ಮಾಲಿವುಡ್ ಸೂಪರ್ ಸ್ಟಾರ್ ಮೋಹನ್ ಲಾಲ್ ಬೆಂಗಳೂರಿಗೆ ಬಂದಿದ್ದಾರೆ. ಅದಕ್ಕೆ ಕಾರಣ ಅವರು ಅಭಿನಯದ ಬಹುನಿರೀಕ್ಷಿತ ಸಿನಿಮಾ ಲೂಸಿಫರ್-2. ಈ ಹಿಂದೆ ರಿಲೀಸ್ ಆಗಿ ಬ್ಲಾಕ್ ಬಸ್ಟರ್ ಹಿಟ್ ಕಂಡಿದ್ದ ಲೂಸಿಫರ್ ಮುಂದುವರೆದ ಭಾಗ ಇದಾಗಿದ್ದು, ಸಹಜವಾಗಿ ನಿರೀಕ್ಷೆ ಹೆಚ್ಚಿಸಿದೆ. ಈ ಚಿತ್ರದ ಪ್ರಮುಖ ಪಾತ್ರದಲ್ಲಿ ಮೋಹನ್ ಲಾಲ್ ಅಭಿನಯಿಸಿದ್ದು, ಅದೇ ಚಿತ್ರರಂಗ ಮತ್ತೊಬ್ಬ ಸ್ಟಾರ್ ನಟ ಪೃಥ್ವಿರಾಜ್ ಸುಕುಮಾರನ್ ಆಕ್ಷನ್ ಕಟ್ ಹೇಳಿದ್ದಾರೆ. ನಾಳೆ ತೆರೆಗೆ ಬರ್ತಿರುವ ಲೂಸಿಫರ್-2 ಪ್ರಮೋಷನ್ ಗಾಗಿ ಇವರಿಬ್ಬರು ಬೆಂಗಳೂರಿಗೆ ಆಗಮಿಸಿದ್ದಾರೆ.
ಬೆಂಗಳೂರಿಗೆ ಲ್ಯಾಂಡ್ ಆಗುತ್ತಿದ್ದಂತೆ ಮೋಹನ್ ಲಾಲ್ ಹಾಗೂ ಪೃಥ್ವಿ ರಾಜ್ ಸುಕುಮಾರ್ ಮೊದಲು ಭೇಟಿ ಕೊಟ್ಟಿದ್ದೇ ಹೊಂಬಾಳೆ ಪ್ರೊಡಕ್ಷನ್ ಗೆ.. ಕೆಜಿಎಫ್’ ಮತ್ತು ‘ಕಾಂತಾರ’ ಸಿನಿಮಾಗಳನ್ನು ನಿರ್ಮಿಸಿರುವ ಹೊಂಬಾಳೆ ಫಿಲ್ಮ್ಸ್ ಲೂಸಿಫರ್-2 ಸಿನಿಮಾವನ್ನು ಕರ್ನಾಟಕದ ಏರಿಯಾಗಳಲ್ಲಿ ದೊಡ್ಡ ಮಟ್ಟದಲ್ಲಿ ಡಿಸ್ಟ್ರಿಬ್ಯೂಟ್ ಮಾಡುತ್ತಿದೆ. ಕನ್ನಡ ಸಿನಿಮಾಪ್ರೇಮಿಗಳ ಎದುರು ‘ಲೂಸಿಫರ್ 2’ ಸಿನಿಮಾವನ್ನು ಹೊಂಬಾಳೆ ಫಿಲ್ಮ್ಸ್ ತೆರೆಗೆ ತರ್ತಿದೆ. ಅಲ್ಲದೇ ಪೃಥ್ವಿರಾಜ್ ಸುಕುಮಾರ್ ಗೂ ಹೊಂಬಾಳೆಗೂ ಒಂದು ನಂಟಿದೆ. ಹೊಂಬಾಳೆ ನಿರ್ಮಾಣದ ಸಲಾರ್ ನಲ್ಲಿ ಅಭಿನಯಿಸಿದ್ದರು.
ಕನ್ನಡ , ತೆಲುಗು ಈಗ ಮಲಯಾಳಂ ಚಿತ್ರರಂಗಕ್ಕೂ ಹೊಂಬಾಳೆ ಕಾಲಿಟ್ಟಿದೆ. ಮಾಲಿವುಡ್‌ನಲ್ಲಿ ತನ್ನ ಮೊದಲ ಸಿನಿಮಾವನ್ನು ನಿರ್ಮಾಣ ಮಾಡುತ್ತಿದೆ. ಈ ಸಿನಿಮಾಗೆ ‘ಟೈಸನ್’ ಅಂತ ಹೆಸರಿಟ್ಟಿದ್ದು, ಮಲಯಾಳಂ ನಟಿ ಪೃಥ್ವಿರಾಜ್ ಸುಕುಮಾರನ್ ಪ್ರಮುಖ ಪಾತ್ರದಲ್ಲಿ ನಟಿಸುವುದರ ಜೊತೆಗೆ ನಿರ್ದೇಶನ ಕೂಡ ಮಾಡಲಿದ್ದಾರೆ. ಹೀಗಾಗಿ ಲೂಸಿಫರ್ 2 ಪ್ರಚಾರಕ್ಕೂ ಮುನ್ನ ಪೃಥ್ವಿರಾಜ್ ಸುಕುಮಾರನ್ ಹಾಗೂ ಮೋಹನ್ ಲಾಲ್ ಹೊಂಬಾಳೆ ಆಫೀಸ್ ಗೆ ವಿಸಿಟ್ ಹಾಕಿದ್ದಾರೆ. ಈ ವೇಳೆ ಹೊಂಬಾಳೆ ಸಂಸ್ಥಾಪಕ ವಿಜಯ್ ಕಿರಗಂದೂರು, ನಿರ್ದೇಶಕ ಸಂತೋಷ್ ಆನಂದ್ ರಾಮ್ ಕೂಡ ಉಪಸ್ಥಿತರಿದ್ದರು.