ಇಂದಿನ ದಿನಗಳಲ್ಲಿ ಸಕ್ಕರೆ ಕಾಯಿಲೆ ಪ್ರತಿಯೊಬ್ಬರಲ್ಲಿ ಕಂಡು ಬರುತ್ತಿದೆ. ಹಾಗಾಗಿ ಇದನ್ನು ತಡೆಗಟ್ಟಲು ಉತ್ತಮ ಆರೋಗ್ಯ ಪದ್ಧತಿಯನ್ನು ಅಳವಡಿಸಿಕೊಳ್ಳುವುದು ಅಗತ್ಯವಾಗಿದೆ.
ಬೆಳಿಗ್ಗೆ ಎದ್ದಾಗ ಕಾಣಿಸಿಕೊಳ್ಳುವ ಕೆಲವು ಲಕ್ಷಣಗಳಿಗೂ ಡಯಾಬಿಟಿಸ್ ರೋಗಕ್ಕೂ ಸಂಬಂಧ ಇರುತ್ತದೆ. ಇವುಗಳನ್ನು ನಿರ್ಲಕ್ಷ ಮಾಡದೆಯೇ ಸರಿಯಾಗಿ ಪತ್ತೆ ಹಚ್ಚಬೇಕಾಗುತ್ತದೆ. ಹಾಗಾದರೆ ಬೆಳಿಗ್ಗೆ ಯಾವ ರೀತಿಯ ಲಕ್ಷಣಗಳು ಕಂಡು ಬರುತ್ತದೆ? ಡಯಾಬೇಟಿಸ್ ಹೆಚ್ಚುತ್ತಿರಲು ಕಾರಣವೇನು? ಅದನ್ನು ತಡೆಯುವುದು ಹೇಗೆ ಎಂಬುದನ್ನು ತಿಳಿದುಕೊಳ್ಳಿ.
ಕರ್ನಾಟಕ ಬಂದ್: ಪರೀಕ್ಷೆ ಬರೆಯುವ 10th ಮಕ್ಕಳಿಗೆ ಟೆನ್ಷನ್- ನಿರ್ಧಾರಕ್ಕೆ ಬರದ ಶಿಕ್ಷಣ ಇಲಾಖೆ!
ವೈದ್ಯರ ಪ್ರಕಾರ, ಕೆಲವು ಲಕ್ಷಣಗಳನ್ನು ಕಡೆಗಣಿಸಬಾರದು. ಬೆಳಿಗ್ಗೆ ಎದ್ದಾಗ ಆಯಾಸದ ಅನುಭವ ಆಗುವಂತದ್ದು ಅಥವಾ ಬಾಯಿ ಒಣಗಿದ ಅನುಭವ ಆಗುವುದು ಅಥವಾ ಕೆಲವರಿಗೆ ಹಸಿವು ಹೆಚ್ಚು ಅಥವಾ ಕಡಿಮೆ ಆಗುವುದು, ಇನ್ನು ಕೆಲವರಿಗೆ ಆಗಾಗ ಮೂತ್ರ ವಿಸರ್ಜನೆಗೆ ಹೋಗಬೇಕು ಎನಿಸುವುದು ಡಯಾಬಿಟೀಸ್ ಲಕ್ಷಣವಾಗಿರಬಹುದು. ಹಾಗಾಗಿ ಈ ರೀತಿ ಅನುಭವ ಆಗುತ್ತಿದ್ದರೆ ಅದನ್ನು ಕಡೆಗಣಿಸಕೂಡದು. ತಕ್ಷಣವೇ ನಿಮ್ಮ ಶುಗರ್ ಲೆವೆಲ್ ಅನ್ನು ಪರೀಕ್ಷಿಸಿಕೊಳ್ಳಬೇಕು” ಎಂದು ವೈದ್ಯರು ಹೇಳುತ್ತಾರೆ.
ಟೈಪ್-2 ಡಯಾಬೇಟಿಸ್ ಬರಲು ಆಹಾರ ಮತ್ತು ಜೀವನಶೈಲಿ ಹಾಳಾಗಿರುವುದು ಮುಖ್ಯ ಕಾರಣವಾಗುತ್ತದೆ. ಸಾಮಾನ್ಯವಾಗಿ ಮೊದಲು, 50 ವರ್ಷಗಳ ಬಳಿಕ ಜನರಿಗೆ ಟೈಪ್- 2 ಡಯಾಬೇಟಿಸ್ ಕಾಣಿಸಿಕೊಳ್ಳುತ್ತಿತ್ತು ಆದರೆ ಈಗ ಚಿಕ್ಕ ವಯಸ್ಸಿನಲ್ಲಿ, ಅಂದರೆ 25 ರಿಂದ 35 ವರ್ಷ ವಯಸ್ಸಿನವರಲ್ಲಿಯೇ ಈ ಕಾಯಿಲೆ ಕಂಡುಬರುತ್ತಿದೆ. ಇದಕ್ಕೆ ಆಹಾರ ಪದ್ಧತಿ ಮತ್ತು ಜೀವನಶೈಲಿಯಲ್ಲಿ ನಾವು ಮಾಡಿಕೊಂಡಂತಹ ಬದಲಾವಣೆಗಳೇ ಕಾರಣವಾಗಿರುತ್ತದೆ. ಅದಲ್ಲದೆ ಜನರ ಆಹಾರದಲ್ಲಿ ಜಂಕ್ ಫುಡ್ ಸೇವನೆ ಅತಿರೇಕವಾಗಿದೆ. ಮದ್ಯಪಾನ ಹೆಚ್ಚುತ್ತಿದೆ, ನಿದ್ರೆ ಹಾಳಾಗುತ್ತಿದೆ. ಹೀಗೆ ಅನೇಕ ಕಾರಣಗಳಿದ್ದು, ಜನರು ಟೈಪ್-2 ಡಯಾಬೇಟಿಸ್ ಕಾಯಿಲೆಗೆ ಶಿಕಾರಿಗಳಾಗುತ್ತಿದ್ದಾರೆ. ಅದಲ್ಲದೆ ಈ ಡಯಾಬೇಟಿಸ್ ಕಾಯಿಲೆಯಿಂದಾಗಿ ಜನರಿಗೆ ಹಲವು ರೀತಿಯ ಆರೋಗ್ಯ ಸಮಸ್ಯೆಗಳು ಕಂಡುಬರಲು ಆರಂಭಿಸಿವೆ.