ಸಾಮಾನ್ಯವಾಗಿ ನಮ್ಮ ಮನೆಗೆ ತರುವ ದಿನಸಿ ಪದಾರ್ಥಗಳು, ಹಾಲಿನ ಉತ್ಪನ್ನಗಳು, ದಿನ ನಿತ್ಯ ಉಪಯೋಗಿಸುವ ಸೋಪು, ಶಾಂಪೂವಿನಿಂದ ಹಿಡಿದು ಔಷಧಿಗಳ ಪ್ಯಾಕೆಟ್ ಗಳಿಗೂ ಮುಕ್ತಾಯ ದಿನಾಂಕವನ್ನು ನಮೂದಿಸಲಾಗಿರುತ್ತದೆ. ಹಾಗೆಯೇ ನೀರಿನ ಬಾಟಲಿಗಳ ಮೇಲೆಯೂ ಮುಕ್ತಾಯ ದಿನಾಂಕವನ್ನು ಕೊಟ್ಟಿರುತ್ತಾರೆ. ಆದರೆ ಬಹುತೇಕರು ಇದನ್ನು ಗಮನಿಸುವುದಿಲ್ಲ, ಕೆಲವರು ನೀರಿಗೆಲ್ಲಾ ಮುಕ್ತಾಯ ದಿನಾಂಕವೇ ಎಂದು ನಕ್ಕು ಸಿಕ್ಕ ಸಿಕ್ಕ ಕಂಪೆನಿಗಳ ನೀರಿನ ಬಾಟಲಿಗಳನ್ನು ತೆಗೆದುಕೊಂಡು ಕುಡಿಯಲು ಶುರು ಮಾಡುತ್ತಾರೆ. ಆದರೆ ಅವಧಿ ಮೀರಿದ ನೀರನ್ನು ಕುಡಿಯುವುದರಿಂದ ಆರೋಗ್ಯದ ಮೇಲೆ ಏನೆಲ್ಲಾ ದುಷ್ಪರಿಣಾಮಗಳು ಬೀರುತ್ತವೆ ಗೊತ್ತಾ?.
ಶಾಸಕರ ಅಮಾನತು ಮಾಡಿದ ಸ್ಪೀಕರ್ ನಿರ್ಧಾರ ಸಹಿ ; ಸಚಿವ ದಿನೇಶ್ ಗುಂಡೂರಾವ್
ಪ್ರಸ್ತುತ ದಿನಗಳಲ್ಲಿ ಪ್ಲಾಸ್ಟಿಕ್ ಮನುಷ್ಯ ಸೇರಿದಂತೆ ಜೀವಿಗಳ ಆರೋಗ್ಯದ ಮೇಲೆ ಏನೆಲ್ಲಾ ಪರಿಣಾಮಗಳನ್ನು ಬೀರುತ್ತದೆ ಎಂಬುದನ್ನು ನೋಡುತ್ತಲೇ ಇದ್ದೇವೆ. ಆದ್ರೂ ಕೂಡ ಜನರು ಈ ಪ್ಲಾಸ್ಟಿಕ್ ಬಳಸುವುದನ್ನು ಕಡಿಮೆ ಮಾಡ್ತಾ ಇಲ್ಲ. ಪ್ಲಾಸ್ಟಿಕ್ ಬಳಕೆಯಿಂದ ಜೀವ ಜಲಗಳು ಕೂಡ ಮಲಿನವಾಗುವುದನ್ನು ನಾವು ನೋಡ್ತಾ ಇದ್ದೇವೆ.
ಅರೇ ಈಗೇಕೆ ಪ್ಲಾಸ್ಟಿಕ್ ವಿಚಾರ ಅಂತಾ ಯೋಚನೆ ಮಾಡ್ತಾ ಇದ್ದೀರಾ. ಈಗಂತೂ ಜನರು ಪ್ಲಾಸ್ಟಿಕ್ ಬಾಟಲಿಯಲ್ಲಿ ನೀರು ತುಂಬಿಸಿ ಕಡಿಯುವುದು ಸಾಮಾನ್ಯ. ಅದರಲ್ಲೂ ನಗರವಾಸಿಗಳು ಇತ್ತೀಚಿನ ದಿನಗಳಲ್ಲಿ 20 ಲೀಟರ್ ನೀರಿನ ಕ್ಯಾನ್ನಲ್ಲಿ ನೀರು ತುಂಬಿಸಿ ಅವುಗಳನ್ನು ವಾರಗಟ್ಟಲೆ ಇಟ್ಟು ಕುಡಿಯುವುದನ್ನು ನೋಬಹುದು
ಹಾಗಿದ್ರೆ, ಈ ರೀತಿಯ 20 ಲೀಟರ್ ನೀರಿನ ಕ್ಯಾನ್ನಲ್ಲಿ ನೀರನ್ನು ಇರಿಸಿ ಕುಡಿಯುವುದರಿಂದ ಏನೆಲ್ಲಾ ಪರಿಣಾಮಗಳು ಉಂಟಾಗುತ್ತವೆ. ಇದರಲ್ಲಿ ಕುಡಿಯುವುದು ಉತ್ತಮವೇ ಅಥವಾ ಕೆಡುಕಾಗುತ್ತಾ ಎಂಬುದನ್ನು ಈ ಸುದ್ದಿಯಲ್ಲಿ ತಿಳಿಯೋಣ ಬನ್ನಿ.
