ಸಾಮಾನ್ಯವಾಗಿ ಪ್ರತಿಯೊಬ್ಬರ ಮನೆಯಲ್ಲೂ ನೀರನ್ನು ಸಂಗ್ರಹಸಿಟ್ಟುಕೊಳ್ಳುವ ಉದ್ದೇಶದಿಂದ ನೀರಿನ ಟ್ಯಾಂಕ್ ಅನ್ನು ಇಟ್ಟಿರುತ್ತಾರೆ. ಇದರಿಂದ ನೀರಿಲ್ಲದ ಸಮಯದಲ್ಲಿ ಬಹಳಷ್ಟು ಸಹಕಾರಿಯಾಗುತ್ತದೆ.
ಇನ್ನೂ ಈಗಾಗಲೇ ಬೇಸಿಗೆ ಆರಂಭವಾಗಿದೆ. ಆದ್ರೆ ಬಿಸಿಲಿನ ಝಳ ಸಹಿಸಿಕೊಳ್ಳುವುದೇ ಕಷ್ಟ ಎನ್ನುವಂತಾಗಿದೆ. ಫ್ಯಾನ್ ನಡಿಯಲ್ಲಿ ಕುಳಿತುಕೊಂಡರೂ ಬಿಸಿ ಗಾಳಿಯಿಂದ ಬಿಸಿ ಬಿಸಿ ಅನುಭವವಾಗುತ್ತಿದೆ. ತಣ್ಣನೆಯ ನೀರಿನಲ್ಲಿ ಸ್ನಾನ ಮಾಡುವ ಎಂದು ಮನಸ್ಸು ಬಯಸಿದ್ರು ಟ್ಯಾಂಕ್ ನಲ್ಲಿ ತುಂಬಿಸಿಟ್ಟ ನೀರು ಬಿಸಿಯಾಗಿರುತ್ತದೆ. ಈ ಋತುವಿನಲ್ಲಿ ಬಿಸಿಲು ಮತ್ತು ಶಾಖದಿಂದಾಗಿ ಟ್ಯಾಂಕ್ನಲ್ಲಿನ ನೀರು ತುಂಬಾ ಬಿಸಿಯಾಗುತ್ತದೆ. ಆದರೆ ಟ್ಯಾಂಕ್ ನಲ್ಲಿದ್ದ ನೀರನ್ನು ಸಂಪೂರ್ಣವಾಗಿ ತಂಪಾಗಿಸಲು ಈ ಕೆಲವು ಸಲಹೆಗಳು ಉಪಯೋಗವಾಗಬಹುದು.
ಟ್ಯಾಂಕ್ ನೀರು ತಣ್ಣಗಾಗಿಸಲು ಇಲ್ಲಿದೆ ಟಿಪ್ಸ್
ಬೇಸಿಗೆಯಲ್ಲಿ ನೀರಿನ ಟ್ಯಾಂಕ್ ಅನ್ನು ನೇರ ಸೂರ್ಯನ ಬೆಳಕು ಬೀಳುವುದನ್ನು ತಪ್ಪಿಸಿ. ಸಾಧ್ಯವಾದರೆ ನೀರಿನ ಟ್ಯಾಂಕ್ ನೆರಳಿನಲ್ಲಿ ಇರಿಸಿ.
ಬೇಸಿಗೆಯಲ್ಲಿ ಟ್ಯಾಂಕ್ ಮತ್ತು ಪೈಪ್ ಬಿಸಿಯಾಗುತ್ತದೆ. ಹೀಗಾಗಿ ಸೂರ್ಯನ ಬಿಸಿಲಿನಿಂದ ಪೈಪ್ ಅನ್ನು ರಕ್ಷಿಸಲು ಕವರ್ ಅನ್ನು ಬಳಸುವುದು ಉತ್ತಮ.
ಶೆಡ್ ಅನ್ನು ನಿರ್ಮಿಸುವುದು ಪ್ರಯೋಜನಕಾರಿಯಾಗಿದೆ.
ಟ್ಯಾಂಕ್ ಅನ್ನು ಬಿಳಿ ಬಟ್ಟೆಯಿಂದ ಮುಚ್ಚಬಹುದು. ಇದು ಅಲ್ಯೂಮಿನಿಯಂ ಹಾಳೆಯಿಂದ ಟ್ಯಾಂಕ್ ಮುಚ್ಚುವುದು ಉತ್ತಮ. ಇದು ಸೂರ್ಯನ ಬೆಳಕು ಟ್ಯಾಂಕ್ ಮೇಲೆ ಬೀಳುವುದನ್ನು ತಪ್ಪಿಸಿ ನೀರನ್ನು ತಂಪಾಗಿಸುತ್ತದೆ.
ಟ್ಯಾಂಕ್ ನೀರು ಬಿಸಿಯಾಗುತ್ತಿದ್ದರೆ ಒದ್ದೆಯಾದ ಸೆಣಬಿನ ಗೋಣಿ ಚೀಲ ಅಥವಾ ದಪ್ಪ ಬಟ್ಟೆಯನ್ನು ಟ್ಯಾಂಕ್ ಮೇಲೆ ಹಾಕಿ ಬಿಡಿ. ಹೀಗೆ ಮಾಡಿದ್ರೆ ಟ್ಯಾಂಕ್ನ ಬಿಸಿಯಾಗುವುದನ್ನು ನೀರನ್ನು ತಂಪಾಗಿರಿಸುವಂತೆ ಮಾಡುತ್ತದೆ.
ನೀರಿನ ಟ್ಯಾಂಕ್ ಕಪ್ಪು ಅಥವಾ ಗಾಢ ಬಣ್ಣದಲ್ಲಿದ್ದರೆ ಅದಕ್ಕೆ ತಿಳಿ ಬಣ್ಣವನ್ನು ಬಳಿಯುವುದು ಸೂಕ್ತ. ತಿಳಿ ಬಣ್ಣಗಳು ಸೂರ್ಯನ ಬೆಳಕನ್ನು ಕಡಿಮೆ ಹೀರಿಕೊಳ್ಳುವ ಕಾರಣ ನೀರು ಬಿಸಿಯಾಗುವುದಿಲ್ಲ.
ಮನೆಯಲ್ಲಿ ಟ್ಯಾಂಕ್ ಅನ್ನು ತೆರೆದ ಜಾಗದಲ್ಲಿ ಇದ್ದರೆ ಟ್ಯಾಂಕ್ ಸುತ್ತಲೂ ಹುಲ್ಲು ಅಥವಾ ತೇವವಾದ ಮಣ್ಣನ್ನು ಹಾಕಿಡಿ. ಹೀಗೆ ಮಾಡಿದರೆ ಶಾಖ ಕಡಿಮೆ ಮಾಡಿ ನೀರು ತಂಪಾಗಿಸುತ್ತದೆ.
ಟ್ಯಾಂಕ್ ನೀರನ್ನು ತಂಪಾಗಿಸಲು ಸುಲಭವಾದ ಉಪಾಯವೆಂದರೆ ಐಸ್ ಕ್ಯೂಬ್ ಬಳಸುವುದು. ಸ್ನಾನ ಮಾಡುವುದಕ್ಕೆ ಹೋಗುವ ಮುಂಚೆ ಐಸ್ ಕ್ಯೂಬ್ ಗಳನ್ನು ನೀರಿನ ಟ್ಯಾಂಕ್ ಗೆ ಹಾಕಿ, ಇದರಿಂದಾಗಿ ಟ್ಯಾಂಕ್ ನೀರು ಕ್ರಮೇಣವಾಗಿ ತಣ್ಣಗಾಗುತ್ತದೆ.