ಬೆಂಗಳೂರು:- ಹನಿಟ್ರ್ಯಾಪ್ ಕೇಸ್ ಗೆ ಸಂಬಂಧಿಸಿದಂತೆ ಮಂಗಳವಾರ ಸಚಿವ ರಾಜಣ್ಣ ದೂರು ಕೊಡುವ ಸಾಧ್ಯತೆ ಇದೆ.
ನಾನು ಮುಖ್ಯಮಂತ್ರಿ ಆದ್ರೆ ಸಾವಿರ ಜೆಸಿಬಿ ಆರ್ಡರ್ ಮಾಡ್ತಿನಿ: ಯತ್ನಾಳ್ ಹಿಂಗೇಳಿದ್ಯಾಕೆ?
ಕಳೆದ ಮೂರು ದಿನಗಳಿಂದ ಪ್ರಕರಣ ದಾಖಲಿಸಲು ಮನಸ್ಸು ಮಾಡದೇ ಇದ್ದ ರಾಜಣ್ಣಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ಅಭಯ ಹಸ್ತ ನೀಡಿದ್ದು, ನಾಳೆ ಪ್ರಕರಣ ದಾಖಲು ಮಾಡಲಿದ್ದಾರೆ ಎನ್ನಲಾಗುತ್ತಿದೆ.
ಪ್ರಕರಣ ದಾಖಲಾದ ಬಳಿಕ ಅಧಿಕೃತ ತನಿಖೆ ಪ್ರಾರಂಭ ಆಗಲಿದೆ. ಮಾಹಿತಿಯ ಪ್ರಕಾರ ವಿಶೇಷ ತನಿಖಾ ತಂಡ ಮೂಲಕವೇ ತನಿಖೆ ಮಾಡಿಸುವ ಸಾಧ್ಯತೆ ಇದೆ.
ಇನ್ನೂ ರಾಜ್ಯ ರಾಜಕಾರಣದಲ್ಲಿ ಭಾರೀ ಸದ್ದು ಗದ್ದಲಕ್ಕೆ ಕಾರಣವಾಗಿದ್ದು ಹನಿಟ್ರ್ಯಾಪ್ ಪ್ರಕರಣ. ರಾಜ್ಯದ ಪ್ರಭಾವಿ ಸಚಿವ ಕೆ ಎನ್ ರಾಜಣ್ಣ ಹಾಗೂ ಅವರ ಪುತ್ರ ವಿಧಾನಪರಿಷತ್ ಸದಸ್ಯ ರಾಜೇಂದ ಅವರ ಮೇಲೆ ಹಣಿಟ್ರ್ಯಾಪ್ ಪ್ರಯತ್ನ ನಡೆಸಲಾಗಿದೆ ಎಂಬ ಆರೋಪ ಕೇಳಿ ಬಂದಿದೆ. ಸ್ವತಃ ರಾಜಣ್ಣ ಅವರೇ ಈ ವಿಚಾರವನ್ನು ಪ್ರಸ್ತಾಪ ಮಾಡಿದ್ದರಿಂದ ಇದು ಮಹತ್ವ ಪಡೆದುಕೊಂಡಿದೆ.