಾಕಾಷ್ಠೆಗಿಂತ ಪುರುಷರ ಪರಾಕಾಷ್ಠೆ ಮುಖ್ಯ!
ಪುರುಷರಿಗಿಂತ ಮಹಿಳೆಯರು ಲೈಂಗಿಕ ಕ್ರಿಯೆ ಆನಂದಿಸುವುದು ತುಂಬಾ ಕಡಿಮೆ ಎಂದು ಅಧ್ಯಯನಗಳು ಹೇಳಿವೆ. ಅದರಲ್ಲೂ ಹದಿಹರೆಯ ಮಹಿಳೆಯರು ಹದಿಹರೆಯದ ಪುರುಷರಿಗಿಂತ ಅರ್ಧದಷ್ಟು ಮಾತ್ರ ಪರಾಕಾಷ್ಠೆ ತಲುಪುವರು. ಇದು ಯಾಕೆಂದರೆ ನಾವು ಹಿಂದಿನಿಂದಲೂ ಪುರುಷರು ಮಾತ್ರ ಪರಾಕಾಷ್ಠೆ ತಲುಪಬೇಕು ಎಂದು ನಂಬಿಕೊಂಡು ಬಂದಿರುವವರು. ಲೈಂಗಿಕ ಕ್ರಿಯೆ ವೇಳೆ ಶೇ. 8ಷ್ಟು ಮಹಿಳೆಯರು ಮಾತ್ರ ಪರಾಕಾಷ್ಠೆ ತಲುಪಬಹುದು. ಆದರೆ ಪ್ರತಿಯೊಬ್ಬ ಪುರುಷ ಕೂಡ ಪರಾಕಾಷ್ಠೆಗೆ ತಲುಪುತ್ತಾನೆ.
ಮಹಿಳಾ ಸಂಗಾತಿಯ ಪರಾಕಾಷ್ಠೆ
ಮಹಿಳಾ ಸಂಗಾತಿಯ ಪರಾಕಾಷ್ಠೆಯಲ್ಲಿ ಪುರುಷರು ಹೆಚ್ಚು ಗಮನಹರಿಸಿದರೆ ಆಕೆಯೂ ಆನಂದಿಸುವಳು. ಆರಂಭಿಕ ಲೈಂಗಿಕ ಸಂಬಂಧದ ಮೇಲೆ ಪರಾಕಾಷ್ಠೆಯ ಅಂತರವು ನಿಗದಿಯಾಗಿರುವುದು. ಮೊದಲ ಸಲ ಮಹಿಳೆಯು ಪರಾಕಾಷ್ಠೆಗೆ ತಲುಪಲು ಪುರುಷರು ಹೆಚ್ಚು ಪ್ರಯತ್ನಿಸಲ್ಲ. ಸಂಬಂಧದಲ್ಲಿ ಹೆಚ್ಚು ಬದ್ಧರಾಗಿರುವಂತಹ ಪುರುಷರು ತನ್ನ ಮಹಿಳಾ ಸಂಗಾತಿಯ ಪರಾಕಾಷ್ಠೆಗೆ ಹೆಚ್ಚು ಗಮನಹರಿಸುವರು. ಇದರಿಂದ ಪರಾಕಾಷ್ಠೆಯ ಅಂತರವು ಕಡಿಮೆಯಾಗುವುದು.
ಪುರುಷರಂತೆ ಮಹಿಳೆಯರಿಗೆ ಪೋಲಿ ಮಾತುಗಳು ಇಷ್ಟ
ಹಾಸಿಗೆ ಮೇಲೆ ಪುರುಷರು ತಮ್ಮ ಅಧಿಪತ್ಯವು ಹೆಚ್ಚಾಗಿರಬೇಕೆಂದು ಬಯಸುವರು. ಅದೇ ಮಹಿಳೆಯರು ದೈಹಿಕ ಸಂತೋಷಕ್ಕಿಂತ ಹೆಚ್ಚಾಗಿ ನಿಜವಾದ ಪ್ರೀತಿ ಬಯಸುವರು. ಪೋಲಿ ಮಾತುಗಳನ್ನು ಮಹಿಳೆಯರು ಹೆಚ್ಚು ಮುಕ್ತವಾಗಿ ಆಡುವುದಿಲ್ಲವೆಂದು ಹಿಂದಿನಿಂದಲೂ ತಿಳಿದುಕೊಂಡಿರುವ ವಿಚಾರಗಳು. ಆದರೆ 2011ರಲ್ಲಿ ನಡೆಸಿರುವ ಅಧ್ಯಯನವೊಂದರ ಪ್ರಕಾರ ತಮ್ಮ ಎರಡು ರೀತಿಯ ಬೇಡಿಕೆಯು ಪರಿಸ್ಥಿತಿಗೆ ಅನುಗುಣವಾಗಿದ್ದರೆ ಅವರು ಪೋಲಿ ಮಾತುಗಳಲ್ಲಿ ತೊಡಗಿಕೊಳ್ಳುವರು.
ಅವರು ಇದರ ಬಗ್ಗೆ ನಾಚಿಕೆಯಾಗಬಾರದು
ಲೈಂಗಿಕ ಸಂಗಾತಿಯು ತುಂಬಾ ಕೌಶಲ್ಯ ಹೊಂದಿರಬೇಕು ಮತ್ತು ಸಂತೋಷದ ಅನುಭವ ನೀಡಬೇಕು. ಈ ಎರಡು ಅಂಶಗಳು ಇದ್ದರೆ ಆಗ ಮಹಿಳೆಯರು ಕೂಡ ಪೋಲಿ ಮಾತುಗಳಲ್ಲಿ ತೊಡಗಿಕೊಳ್ಳುವರು.
ಸಾಮಾನ್ಯವಾಗಿ ಮಹಿಳೆ 10-20 ನಿಮಿಷದಲ್ಲಿ ಪರಾಕಾಷ್ಠೆ ತಲುಪುವಳು!
ಕ್ಲೈಮ್ಯಾಕ್ಸ್ ತಲುಪಲು ಪುರುಷರಿಗೆ ಸುಮಾರು 7ರಿಂದ 14 ನಿಮಿಷ ಬೇಕಾಗುವುದು. ಅದೇ ಮಹಿಳೆಯರಿಗೆ ನೇರವಾಗಿ ನಿಮ್ಮ ಶಿಶ್ನವನ್ನು ಅವರ ಯೋನಿ ಮೇಲೆ ಪ್ರಯೋಗ ಮಾಡಿದರೆ ಸಾಕಾಗದು. ಇದಕ್ಕೆ ಮೊದಲು ಕೆಲವು ಆಟಗಳನ್ನು ಆಡಿದರೆ ಆಗ ಅವರು ಬೇಗನೆ ಪರಾಕಾಷ್ಠೆ ತಲುಪುವರು.