Close Menu
Ain Live News
    Facebook X (Twitter) Instagram YouTube
    Tuesday, June 10
    Facebook X (Twitter) Instagram YouTube
    Ain Live News
    Demo
    • Home
    • ಬೆಂಗಳೂರು
    • ರಾಜಕೀಯ
    • ಜಿಲ್ಲೆ
    • ಸಿನಿಮಾ
    • ಲೈಫ್ ಸ್ಟೈಲ್
    • ಜ್ಯೋತಿಷ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಕ್ರೀಡೆ
    • ತಂತ್ರಜ್ಞಾನ
    • ಕೃಷಿ
    • ಗ್ಯಾಲರಿ
    • ವಿಡಿಯೋ
    Facebook X (Twitter) Instagram YouTube
    Ain Live News

    ಯುಗಾದಿ,ರಂಜಾನ್ ಹಬ್ಬ ; ಬೆಂಗಳೂರು-ಬೆಳಗಾವಿ ನಡುವೆ ವಿಶೇಷ ಎಕ್ಸ್ ಪ್ರೆಸ್ ರೈಲು ಸೇವೆ

    By Author AINMarch 24, 2025
    Share
    Facebook Twitter LinkedIn Pinterest Email
    Demo

    ಹುಬ್ಬಳ್ಳಿ: ಈ ಬಾರಿ ಯುಗಾದಿ ಮತ್ತು ರಂಜಾನ್‌ ಹಬ್ಬಗಳು ಒಟ್ಟೊಟ್ಟಿಗೆ ಬಂದಿವೆ. ಮಾ.30 ಯುಗಾದಿ ಹಬ್ಬವಿದ್ದರೆ, ಮಾ.31ರಂದು ರಂಜಾನ್‌ ಹಬ್ಬವಿದೆ. ಹೀಗಾಗಿ ಸಾಲು ಸಾಲು ಸರ್ಕಾರಿ ರಜೆ ಇರೋದ್ರಿಂದಾಗಿ ಬೆಂಗಳೂರಿನಿಂದ ತಮ್ಮ ಊರುಗಳತ್ತ ಪ್ರಯಾಣಿಸುವ ಜನರ ಸಂಖ್ಯೆಯ ಹೆಚ್ಚಾಗಿರಲಿದೆ. ಹೀಗಾಗಿ ಯುಗಾದಿ ಮತ್ತು ರಂಜಾನ್ ಹಬ್ಬದ ಸಂದರ್ಭದಲ್ಲಿ ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ಸರಿದೂಗಿಸಲು ರೈಲ್ವೆ ಮಂಡಳಿಯು ಬೆಂಗಳೂರಿನ ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ಮತ್ತು ಬೆಳಗಾವಿ ನಿಲ್ದಾಣಗಳ ನಡುವೆ ವಿಶೇಷ ಎಕ್ಸ್ ಪ್ರೆಸ್  ರೈಲುಗಳ ಕಾರ್ಯಾಚರಣೆಗೆ ಅನುಮೋದನೆ ನೀಡಿದೆ.

     

    ಈ ವಿಶೇಷ ರೈಲು ಸೇವೆಗಳ ವಿವರಗಳು ಈ ಕೆಳಗಿನಂತಿವೆ:

     

    ರೈಲು ಸಂಖ್ಯೆ 06511/06512 ಎಸ್ಎಂವಿಟಿ ಬೆಂಗಳೂರು-ಬೆಳಗಾವಿ-ಎಸ್ಎಂವಿಟಿ ಬೆಂಗಳೂರು ವಿಶೇಷ ಎಕ್ಸ್ ಪ್ರೆಸ್ ರೈಲು:

    ರೈಲು ಸಂಖ್ಯೆ 06511 ಎಸ್ಎಂವಿಟಿ ಬೆಂಗಳೂರು-ಬೆಳಗಾವಿ ವಿಶೇಷ ಎಕ್ಸ್ ಪ್ರೆಸ್ ರೈಲು ಮಾ.28, 2025 ರಂದು ಸಂಜೆ 7:00 ಗಂಟೆಗೆ ಎಸ್ಎಂವಿಟಿ ಬೆಂಗಳೂರಿನಿಂದ ಹೊರಟು, ಮರುದಿನ ಬೆಳಗ್ಗೆ 07:30ಕ್ಕೆ ಬೆಳಗಾವಿಯನ್ನು ತಲುಪಲಿದೆ.

    ರೈಲು ಸಂಖ್ಯೆ 06512 ಬೆಳಗಾವಿ-ಎಸ್ಎಂವಿಟಿ ಬೆಂಗಳೂರು ವಿಶೇಷ ಎಕ್ಸ್ ಪ್ರೆಸ್ ರೈಲು ಮಾರ್ಚ್ 29, 2025 ರಂದು ಸಂಜೆ 5:00 ಗಂಟೆಗೆ ಬೆಳಗಾವಿಯಿಂದ ಹೊರಟು, ಮರುದಿನ ಬೆಳಗಿನ ಜಾವ 04:30ಕ್ಕೆ ಎಸ್ಎಂವಿಟಿ ಬೆಂಗಳೂರು ತಲುಪಲಿದೆ.

