ಬೆಂಗಳೂರು: ಸ್ಮಾರ್ಟ್ ಮೀಟರ್ ಟೆಂಡರ್ ನಲ್ಲಿ 15 ಸಾವಿರ ಕೋಟಿ ಹಗರಣ ನಡೆದಿದೆ ಎಂದು ಆರೋಪಸಿದ್ದ ಬಿಜೆಪಿ ನಾಯಕ ಡಾ.ಅಶ್ವಥ್ ನಾರಾಯಣಗೆ ಇಂಧನ ಸಚಿವ ಕೆ.ಜೆ ಜಾರ್ಜ್ ತಿರುಗೇಟು ನೀಡಿದ್ದಾರೆ.
ಸ್ಮಾರ್ಟ್ ಮೀಟರ್ ಟೆಂಡರ್ ವಿವಾದ ಹಿನ್ನೆಲೆಯಲ್ಲಿ ಇಂಧನ ಸಚಿವ ಜಾರ್ಜ್ ಸುದ್ದಿಗೋಷ್ಠಿ ನಡೆಸಿ ಸ್ಪಷ್ಟನೆ ನೀಡಿದ್ರು.
ರಾಜಶ್ರೀ ಕಂಪನಿ ಬ್ಲಾಕ್ ಲಿಸ್ಟ್ ಹಾಕಿದ್ದಾರೆಂಬ ಅನ್ನೋದು ಸುಳ್ಳು. ಆ ಕಂಪನಿಯನ್ನ ಬ್ಲಾಕ್ ಲೀಸ್ಟ್ ಗೆ ಹಾಕಿಲ್ಲ. ಉತ್ತರಾಂಚಲದಲ್ಲಿ ನಿಷೇಧ ಮಾಡಿದ್ದಾರೆ. ಆದರೆ ಎರಡು ವರ್ಷ ಮಾತ್ರ ರಾಜಶ್ರೀಗೆ ಕಂಪನಿಗೆ ಟೆಂಡರ್ ನೀಡೋದನ್ನ ನಿಷೇಧ ಮಾಡಿದ್ದಾರಷ್ಟೇ. ಅದಾದ ಮೇಲೆಯೂ ಎಂಒಯು ಮಾಡಿಕೊಂಡಿದ್ದಾರೆ. ಮಧ್ಯಪ್ರದೇಶ, ರಾಜಸ್ತಾನದಲ್ಲಿ ರಾಜಶ್ರೀ ಕಂಪನಿಗೆ ಟೆಂಡರ್ ನೀಡಲಾಗಿದೆ. ನಿಷೇಧ ಮಾಡಿರುವ ವೇಳೆಯೇ ಟೆಂಡರ್ ಕೊಟ್ಟಿದ್ದಾರೆ. ಆರೋಪ ಮಾಡ್ತಿರೋರ ಸರ್ಕಾರಗಳೇ ಟೆಂಡರ್ ಕೊಡ್ತಿದ್ದಾರೆ. ಇದರ ಬಗ್ಗೆ ಅವರು ಮಾತನಾಡೋಕೆ ಹೇಳಿ ಎಂದು ಬಿಜೆಪಿ ನಾಯಕರಿಗೆ ಜಾರ್ಜ್ ತಿರುಗೇಟು ನೀಡಿದ್ದಾರೆ.
