ಮುಂಬೈ:- ಕುಡಿದ ಮತ್ತಲ್ಲಿ ವ್ಯಕ್ತಿಯೊಬ್ಬ ರೈಲನ್ನೇ ತಡೆದು ನಿಲ್ಲಿಸಿದ ಘಟನೆ ಮುಂಬೈನಲ್ಲಿ ಜರುಗಿದೆ. ಅದು ಹೆಂಗ್ ಹೋಗ್ತೀರಾ ಎಂದು ಹೇಳಿ ರೈಲು ಹೋಗದಂತೆ ತಡೆದು ನಿಲ್ಲಿಸಿ ಈ ಕುಡುಕ ಭಾರೀ ಅವಾಂತರ ಸೃಷ್ಟಿಸಿದ್ದಾನೆ.
ನೀವು ನಿತ್ಯ ಎಷ್ಟು ಸಮಯ ಫೋನ್ ನೋಡ್ತೀರಾ? ಸಮೀಕ್ಷೆ ಬಿಚ್ಚಿಟ್ಟ ಶಾಕಿಂಗ್ ವರದಿ ಇಲ್ಲಿದೆ!
ಸಧ್ಯ ಈತನ ಮಂಗನಾಟವನ್ನು ಕಂಡು ನೋಡುಗರು ಫುಲ್ ಸುಸ್ತಾಗಿದ್ದಾರೆ. ಎಣ್ಣೆ ಏಟಲ್ಲಿ ಕುಡುಕನೊಬ್ಬ ಇಲ್ಲಿನ ಲೋಕಲ್ ಟ್ರೈನ್ನನ್ನೇ ತಡೆದು ನಿಲ್ಲಿಸಿದ್ದಾನೆ. ರೈಲಿನ ಕಂಪಾರ್ಟ್ಮೆಂಟ್ ಮೇಲೆ ಹಾರಿ ಮಂಗನಾಟ ಆಡಿದ್ದು, ಮಾತ್ರವಲ್ಲದೆ ಹಳಿಯ ಮೇಲೆ ಕುಳಿತು ಅದು ಹೆಂಗ್ ಹೋಗ್ತೀರಾ ನಾನು ನೋಡ್ತೀನಿ ಎನ್ನುತ್ತಾ ರೈಲು ಮುಂದೆ ಚಲಿಸದಂತೆ ತಡೆದು ನಿಲ್ಲಿಸಿದ್ದಾನೆ. ಕುಡುಕನ ಈ ಅವಾಂತರದಿಂದ ಮಾಹಿಮ್ ರೈಲು ನಿಲ್ದಾಣದಲ್ಲಿ ರೈಲು ಸೇವೆಗಳಲ್ಲಿ ವಿಳಂಬವಾಯಿತಲ್ಲದೆ, ಇದರಿಂದ ಪ್ರಯಾಣಿಕರು ಕೂಡಾ ತೊಂದರೆಯನ್ನು ಅನುಭವಿಸಿದ್ದಾರೆ.