ಬೆಂಗಳೂರು:- ಇಂದಿನಿಂದ ಐಪಿಎಲ್ 2025 ಪ್ರಾರಂಭ ಆಗುತ್ತಿದ್ದು, ಕೊಲ್ಕತ್ತಾ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಳೂರು ತಂಡದ ನಡುವೆ ಇಂದು ಉದ್ಘಾಟನೆ ಪಂದ್ಯ ನಡೆಯಲಿದೆ.
Karnataka Bandh: ಸಿಲಿಕಾನ್ ಸಿಟಿಗೆ ತಟ್ಟದ ಬಂದ್ ಬಿಸಿ- ಹೇಗಿದೆ ಪರಿಸ್ಥಿತಿ?
ಮೊದಲ ಪಂದ್ಯದ ಆರಂಭಕ್ಕೂ ಮುನ್ನ ಆರ್ಸಿಬಿ ತಂಡದ ನಾಯಕ ರಜತ್ ಪಾಟಿದಾರ್ ಅವರು ಎರಡು ಕೈ ಜೋಡಿಸಿ ನಟ ರಾಜ್ಕುಮಾರ್ ಅವರ ಪ್ರಸಿದ್ಧ “ಅಭಿಮಾನಿಗಳೇ ನಮ್ಮ ದೇವರು” ಡೈಲಾಗ್ ಹೊಡೆದು ಅಭಿಮಾನಿಗಳಿಗೆ ಕೃತಜ್ಞತೆ ವ್ಯಕ್ತಪಡಿಸಿದ್ದಾರೆ.
ಕಳೆದ 16 ಆವೃತ್ತಿಯ ಐಪಿಎಲ್ನಲ್ಲಿ ಆರ್ಸಿಬಿ ತಂಡ ಇಲ್ಲಿಯವರೆಗೆ ಚಾಂಪಿಯನ್ ಆಗಿ ಹೊರಹೊಮ್ಮಿಲ್ಲ. ಚಾಂಪಿಯನ್ ಆಗದೇ ಇದ್ದರೂ ಅಭಿಮಾನಿಗಳ ಪ್ರೀತಿ ಮಾತ್ರ ಕಮ್ಮಿಯಾಗಿಲ್ಲ. ಇದಕ್ಕೆ ಸಾಕ್ಷಿ ಯಾವುದು ಎಂದರೆ ಆರ್ಸಿಬಿ ಪಂದ್ಯಗಳು. ಬೆಂಗಳೂರು ಮಾತ್ರವಲ್ಲ ಬೇರೆ ಕಡೆ ನಡೆದ ಪಂದ್ಯಗಳಲ್ಲೂ ಸ್ಟೇಡಿಯಂ ಭರ್ತಿಯಾಗಿರುತ್ತದೆ. ಅಭಿಮಾನಿಗಳು ಆರ್ಸಿಬಿ ಪ್ಲೇ ಕಾರ್ಡ್ ಹಿಡಿದು ತಂಡಕ್ಕೆ ಪ್ರೋತ್ಸಾಹ ನೀಡುತ್ತಿರುತ್ತಾರೆ.
ಬೆಂಗಳೂರಿನಲ್ಲಿ ಆರ್ಸಿಬಿ ಪಂದ್ಯ ಆಯೋಜನೆಗೊಂಡರೆ ದುಬಾರಿ ಟಿಕೆಟ್ ದರ ಇದ್ದರೂ ಇದ್ದರೂ ಅದು ಮಾರಾಟವಾಗುತ್ತದೆ. ಸ್ಟೇಡಿಯಂನಲ್ಲಿ ಆರ್ಸಿಬಿ ಆರ್ಸಿಬಿ…ಧ್ವನಿ ಮೊಳಗುತ್ತಿರುತ್ತದೆ. ಪುರುಷರ ಕ್ರಿಕೆಟ್ ಮಾತ್ರವಲ್ಲ, ಆರ್ಸಿಬಿ ಮಹಿಳೆಯರ ತಂಡಕ್ಕೂ ಅಭಿಮಾನಿಗಳು ಪ್ರೋತ್ಸಾಹ ನೀಡುತ್ತಾರೆ. ಈ ಕಾರಣಕ್ಕೆ ಐಪಿಎಲ್ ಆರಂಭಕ್ಕೆ ಮೊದಲು ನೂತನ ನಾಯಕ ರಜತ್ ಪಾಟಿದಾರ್ ಅವರು ಮಿಸ್ಟರ್ ನ್ಯಾಗ್ಸ್ ಅವರ ಆರ್ಸಿಬಿ ಇನ್ಸೈಡ್ ಶೋನಲ್ಲಿ ಅಭಿಮಾನಿಗಳೇ ನಮ್ಮ ದೇವರು ಎಂದು ಹೆಮ್ಮೆಯಿಂದ ಹೇಳಿದ್ದಾರೆ.