ಬೆಳಗಾವಿ : ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಾಗಿದ್ದು, ಇದರ ಬಗ್ಗೆ ಮೊದಲೇ ಗೊತ್ತಿತ್ತು ಎಂದು ಮತ್ತೊಬ್ಬ ರೆಬಲ್ ಶಾಸಕ ರಮೇಶ್ ಜಾರಕಿಹೊಳಿ ಪ್ರತಿಕ್ರಿಯಿಸಿದ್ದಾರೆ.
ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯತ್ನಾಳ್ ಉಚ್ಛಾಟನೆ ವಾಸನೆ ಮೊದಲೇ ಸಿಕ್ಕಿತ್ತು. ಆದರೆ ಪಕ್ಷದ ನಿರ್ಣಯ ಪ್ರಶ್ನೆ ಮಾಡುವಷ್ಟು ದೊಡ್ಡವನಲ್ಲ. ನಾಳೆ ಯತ್ನಾಳ್ ಜತೆ ಸಭೆ ಸೇರಿ ಮುಂದಿನ ನಿರ್ಧಾರ ಮಾಡುವುದಾಗಿ ಅಲ್ಲದೇ ಹೇಳಿದರು.
ಶಾಸಕ ಯತ್ನಾಳ್ ಉಚ್ಚಾಟನೆ ಬೆನ್ನಲ್ಲೆ ಪ್ರತಿಭಟನೆಗೆ ಸಜ್ಜು ; ಬೆಂಬಲಿಗರ ಸಭೆ
ಅಲ್ಲದೇ ಯತ್ನಾಳ್ ಉಚ್ಛಾಟನೆ ಪುನರ್ ಪರಿಶೀಲನೆ ಮಾಡಬೇಕು. ಹೈಕಮಾಂಡ್ ಹಾಗೂ ಶಿಸ್ತು ಸಮಿತಿಗೆ ಪತ್ರ ಬರೆಯುತ್ತೇವೆ. ಉಚ್ಛಾಟನೆ ಆದೇಶ ವಾಪಸ್ ಪಡೆಯುವಂತೆ ಆಗ್ರಹಿಸುತ್ತೇವೆ. ಯತ್ನಾಳ್ ಉಚ್ಛಾಟನೆ ಆದೇಶ ನಮ್ಮ ಮನಸ್ಸಿಗೆ ನೋವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.