ಆನೇಕಲ್:- ತಾಲೂಕಿನ ಹಾರಗದ್ದೆ ಗ್ರಾಮದಲ್ಲಿ ಇಂದು ಐಪೋ ಇಂಡಿಯಾ ಸಂಸ್ಥೆ ಮತ್ತು ಎಚ್ ಸಿಎಲ್ ಎಫ್ ಸಹಯೋಗದಲ್ಲಿ ವಿಶೇಷ ಚೇತನ ಫಲಾನುಭವಿಗಳಿಗೆ ಎಲೆಕ್ಟ್ರಿಕಲ್ ವೀಲ್ ಚೇರ್ ಗಳನ್ನ ಉಚಿತವಾಗಿ ನೀಡಲಾಯಿತು.
ಇನ್ನು ವಿಶೇಷ ಚೇತನರ ಫಲಾನುಭವಿಗಳನ್ನು ಮೇಲೆತ್ತುವ ಸಲುವಾಗಿ ಈ ಒಂದು ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿತ್ತು. ಇನ್ನು ಹಾರಗದ್ದೆ ಸುತ್ತಮುತ್ತ 80 ಗ್ರಾಮಗಳಲ್ಲಿ ಪರಿಶೀಲನೆ ಮಾಡಿ 21 ತರಹದ ಅಂಗ ವೈಕಲ್ಯತೆ ಗುರುತಿಸಿ 9೦5 ಜನಕ್ಕೆ ಸಹಾಯ ಹಸ್ತವನ್ನು ಮಾಡಲಾಗಿದೆ. ಇನ್ನು ವಿಶೇಷ ಚೇತನ ಫಲಾನುಭವಿಗಳಿಗೆ ಯುಐಡಿ ಕಾರ್ಡ್ , ಅಂಗವಿಕಲರ ಕಾರ್ಡ್ ಆಭಾಕಾರ್ಡ್ ಹೆಲ್ತ್ ಇನ್ಸೂರೆನ್ಸ್ ವೀಲ್ ಚೇರ್ ಸೇರಿದಂತೆ ಸಿಎಸ್ಆರ್ ಸಹಯೋಗದಲ್ಲಿ ವಿಶೇಷ ಚೇತನ ಫಲಾನುಭವಿಗಳಿಗೆ ಸಲಕರಣೆಗಳನ್ನು ನೀಡುತ್ತಾ ಬಂದಿದ್ದಾರೆ..
ಇನ್ನು ಕಾರ್ಯಕ್ರಮದಲ್ಲಿ ಡಾ. ಚೇತನ್ ಭಾಗವಹಿಸಿ ಮಾತನಾಡಿ ಯಾರು ಕೂಡ ಇದುವರೆಗೆ ಆಗಿರುವ ಬಗ್ಗೆ ಯೋಚನೆ ಮಾಡಬೇಡಿ ತಮಗೆ ನೀಡಿದ ಉಪಕರಣಗಳನ್ನು ಬಳಸಿಕೊಂಡು ಸ್ವಾವಲಂಬಿಯಾಗಿ ಜೀವನ ನಡಸಿ ಬೇರೆಯವರಿಗೂ ಕೂಡ ಮಾದರಿನ್ನಾಗಿ ಮಾಡಿ, ಬದುಕುವುದನ್ನು ಕಲಿಸಿ ಎಂದು ತಿಳಿಸಿದರು. ಇನ್ನು ಈ ಕಾರ್ಯಕ್ರಮದಲ್ಲಿ ಐಫೋ ಇಂಡಿಯಾ ಕಾರ್ಯ ನಿರ್ವಹಣಾಧಿಕಾರಿ ಮಿಸ್ಸಾ ಯೋಗಿತ ಪರ್ಕಳೆ ಡಾಕ್ಟರ್ ಚೇತನ್ ಹಾಗೂ ದೀಪಿಕಾ ಮತ್ತು ಗಿರೀಶ್ ನವರು ಉಪಸ್ಥಿತರಿದ್ದರು..