ಬೆಂಗಳೂರು: ರಾಜ್ಯದ ಹಾಲು ಉತ್ಪಾದಕರಿಗೆ ನೆರವು ನೀಡುವ ನೆಪದಲ್ಲಿ ರಾಜ್ಯ ಸರ್ಕಾರ ಕೆಎಂಎಫ್ ನಂದಿನಿ ಹಾಲಿನ ದರವನ್ನು 4 ರೂ. ಏರಿಕೆ ಮಾಡಲಾಗಿದೆ. ನೂತನ ಹಾಲಿನ ದರ ಏಪ್ರಿಲ್ 1ರಿಂದಲೇ ಜಾರಿಗೆ ಬರಲಿದೆ.
ಸಂಪುಟ ಸಭೆ ಬಳಿಕ ಪಶುಸಂಗೋಪನಾ ಸಚಿವ ಕೆ.ವೆಂಕಟೇಶ್, ಸಹಕಾರ ಸಚಿವ ಕೆ.ಎನ್ ರಾಜಣ್ಣ ಜಂಟಿ ಸುದ್ದಿಗೋಷ್ಠಿ ನಡೆಸಿ ನಂದಿನಿ ಹಾಲಿನ ದರ ಏರಿಕೆ ನಿರ್ಧಾರವನ್ನು ಪ್ರಕಟಿಸಿದರು. ಹಾಲು ಉತ್ಪಾದನೆ ಮಾಡುವ ರೈತರಿಗೆ ಅನುಕೂಲ ಕಲ್ಪಿಸಲು ನಂದಿನಿ ಹಾಲಿನ ದರ ಏರಿಕೆ ಮಾಡಲಾಗಿದ್ದು, ಎಲ್ಲಾ ಹೆಚ್ಚಳದ ಹಣ ರಾಜ್ಯದ ರೈತರಿಗೆ ವರ್ಗವಣೆಯಾಗಲಿದೆ ಎಂದು ಪಶುಸಂಗೋಪನಾ ಸಚಿವ ಕೆ.ವೆಂಕಟೇಶ್ ಹೇಳಿದ್ದಾರೆ.
ಬಹಳ ದಿನಗಳಿಂದ ಹಾಲಿನ ದರ ಏರಿಕೆಗೆ ರೈತರಿಂದ ಒತ್ತಡ ಇತ್ತು. ಹೀಗಾಗಿ ಸಿಎಂ ಜೊತೆ ಮಾತನಾಡಿ ಸಚಿವ ಸಂಪುಟದಲ್ಲಿ ತೀರ್ಮಾನ ಮಾಡಲಾಗಿದೆ ಎಂದು ಹೇಳಿದರು.
ಹಾಲಿನ ದರದ ಹೆಚ್ಚಳ ಪಟ್ಟಿ- ಪ್ರತಿ ಲೀಟರ್ ಗೆ..
ಟೋನ್ಡ್ ಹಾಲು ನೀಲಿ ಪೊಟ್ಟಣ ಹಳೆಯ ದರ- 42 ಹೊಸ ದರ- 46
ಹೋಮೋಜಿನೈಸ್ಡ್ ಟೋನ್ಡ್ ಹಾಲು ಹಳೆಯ ದರ- 43 ಹೊಸ ದರ – 47
ಹಸುವಿನ ಹಾಲು ಹಸಿರು ಪಟ್ಟಣ- ಹಳೆಯ ದರ- 46, ಹೊಸ ದರ – 50
ಶುಭಂ ಕೇಸರಿ ಪಟ್ಟಣ, ಸ್ಪೆಷಲ್ – ಹಳೆಯ ದರ- 48 ಹೊಸ ದರ – 52
ಮೊಸರು ಪ್ರತಿ ಕೆಜಿಗೆ ಹಳೆಯ ದರ- 50 ಹೊಸ ದರ – 54
ಮೊಸರು ದರವೂ 4.ರೂ ಹೆಚ್ಚಳ
ಎಲ್ಲಾ ಬಗೆಯ ನಂದಿನಿ ಹಾಲಿನ ದರ ಹೆಚ್ಚಳ ಮಾಡಿರುವ ಕೆಎಂಎಫ್, ಮೊಸರು ದರವನ್ನು ಕೂಡ ಲೀಟರ್ ಗೆ 4 ರೂ. ಹೆಚ್ಚಳ ಮಾಡಿದೆ. ಹಾಲಿನ ದರ ಹೆಚ್ಚಳಕ್ಕೆ ಇಬ್ಬರು ಸಚಿವರು ಸಮಜಾಯಿಷಿಕೊಟ್ಟಿದ್ದಾರೆ. ಬೇರೆ ಬೇರೆ ರಾಜ್ಯಗಳ ಹಾಲಿನ ದರದ ಉದಾಹರಣೆ ಕೊಟ್ಟ ಸಚಿವರು, ಬೇರೆ ರಾಜ್ಯಗಳಿಗಿಂತ ನಮ್ಮ ರಾಜ್ಯದಲ್ಲೇ ದರ ಕಡಿಮೆ ಇದೆ ಎಂದು ಸಮಜಾಯಿಷಿ ನೀಡಿದರು.