ವಿಜಯಪುರ:- ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಎರಡನೇ ಬಾರಿ ಬಿಜೆಪಿಯಿಂದ ಉಚ್ಛಾಟನೆಯಾಗಿದ್ದಾರೆ.
ಬೆಳಗಾವಿಯಲ್ಲಿ ಅಮಾನವೀಯ ಕೃತ್ಯ: ನಡು ರಸ್ತೆಯಲ್ಲಿ ಬಟ್ಟೆ ಹರಿದು ಅತ್ತೆ ಮೇಲೆ ಅಳಿಯನಿಂದ ಹಲ್ಲೆ!
ಯತ್ನಾಳ್ ಉಚ್ಚಾಟನೆ ಆಗುತ್ತಿದ್ದಂತೆ ಬಿಜೆಪಿಯ ಕಾರ್ಯಕರ್ತರಿಂದಲೇ ಪಟಾಕಿ ಸಿಡಿಸಿ ಸಂಭ್ರಮಿಸಿದ್ದಾರೆ. ನಗರದ ಜೋರಾಪುರ ಪೇಟೆಯಲ್ಲಿನ ಬಿಜೆಪಿ ಕಾರ್ಯಕರ್ತರಿಂದ ಸಂಭ್ರಮ ಮನೆ ಮಾಡಿದ್ದು, ಪಟಾಕಿ ಸಿಡಿಸಿ
ಪರಸ್ಪರ ಸಹಿ ಹಂಚಿ ಸಂತಸ ಪಟ್ಟಿದ್ದಾರೆ. ರಾಜೂ ಹುನ್ನೂರ, ಆಕಾಶ ತೊರವಿ, ಸುಮಿತ್ ಮ್ಯಾಡಿ, ಸುಮೀತ್ ಗೌರ, ಆಕಾಶ ನಾಗನೂರ ಹಾಗೂ ಇತರರಿಂದ ಸಂಭ್ರಮ ಮನೆ ಮಾಡಿದೆ. ಸಂಭ್ರಮದ ಮೂಲಕ ಯತ್ನಾಳ ಉಚ್ಛಾಟನೆಯನ್ನು ಬಿಜೆಪಿ ಕಾರ್ಯಕರ್ತರು ಸ್ವಾಗತಿಸಿದರು.