ಬಸ್, ಮೆಟ್ರೋ ಆಯ್ತು…ಈಗ ಹಾಲು ದುಬಾರಿ
ಬೆಂಗಳೂರು: ರಾಜಧಾನಿ ಬೆಂಗಳೂರು ಮೆಟ್ರೋ ಪ್ರಯಾಣ ದರ ದುಬಾರಿಯಾದ ಬೆನ್ನಲ್ಲೇ ಕನ್ನಡಿಗರ ಹೆಮ್ಮೆಯ ನಂದಿನಿ ಹಾಲು ಕೂಡ ದುಬಾರಿಯಾಗ್ತಿದೆ.
ರಾಜ್ಯದ ಜನತೆ ಯುಗಾದಿ ಹಬ್ಬದ ಸಂಭ್ರದಮಲ್ಲಿರುವಾಗಲೇ ನಂದಿನಿ ಹಾಲಿನ ದರವನ್ನು 4ರೂ. ಏರಿಕೆ ಮಾಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಲಾಗಿದೆ.
ಪ್ರತಿ ಲೀಟರ್ ಹಾಲಿನ ದರವನ್ನು 4 ರೂ. ಹೆಚ್ಚಳ ಮಾಡಲಾಗಿದೆ. ಎಷ್ಟು ಹಾಲಿನ ದರ ಏರಿಕೆ ಮಾಡಬೇಕು ಎಂಬ ನಿರ್ಧಾರವನ್ನು ಕೆಎಂಎಫ್ ತೀರ್ಮಾನ ಮಾಡಲಿದೆ ಎಂದು ಸಂಪುಟ ಸಭೆ ಬಳಿಕ ಕಾನೂನು ಸಚಿವ ಹೆಚ್.ಕೆ ಪಾಟೀಲ್ ಹೇಳಿದ್ದಾರೆ.
ಕಳೆದ ವಾರವಷ್ಟೇ ಕರ್ನಾಟಕ ಹಾಲು ಒಕ್ಕೂಟ(ಕೆಎಂಎಫ್ ) ಆಡಳಿತ ಮಂಡಳಿಯ ಪದಾಧಿಕಾರಿಗಳು ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ನಂದಿನಿ ಹಾಲಿನ ದರ ಏರಿಕೆ ಮಾಡಲು ಅನುಮತಿ ನೀಡುವಂತೆ ಮನವಿ ಮಾಡಿದ್ರು. ಆದರೆ, ಸಂಪುಟ ಸಭೆಯಲ್ಲಿ ನಿರ್ಧಾರ ಮಾಡುವುದಾಗಿ ಸಿಎಂ ಸಿದ್ದರಾಮಯ್ಯ ಹೇಳಿದ್ದರು. ಆದರೆ, ಇದೀಗ ನಂದಿನ ಹಾಲಿನ ದರ ಏರಿಕೆಗೆ ಸಂಪುಟ ಸಭೆ ಅನುಮೋದನೆ ನೀಡುವ ಮೂಲಕ ಗ್ರಾಹಕರಿಗೆ ನಂದಿನಿ ಹಾಲಿನ ಬಿಸಿ ತಟ್ಟುವಂತೆ ಮಾಡಿದೆ..
ನಂದಿನಿ ಹಾಲಿನ ದರ ಎಷ್ಟು ಆಗುತ್ತೆ..?
ಆರೆಂಜ್ -54ರೂನಿಂದ 58.ರೂ
ಸಮೃದ್ಧಿ-56 ರೂ.60 ರೂ.
ನಾರ್ಮಲ್ ಗ್ರೀನ್- 52 ರೂ.ನಿಂದ 56ರೂ.
ನಾರ್ಮಲ್ ಬ್ಲೂ-44ರೂ.ನಿಂದ 48 ರೂ.
ಗ್ರೀನ್ ಸ್ಪೆಷಲ್-54ರೂ.ನಿಂದ 58ರೂ.