     

    ರೈಲು ಸಂಖ್ಯೆ 06513/06514 ಎಸ್ಎಂವಿಟಿ ಬೆಂಗಳೂರು-ಬೆಳಗಾವಿ-ಎಸ್ಎಂವಿಟಿ ಬೆಂಗಳೂರು ವಿಶೇಷ ಎಕ್ಸ್ ಪ್ರೆಸ್ ರೈಲು:

     

    ರೈಲು ಸಂಖ್ಯೆ 06513 ಎಸ್ಎಂವಿಟಿ ಬೆಂಗಳೂರು-ಬೆಳಗಾವಿ ವಿಶೇಷ ಎಕ್ಸ್ ಪ್ರೆಸ್ ರೈಲು ಮಾರ್ಚ್ 30, 2025 ರಂದು ಸಂಜೆ 7:00 ಗಂಟೆಗೆ ಎಸ್ಎಂವಿಟಿ ಬೆಂಗಳೂರಿನಿಂದ ಹೊರಟು, ಮರುದಿನ ಬೆಳಗ್ಗೆ 07:30ಕ್ಕೆ ಬೆಳಗಾವಿಯನ್ನು ತಲುಪಲಿದೆ.

     

    ರೈಲು ಸಂಖ್ಯೆ 06514 ಬೆಳಗಾವಿ-ಎಸ್ಎಂವಿಟಿ ಬೆಂಗಳೂರು ವಿಶೇಷ ಎಕ್ಸ್ ಪ್ರೆಸ್ ರೈಲು ಮಾರ್ಚ್ 31, 2025 ರಂದು ಸಂಜೆ 5:30ಕ್ಕೆ ಬೆಳಗಾವಿಯಿಂದ ಹೊರಟು, ಮರುದಿನ ಬೆಳಗಿನ ಜಾವ 04:30ಕ್ಕೆ ಎಸ್ಎಂವಿಟಿ ಬೆಂಗಳೂರು ತಲುಪಲಿದೆ.

     

    ಈ ವಿಶೇಷ ರೈಲುಗಳು  (06511/12 ಮತ್ತು 06513/14) ಎರಡೂ ಮಾರ್ಗಗಳಲ್ಲಿ ತುಮಕೂರು, ಅರಸೀಕೆರೆ, ಬೀರೂರು, ದಾವಣಗೆರೆ, ಹರಿಹರ, ಎಸ್ಎಂಎಂ ಹಾವೇರಿ, ಎಸ್ಎಸ್ಎಸ್ ಹುಬ್ಬಳ್ಳಿ, ಧಾರವಾಡ, ಅಳ್ನಾವರ, ಲೋಂಡಾ ಮತ್ತು ಖಾನಾಪುರ ನಿಲ್ದಾಣಗಳಲ್ಲಿ ನಿಲುಗಡೆಯಾಗಲಿವೆ.

    ಈ ರೈಲುಗಳಲ್ಲಿ 1-ಫಸ್ಟ್ ಎಸಿ ಕೋಚ್, 2-ಎಸಿ ಟು ಟೈರ್ ಬೋಗಿಗಳು, 5-ಎಸಿ ತ್ರಿ ಟೈರ್ ಬೋಗಿಗಳು, 8-ಸ್ಲೀಪರ್ ಕ್ಲಾಸ್ ಬೋಗಿಗಳು, 4-ಜನರಲ್ ಸೆಕೆಂಡ್ ಕ್ಲಾಸ್ ಬೋಗಿಗಳು ಮತ್ತು ಎಸ್ಎಲ್ಆರ್ / ಡಿ ಬೋಗಿಗಳು ಇರಲಿವೆ.

    ಕಾಯ್ದಿರಿಸುವಿಕೆ, ಆಗಮನ ಮತ್ತು ನಿರ್ಗಮನ ಸಮಯ ಮತ್ತು ಹೆಚ್ಚಿನ ವಿವರಗಳಿಗಾಗಿ, ಪ್ರಯಾಣಿಕರು ಅಧಿಕೃತ ರೈಲ್ವೆ ವೆಬ್‌ಸೈಟ್‌ಗೆ ಭೇಟಿ ನೀಡಬಹುದು ಅಥವಾ ಹತ್ತಿರದ ರೈಲ್ವೆ ಬುಕಿಂಗ್ ಕೌಂಟರ್ ಗಳನ್ನು ಸಂಪರ್ಕಿಸಬಹುದು

     

    Demo
    Share. Facebook Twitter LinkedIn Email WhatsApp

    Related Posts

    ಮಂಗಳೂರಿನಲ್ಲಿ ಪೊಲೀಸರ ದುಂಡಾವರ್ತನೆ ಜಾಸ್ತಿಯಾಗಿದೆ: ಬಿವೈ ವಿಜಯೇಂದ್ರ!

