ಹಿಂದೂ ಧರ್ಮದಲ್ಲಿ ಅನೇಕ ರೀತಿಯ ಪ್ರಾಣಿಗಳನ್ನು ಪ್ರಮುಖವೆಂದು ವಿವರಿಸಲಾಗಿದೆ. ವಿಶೇಷವಾಗಿ ನೀವು ಅನೇಕ ಧಾರ್ಮಿಕ ಕಥೆಗಳಲ್ಲಿ ಹಸು, ನಾಯಿ, ಬೆಕ್ಕು, ಪಾರಿವಾಳ ಇತ್ಯಾದಿಗಳ ಉಲ್ಲೇಖವನ್ನು ಕಾಣಬಹುದು. ಕೆಲವು ಪ್ರಾಣಿಗಳನ್ನು ಹಿಂದೂ ದೇವರು ಮತ್ತು ದೇವತೆಗಳ ವಾಹನ ಎಂದು ವಿವರಿಸಲಾಗಿದೆ. ಈ ಪ್ರಾಣಿಗಳಿಗೆ ಸಂಬಂಧಿಸಿದ ಶುಭ ಮತ್ತು ಅಶುಭ ಚಿಹ್ನೆಗಳ ಬಗ್ಗೆ ಅನೇಕ ವಿಷಯಗಳು ಪ್ರಚಲಿತದಲ್ಲಿವೆ.
ವಾಸ್ತು ಶಾಸ್ತ್ರದ ಪ್ರಕಾರ ಕಂದು ಬಣ್ಣದ ಬೆಕ್ಕು ಅನಿರೀಕ್ಷಿತವಾಗಿ ಮನೆಗೆ ಬಂದರೆ ಅದನ್ನು ತುಂಬಾ ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಈ ಬಣ್ಣದ ಬೆಕ್ಕುಗಳು ಅದೃಷ್ಟವನ್ನು ತರುತ್ತವೆ ಎನ್ನುವ ನಂಬಿಕೆ ಇದೆ.
ಮನೆಯಲ್ಲಿ ಕಂದು ಬೆಕ್ಕು ಬರುವುದರಿಂದ ಸಂಪತ್ತು ಡಬಲ್ ಆಗುತ್ತದೆ ಎನ್ನಲಾಗುತ್ತದೆ. ಇದಲ್ಲದೆ, ಈ ಬೆಕ್ಕು ಮನೆಗೆ ಬಂದಾಗ, ನಿಮ್ಮ ನಿಂತು ಹೋಗಿದ್ದ ಕೆಲಸ ಮತ್ತೆ ಆರಂಭವಾಗಿ, ಹಣ ಸಹ ಸಿಗುತ್ತದೆ ಎನ್ನುತ್ತಾರೆ ಹಿರಿಯರು.
ಕಪ್ಪು ಬೆಕ್ಕು ಇದ್ದಕ್ಕಿದ್ದಂತೆ ಮನೆಗೆ ಬಂದು ಅಳಲು ಪ್ರಾರಂಭಿಸಿದರೆ, ಅದು ಕೆಟ್ಟ ಸಂಕೇತ ಎನ್ನಲಾಗುತ್ತದೆ. ಕಪ್ಪು ಬೆಕ್ಕಿನ ಕೂಗು ಕೆಲವು ಅಹಿತಕರ ಘಟನೆಗಳು ಅಥವಾ ಕೆಟ್ಟ ಸುದ್ದಿಗಳ ಸೂಚನೆ ಎಂದು ಪರಿಗಣಿಸಲಾಗುತ್ತದೆ.
ನಂಬಿಕೆಗಳ ಪ್ರಕಾರ, ಬೆಕ್ಕು ಮನೆಯಲ್ಲಿ ಬೆಕ್ಕು ಬಂದು ಮರಿಗಳಿಗೆ ಜನ್ಮ ನೀಡಿದರೆ ಬಹಳ ಅದೃಷ್ಟ ಎನ್ನಲಾಗುತ್ತದೆ. ಅದರಲ್ಲೂ ಮನೆಯ ಮುಖ್ಯ ಸದಸ್ಯರಿಗೆ ಇದರಿಂದ ಒಳ್ಳೆಯ ಫಲಗಳು ಸಿಗುತ್ತದೆ ಎನ್ನುವ ನಂಬಿಕೆ ಇದೆ.
ಬೆಕ್ಕು ಮರಿಗಳಿಗೆ ಜನ್ಮ ನೀಡಿದ ಮೂರು ತಿಂಗಳೊಳಗೆ ಕುಟುಂಬದ ಸದಸ್ಯರು ಎಲ್ಲಾ ಕ್ಷೇತ್ರಗಳಲ್ಲಿ ಪ್ರಗತಿ ಮತ್ತು ಯಶಸ್ಸನ್ನು ಸಾಧಿಸುತ್ತಾರೆ. ಅಲ್ಲದೇ, ಇದರಿಂದ ಕೆಟ್ಟ ಶಕ್ತಿಗಳು ಸಹ ಮನೆಯನ್ನ ಪ್ರವೇಶ ಮಾಡುವುದಿಲ್ಲ.