ಮನೆ ಮತ್ತು ಕಚೇರಿಗಳಿಗೆ ವಿತರಿಸಲಾಗುವ 20 ಲೀಟರ್ ಕುಡಿಯುವ ನೀರಿನ ಕ್ಯಾನ್ಗಳನ್ನು 50 ಕ್ಕಿಂತ ಹೆಚ್ಚು ಬಾರಿ ಬಳಸಬಾರದು ಎಂದು ಆಹಾರ ಸುರಕ್ಷತಾ ಇಲಾಖೆ ಆದೇಶಿಸಿದೆ. ಶೇಕಡಾ 20 ಕ್ಕಿಂತ ಹೆಚ್ಚು ಗೀರುಗಳು ಅಥವಾ ಕೊಳಕು ಹೊಂದಿರುವ ಕುಡಿಯುವ ನೀರಿನ ಕ್ಯಾನ್ಗಳನ್ನು ಮರುಬಳಕೆ ಮಾಡಬಾರದು ಎಂದು ಸಹ ಸೂಚಿಸಲಾಗಿದೆ.
ಚೆನ್ನೈ, ಕಾಂಚೀಪುರಂ ಮತ್ತು ತಿರುವಳ್ಳೂರು ಜಿಲ್ಲೆಗಳ ಕ್ಯಾನ್ ನೀರಿಲ್ಲಿ ಇರಿಸಿ ಕುಡಿಯುವ ನೀರು ಮಾರಾಟ ಮಾಡುವ ಮತ್ತು ಮಾರಾಟಗಾರರಿಗೆ ಚೆನ್ನೈನಲ್ಲಿ ಸೂಕ್ಷ್ಮತೆಯ ತರಬೇತಿ ಕಾರ್ಯಕ್ರಮವನ್ನು ನಡೆಸಲಾಯಿತು.
ಈ ಒಂದು ತರಬೇತಿ ಕಾರ್ಯಾಗಾ ಜಿಲ್ಲಾ ಆಹಾರ ಸುರಕ್ಷತಾ ಅಧಿಕಾರಿ ಡಾ.ಸತೀಶ್ ಕುಮಾರ್ ಅಧ್ಯಕ್ಷತೆಯಲ್ಲಿ ಜರುಗಿತು. ಈ ಕಾರ್ಯಕ್ರಮದಲ್ಲಿ 450 ಕ್ಕೂ ಹೆಚ್ಚು ಕುಡಿಯುವ ನೀರಿನ ತಯಾರಕರು ಮತ್ತು ಮಾರಾಟಗಾರರು ಭಾಗವಹಿಸಿದ್ದರು. ಆ ಸಮಯದಲ್ಲಿ, ಅವರಿಗೆ ಆಹಾರ ಸುರಕ್ಷತಾ ಇಲಾಖೆಯಿಂದ ವಿವಿಧ ಸೂಚನೆಗಳನ್ನು ನೀಡಲಾಯಿತು.
ಅದರಲ್ಲೂ ಕುಡಿಯುವ ನೀರಿನ ಕ್ಯಾನ್ ಅನ್ನು 50 ಕ್ಕಿಂತ ಹೆಚ್ಚು ಬಾರಿ ಬಳಸದಂತೆ ಸೂಚನೆ ನೀಡಲಾಯಿತು. ಅದೇ ರೀತಿ, ಕೊಳಕು ಅಥವಾ ಗೀಚಿದ ಕುಡಿಯುವ ನೀರಿನ ಕ್ಯಾನ್ಗಳನ್ನು ಸಾರ್ವಜನಿಕರಿಗೆ ವಿತರಿಸದಂತೆ ಸೂಚಿಸಲಾಗಿದೆ.
ಇದಲ್ಲದೆ, ನೇರ ಸೂರ್ಯನ ಬೆಳಕಿನಲ್ಲಿ ಇರಿಸಲಾದ ಕುಡಿಯುವ ನೀರಿನ ಕ್ಯಾನ್ಗಳನ್ನು ಬಳಸಬಾರದು ಮತ್ತು ಕುಡಿಯುವ ನೀರಿನ ಗುಣಮಟ್ಟವನ್ನು ಖಚಿತಪಡಿಸಿಕೊಳ್ಳುವುದು ಅಗತ್ಯ ಎಂದು ಒತ್ತಿ ಹೇಳಲಾಯಿತು. ಮುಂದಿನ ವಾರಗಳಲ್ಲಿ ಚೆನ್ನೈ ಮತ್ತು ಸುತ್ತಮುತ್ತಲಿನ ಜಿಲ್ಲೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ 450 ನೀರು ಉತ್ಪಾದನಾ ಘಟಕಗಳನ್ನು ಪರಿಶೀಲಿಸುವುದಾಗಿ ಭದ್ರತಾ ಅಧಿಕಾರಿಗಳು ತಿಳಿಸಿದ್ದಾರೆ.