    June 9, 2025

    ಬಡವರ ಕಷ್ಟಕ್ಕೆ ಅಧಿಕಾರಿಗಳು ಕೂಡಲೆ ಸ್ಪಂದಿಸಬೇಕು:: ಶಾಸಕ ಸಿದ್ದು ಸವದಿ

    June 9, 2025

    ಮಂಡ್ಯ ಕೃಷಿ ವಿ.ವಿ ಆಡಳಿತಾತ್ಮಕ ವರ್ಗಾವಣೆಗೆ ಅಗತ್ಯ ಕ್ರಮವಹಿಸಿ: ಸಚಿವ ಎನ್. ಚಲುವರಾಯಸ್ವಾಮಿ.

    June 9, 2025

    ಮದ್ದೂರು ನಗರಸಭೆ ಸೇರ್ಪಡೆಗೆ ಶುರುವಾಯ್ತು ಎಲ್ಲೆಡೆ ತೀವ್ರ ವಿರೋಧ: ಸೋಮನಹಳ್ಳಿ ಗ್ರಾಪಂ ಮುಂದೆ ಬೃಹತ್ ಪ್ರತಿಭಟನೆ

    June 9, 2025

    ನವೋದಯ ಗ್ರಾಮೀಣ ಅರೋಗ್ಯ ಮತ್ತು ಪರಿಸರ ಅಧ್ಯಯನ ಕೇಂದ್ರದಿಂದ ಸಾರ್ವಜನಿಕರಿಗೆ ಹಾವುಗಳ ಕುರಿತು ಅರಿವು

    June 9, 2025

    ಜನರಿಗೆ ಪ್ರತಿನಿತ್ಯ ಟೋಪಿ ಹಾಕುವ ವ್ಯಕ್ತಿಗೆ ಮೋದಿ ಸಾಧನೆ ಅಳೆಯುವ ಅರ್ಹತೆ ಇಲ್ಲ: ಪ್ರತಾಪ್ ಸಿಂಹ

    June 9, 2025

    ಅಧಿಕಾರ ಇರಲಿ, ಬಿಡಲಿ ನನ್ನ ಜೀವನದ ಕೊನೆವರೆಗೂ ಕ್ಷೇತ್ರದ ಜನ ಸೇವೆ ನಿರಂತರ: ಶಾಸಕ ಕೆ.ಎಂ.ಉದಯ್

    June 9, 2025

    ಬೇಗಾನೇ ಶ್ಯಾದಿ ಮೇ ಅಬ್ದುಲ ದಿವಾನಾ” ರಾಜ್ಯ ಸರ್ಕಾರದ ಪರಿಸ್ಥಿತಿ ಇದು; ಕೇಂದ್ರ ಸಚಿವ ಜೋಶಿ

    June 9, 2025

    ನಟ ಕಮಲ್ ಹಾಸನ್ ವಿರುದ್ಧ ವಿದ್ಯಾವರ್ಧಕ ಸಂಘದಿಂದ ಪ್ರತಿಭಟನೆ

    June 9, 2025

    IPL ಕಾಲ್ತುಳಿತ ವಿಚಾರ; ಸಿಎಂ, ಡಿಸಿಎಂ ರಾಜೀನಾಮೆ ನೀಡಬೇಕು: ಕೇಂದ್ರ ಸಚಿವ ಜೋಶಿ

    June 9, 2025

    ಮೋದಿ ಸರ್ಕಾರದ ಫಲಿತಾಂಶ ಝೀರೋ. ಸುಮ್ಮನೇ ಹೆಚ್ಚಿನ ಪ್ರಚಾರ ಕೊಡ್ತಾರೆ ಅಷ್ಟೇ: ಸಿಎಂ ಸಿದ್ದರಾಮಯ್ಯ

    June 9, 2025

    ಹಾದ್ರೀಪುರ ಗ್ರಾಮ ಪಂಚಾಯತಿಯಲ್ಲಿ ಅಧ್ಯಕ್ಷ ಮತ್ತು PDOದೆ ದರ್ಬಾರ್: ಕಾಸಿದ್ರೆ ಮಾತ್ರ ಫೈಲ್ ಮುಂದಕ್ಕೆ ಇಲ್ಲದಿದ್ರೆ ಹಿಂದಕ್ಕೆ…!

    June 9, 2025
    © 2025 Copyright � All rights reserved AIN Developed by Notch IT Solutions..
    • Latest Trending news today
    • Trending News in kannada
    • Kannada online news
    • latest trends and news from India and around the world
    • New Kannada news channel
    • latest and breaking news in Kannada
    • Business News Kannada
    • Karnataka news headlines
    • Live Updates on Karnataka
    • flash news in Kannada politics

    Type above and press Enter to search. Press Esc to cancel.