ಬಿಜೆಪಿ ನಾಯಕರು ಆರೋಪ ಮಾಡಿದಂತೆ ಟೆಂಡರ್ ನಲ್ಲಿ ತಪ್ಪುಗಳಾಗಿದ್ದರೆ ಸ್ಟೇ ಮಾಡ್ತೇವೆ. ತನಿಖೆ ಮಾಡೋ ಪವರ್ ನಮಗಿದೆ. ಕೆಟಿಪಿಪಿ ಪ್ರಕಾರವೇ ನಾವು ಮಾಡಿರೋದು. ನಾವು ಎಲ್ಲಿಯೂ ಕಾನೂನು ಬಾಹಿರವಾಗಿ ಟೆಂಡರ್ ಮಾಡಿಲ್ಲ. ಸ್ಮಾರ್ಟ್ ಮೀಟರ್ ಅಳವಡಿಕೆಗೆ ಜಾಯಿಂಟ್ ವೆಂಚರ್ ಮಾಡಲೇಬೇಕು. ಮೀಟರ್ ಮ್ಯಾನ್ಯುಪ್ಯಾಕ್ಚರ್, ಕ್ವಾಲಿಟಿ ಚೆಕ್ಕರ್ ಎಲ್ಲರೂ ಇರಬೇಕು. ಹಾಗಾಗಿ ಕೊಟ್ಟರೆ ತಪ್ಪೇನಿದೆ.
ತ್ರೀಪೇಸ್ ಮೀಟರ್ 4990 ರೂ.
ಸ್ಮಾರ್ಟ್ ಮೀಟರ್ ಟೆಂಡರ್ ನಲ್ಲಿ 10 ಕಂಪನಿಗಳು ಭಾಗವಹಿಸಿದ್ದವು. ಶ್ರೀಧರ್ ಎಲೆಕ್ಟ್ರಿಕ್, ಜೀನಸ್ ಎಲೆಕ್ಟ್ರಿಕ್ಸ್ ಸೇರಿ 10 ಕಂಪನಿಗಳು ಬಂದಿದ್ದವು. ಅದರಲ್ಲಿ ಕೊನೆಗೆ ಉಳಿದ ಸಂಸ್ಥೆಗೆ ನೀಡಲಾಗಿದೆ ಎಂದು ಬೆಂಗಳೂರು ವಿದ್ಯುತ್ ಕಂಪನಿ(ಬೆಸ್ಕಾಂ) ಎಂಡಿ ಶಿವಶಂಕರ್ ಹೇಳಿದ್ದಾರೆ.
ಬೆಸ್ಕಾಂನಲ್ಲಿ 4 ಲಕ್ಷ ಮೀಟರ್ ಬದಲಾಯಿಸಬಹುದು. ಅದನ್ನ ಲೆಕ್ಕ ಹಾಕಿಯೇ ಹಣ ಲೆಕ್ಕ ಹಾಕಲಾಗಿದೆ. ಒಂದು ವರ್ಷದ ಅಮೌಂಟ್ ಪರಿಗಣಿಸಲಾಗಿದೆ. ಇಎಂಐ ಕೂಡ ಪರಿಗಣಿಸಲಾಗಿದೆ. ಇದು ಬೆಸ್ಕಾಂ ವ್ಯಾಪ್ತಿಗೆ ಮಾಡಿದ್ದೇವೆ. ಸ್ಮಾರ್ಟ್ ಮೀಟರ್ ಮೂರು ವೆರೈಟಿ ಇದೆ. ತ್ರೀ ಪೇಸ್ ಮೀಟರ್ 4990 ರೂ, ಸಿಂಗಲ್ ಪೇಸ್ ಗೆ 4973 ರೂ ಇದೆ. ಟೆಂಡರ್ ಇಶ್ಯೂ ಮೊದಲೇ ಮೀಟಿಂಗ್ ಆಗಿದೆ. ಕಳೆದ ವರ್ಷದ ಜೂನ್ ಮೊದಲೇ ನಾವು ಮೀಟಿಂಗ್ ಮಾಡಿದ್ದೇವೆ.
ಆಗಸ್ಟ್ ನಲ್ಲಿ ಬೋರ್ಡ್ ಮೀಟಿಂಗ್ ಆಗುತ್ತೆ. ಸೆಪ್ಡಂಬರ್ ನಲ್ಲಿ ನೊಟಿಪಿಕೇಶನ್ ಆಗಿ ಡಿಸೆಂಬರ್ ನಲ್ಲಿ ಅನೌನ್ಸ್ ಮಾಡಲಾಗಿದೆ ಎಂದು ಹೇಳಿದ್ರು.