ಬೆಳಗಾವಿ : ಅಂತರಾಷ್ಟ್ರೀಯ ಮಹಿಳಾ ದಿನ ಅಂಗವಾಗಿ ಸಾಮೂಹಿಕ ಸೀಮಂತ ಕಾರ್ಯಕ್ರಮ ನಡೆಯಲಿದ್ದು, ಇದೇ ಮೊದಲ ಬಾರಿಗೆ ರಾಜ್ಯದಲ್ಲಿ ಮೂರು ಸಾವಿರ ಗರ್ಭೀಣಿಯರ ಸೀಮಂತ ಕಾರ್ಯಕ್ರಮ ನಡೆಯಲಿದೆ. ಇದರ ಬಗ್ಗೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಮಾಹಿತಿ ನೀಡಿದ್ದಾರೆ.
ಬೆಳಗಾವಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಬೆಳಗಾವಿ ನಗರದ ಸಿಪಿಎಡ್ ಮೈದಾನದಲ್ಲಿ 3000 ಜನರಿಗೆ ಸಿಮಂತ್ ಕಾರ್ಯಕ್ರಮವಿದೆ. ಇದು ಸರ್ಕಾರಿ ಕಾರ್ಯಕ್ರಮವಾಗಿದೆ. ಹಿರಿಯ ನಾಗರಿಕರಿಗೆ, ವಿಕಲಚೇತನರಿಗೆ ಇಲಾಖೆ ಯೋಜನೆ ವಿತರಣೆ ಕಾರ್ಯಕ್ರಮ ನಡೆಯಲಿದೆ. ಸೀಮಂತ ಕಾರ್ಯಕ್ರಮದ ಮೂಲಕ ತಾಯಿ, ಮಗು ಆರೋಗ್ಯವಾಗಿ ಇರಲಿ ಅಂತಾ ಕಾರ್ಯಕ್ರಮ ಮಾಡುತ್ತಿದ್ದಾರೆ.
ಬೆಳಗಾವಿ ವಿಭಾಗದ ಐದು ಜಿಲ್ಲಾ ಸ್ವಸಹಾಯ ಗುಂಪುಗಳಿಗೆ ಮಳಿಗೆ ವ್ಯವಸ್ಥೆ ಮಾಡಲಾಗಿದೆ. ಜಿಲ್ಲೆಯ ಎಲ್ಲಾ ಶಾಸಕರಿಗೆ , ಸಂಸದರಿಗೆ ಆಹ್ವಾನ ಕೊಟ್ಟಿದ್ದೇವೆ. ಜಿಲ್ಲಾ ಉಸ್ತುವಾರಿ ಸಚಿವರು ಸಹ ಭಾಗವಹಿಸುತ್ತಿದ್ದಾರೆ. ಸೀಮಂತ ಕಾರ್ಯಕ್ರಮದಲ್ಲಿ ಸೀರೆ ಜೊತೆಗೆ ಉಡಿ ತುಂಬ ಕೆಲಸ ಮಾಡುತ್ತೇವೆ. ಗರ್ಭಿಣಿಯರಿಗೆ ಹೋಳಿಗೆ ಊಟದ ವ್ಯವಸ್ಥೆ ಮಾಡಲಾಗುತ್ತಿದೆ. ಬಿಸಿಲು ಇರೋದ್ರಿಂದ ಜರ್ಮನ್ ಟೆಂಟ್, ನೀರು, ಉಪಹಾರ, ಹೋಳಿ ಊಟ ವ್ಯವಸ್ಥೆಯಿದೆ. ಮನೆಯಿಂದ ಕರೆದುಕೊಂಡು ಬರೋದ್ರಿಂದ ಹಿಡಿದು ವಾಪಸ್ ಸುರಕ್ಷಿತವಾಗಿ ಮನೆ ತಲುಪಿಸುವ ವರೆಗೂ ಕಾಳಜಿ ತೋರಿಸುತ್ತಿದ್ದೇವೆ. ಇಲಾಖೆಯಿಂದ ಗರ್ಭಿಣಿಯರಿಗೆ ನೀಡುವ ಕಿಟ್ ಕೊಡುತ್ತಿದ್ದೇವೆ ಎಂದರು.