ಬೆಂಗಳೂರು: ನನಗೂ ನೋಟೀಸ್ ಜಾರಿಯಾಗಿದೆ, ಸಮರ್ಪಕ ಉತ್ತರ ನೀಡುತ್ತೇನೆ ಎಂದು ಶಾಸಕ ಎಸ್ ಟಿ ಸೋಮಶೇಖರ್ ಹೇಳಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದಾಗಲೇ ಯತ್ನಾಳ್ ಉಚ್ಚಾಟನೆಗೊಳ್ಳಬೇಕಿತ್ತು,
ಆಗಿಂದಲೂ ಅವರು ಸರ್ಕಾರ ಹಾಗೂ ಮುಖ್ಯಮಂತ್ರಿಗಳ ವಿರುದ್ಧ ಮಾತಾಡುತ್ತಿದ್ದರು, ಹಾಗೆಲ್ಲ ಮಾತಾಡಬಾರದು ಅಂತ ಅವರಿಗೆ ತಾನು ಹೇಳಿದ್ದೂ ಉಂಟು, ಆದರೆ ಯತ್ನಾಳ್ ಬೇರೆಯವರ ಮಾತು ಕೇಳಲ್ಲ ಎಂದು ಸೋಮಶೇಖರ್ ಹೇಳಿದರು.
ವಾಸ್ತು ಪ್ರಕಾರ ಈ ದಿಕ್ಕಿನಲ್ಲಿ ಮಲಗಿ: ಜೀವನದಲ್ಲಿ ಅನಿರೀಕ್ಷಿತ ಅದೃಷ್ಟ ನಿಮ್ಮದಾಗುತ್ತೆ.!
ಇನ್ನೂ ಶಾಸಕರಾದ ಎಸ್ ಟಿ ಸೋಮಶೇಖರ್ ಮತ್ತು ಶಿವರಾಂ ಹೆಬ್ಬಾರ್ ಅವರಿಗೂ ನೋಟೀಸ್ಗಳು ಜಾರಿಯಾಗಿವೆ. ಆದ್ದರಿಂದ ಸಮರ್ಪಕ ಉತ್ತರ ನೀಡುತ್ತೇನೆ ಎಂದು ಶಾಸಕ ಎಸ್ ಟಿ ಸೋಮಶೇಖರ್ ಹೇಳಿದರು.