ಚಿಕ್ಕೋಡಿ : ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಕುಡಚಿ ಮತಕ್ಷೇತ್ರದ ಗಡಿಭಾಗದ ಕೊನೆಯ ಹಳ್ಳಿ ಹಂದಿಗುಂದ ಗ್ರಾಮವು ಚುನಾಯಿತ ಪ್ರತಿನಿಧಿಗಳೇ ಬೀಗ ಹಾಕಿದ ಘಟನೆ ನಡೆದಿದೆ.
ಗ್ರಾ.ಪಂ ಅಭಿವೃದ್ಧಿ ಅಧಿಕಾರಿ ಮಹಾದೇವ ಕುಂಬಾರ ಸೇರಿದಂತೆ ರಾಯಬಾಗ ತಾಲೂಕಿನ ತಾ.ಪಂ ಕಚೇರಿಯ ಅಧಿಕಾರಿಗಳು ರಸ್ತೆ, ಕುಡಿಯುವ ನೀರಿನ ಕಾಮಗಾರಿಗಳ ವಿಳಂಬ ಮಾಡುತ್ತಿರುವ ಹಿನ್ನೆಲೆಯಲ್ಲಿ ಅಭಿವೃದ್ಧಿ ಅಧಿಕಾರಿಗೆ ಗ್ರಾಪಂ ಅಧ್ಯಕ್ಷ ಉಪಾಧ್ಯಕ್ಷ ಸೇರಿದಂತೆ ಸರ್ವ ಸದಸ್ಯರು ತರಾಟೆಗೆ ತೆಗೆದುಕೊಂಡ ಘಟನೆ ನಡೆದಿದೆ.
ಬೆಂ-ಮೈ ಎಕ್ಸ್‌ಪ್ರೆಸ್ ಹೈವೇ ಸರ್ವೀಸ್ ರಸ್ತೆಯಲ್ಲಿ ಅಪಘಾತ ; ಮೂವರ ಸಾವು
ಹಂದಿಗುಂದ ಗ್ರಾಮ ಪಂಚಾಯತಿ ಬಾಗಿಲಿಗೆ ಬೀಗ ಹಾಕಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ತಾಪಂ ಕಾರ್ಯನಿರ್ವಾಹಕ ಅಧಿಕಾರಿ (ಎಡಿ) , ಹಾಗೂ ಅಭಿಯಂತರ ಬರುವವರೆಗೂ ಬಾಗಿಲು ತೆಗೆಯುವುದಿಲ್ಲ ಎಂದು ಬಿಗಿಪಟ್ಟು ಹಿಡಿದಿದ್ದಾರೆ.