ಭಾರತೀಯ ಚಿತ್ರರಂಗದಲ್ಲಿ ಸದ್ಯ ನಂಬರ್ 1 ನಟಿಮಣಿ ಯಾರು ಅಂದರೆ ರಶ್ಮಿಕಾ ಮಂದಣ್ಣ ಅಂದರೆ ತಪ್ಪಾಗಲಿಕ್ಕಿಲ್ಲ. ಕನ್ನಡದ ಈ ಹುಡ್ಗಿ ಅದ್ಯಾವ ಕ್ಷಣ ಹೈದ್ರಾಬಾದ್ ಫ್ಲೈಟ್ ಏರಿ ಟಾಲಿವುಡ್ ಗೆ ಲ್ಯಾಂಡ್ ಆಗಿಬಿಟ್ಲರೋ ಅಲ್ಲಿಂದ ಆಕೆ ಮುಟ್ಟಿದೆಲ್ಲ ಚಿನ್ನವಾಗುತ್ತಿದೆ. ಸಾಲು ಸಾಲು ಹಿಟ್ ರಶ್ಮಿಕಾ ಅಕೌಂಟ್ ಸೇರಿಕೊಂಡಿವೆ. ನ್ಯಾಷನಲ್ ಕ್ರಶ್ ಎಂಬ ಬಿರುದಯ ಪಡೆದಿರುವ ಕೊಡಗಿನ ಕ್ವೀನ್ ಅತಿ ಕಡಿಮೆ ಅವಧಿಯಲ್ಲಿ ಇಂಡಿಯನ್ ಇಂಡಸ್ಟ್ರೀಯಲ್ಲಿ ನೇಮೂ ಫೇಮೂ ಎಲ್ಲವನ್ನೂ ಪಡೆದುಕೊಂಡಿದ್ದಾರೆ.
ರಶ್ಮಿಕಾ ಮಂದಣ್ಣ ನಾಯಕಿಯಾಗಿ ಅಭಿನಯಿಸಿದ ಪುಷ್ಪ ಸರಣಿ ಸಿನಿಮಾ, ಅನಿಮಲ್, ಛಾವ ಚಿತ್ರಗಳು ಸೂಪರ್ ಹಿಟ್ ಕಂಡಿವೆ. . ಇನ್‌ಸ್ಟಾಗ್ರಾಮ್‌ನಲ್ಲಿ 45 ಮಿಲಿಯನ್‌ಗಿಂತಲೂ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ರಶ್ಮಿಕಾ ಸಂಪಾದನೆ ವಿಷಯದಲ್ಲಿಯೂ ಸುದ್ದಿಯಲ್ಲಿದ್ದಾರೆ. ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಅವರ ನಿವ್ವಳ ಆದಾಯ 66 ಕೋಟಿ ರೂಪಾಯಿಯಾಗಿದೆ. ನಟನೆ ಜೊತೆಗೆ ಹಲವು ಬ್ರಾಂಡ್‌ಗಳಿಗೆ ಬ್ರ್ಯಾಂಡ್ ಅಂಬಾಸಿಡರ್ ಕೂಡ ಆಗಿದ್ದಾರೆ. ಮಾಡೆಲಿಂಗ್ ಹಾಗೂ ಜಾಹೀರಾತುಗಳನ್ನು ಮಾಡುತ್ತಾ ಬಂದಿದ್ದಾರೆ. ಪ್ರತಿ ಬ್ರ್ಯಾಂಡ್ ಪ್ರಮೋಷನ್ ಮೂಲಕ 10 ಲಕ್ಷ ರೂಪಾಯಿ ಗಳಿಸುವ ರಶ್ಮಿಕಾ , ಜಾಹೀರಾತುಗಳಿಗೆ ಕೋಟಿಗಟ್ಟಲೇ ಸಂಭಾವನೆ ಜೇಬಿಗಿಳಿಸಿಕೊಳ್ಳುತ್ತಾರೆ.
ಪುಷ್ಪಾ ಸಿನಿಮಾಗೆ ರಶ್ಮಿಕಾ ಮಂದಣ್ಣ 8 ಕೋಟಿ ಸಂಭಾವನೆ ಪಡೆದಿದ್ದರಂತೆ. ಪುಷ್ಪ ಚಿತ್ರಕ್ಕೂ ಮೊದಲು 3 ರಿಂದ 4 ಕೋಟಿ ಹಣ ಪಡೆಯುತ್ತಿದ್ದ ಕೊಡಗಿನ ಬ್ಯೂಟಿ ಆ ನಂತರ ಬ್ಯಾಕ್ ಟು ಬ್ಯಾಕ್ ಹಿಟ್ ಚಿತ್ರ ಕೊಟ್ಟಿದ್ದಾರೆ. ಹೀಗಾಗಿ ಸಂಭಾವನೆಯನ್ನು ಹೆಚ್ಚಿಸಿಕೊಂಡಿದ್ದಾರಂತೆ. ರಶ್ಮಿಕಾ ಹೈದರಾಬಾದ್, ಬೆಂಗಳೂರು, ಗೋವಾದಲ್ಲೂ ಮನೆ ಹೊಂದಿದ್ದಾರಂತೆ.
ರಶ್ಮಿಕಾ ಬಳಿ ದುಬಾರಿ ಕಾರುಗಳ ಕಲೆಕ್ಷನ್ ಇದೆ. ಆಕೆ ಓಡಾಡಲು ಆಡಿ ಕ್ಯೂ3 ಜರ್ಮನ್ ಎಸ್‌ಯುವಿಯನ್ನು ಬಳಸುತ್ತಾರೆ. ಇದರೊಂದರಿಗೆ ಅವರ ಬಳಿ ಐಷಾರಾಮಿ ವಾಹನವಾದ ರೇಂಜ್ ರೋವರ್ ಸ್ಪೋರ್ಟ್, ಮರ್ಸಿಡಿಸ್ ಬೆಂಜ್ ಸಿ-ಕ್ಲಾಸ್, ಟೊಯೋಟಾ ಇನ್ನೋವಾ ಹಾಗೂ ಹೂಂಡೈ ಕ್ರೆಟಾ ಕೂಡ ಇದೆ.