ತಮಿಳು ನಟಿ ಶ್ರುತಿ ನಾರಾಯಣನ್ ಅವರನ್ನು ತೋರಿಸಲಾಗಿದೆ ಎನ್ನಲಾದ 14 ನಿಮಿಷಗಳ ವಿಡಿಯೋ ಆನ್ಲೈನ್ನಲ್ಲಿ ಕಾಣಿಸಿಕೊಂಡಿದ್ದು, ವಿವಾದಕ್ಕೆ ಕಾರಣವಾಗಿದೆ. ತಮಿಳು ಚಿತ್ರರಂಗದಲ್ಲಿನ ಕಾಸ್ಟಿಂಗ್ ಕೌಚ್ ಪದ್ಧತಿಗಳನ್ನು ಚಿತ್ರಿಸುತ್ತದೆ ಎಂದು ಹೇಳಲಾದ ಪರಿಶೀಲಿಸದ ದೃಶ್ಯಗಳು ಆಡಿಷನ್ ಸಮಯದಲ್ಲಿ ಸೋರಿಕೆಯಾಗಿವೆ ಎಂದು ವರದಿಯಾಗಿದೆ.
ಕಿರಿ ಧಾರಾವಾಹಿ, ರಿಯಾಲಿಟಿ ಶೋಗಳ ಮೂಲಕ ಸಾಕಷ್ಟು ಸಂಖ್ಯೆಯ ಅಭಿಮಾನಿಗಳನ್ನು ಶ್ರುತಿ ನಾರಾಯಣ್ ಹೊಂದಿದ್ದಾರೆ. ಇದೀಗ ಲೀಕ್ ಆಗಿರುವ ವಿಡಿಯೋ, ಕಾಸ್ಟಿಂಗ್ ಕೌಚ್ ವಿಡಿಯೋ ಎನ್ನಲಾಗುತ್ತಿದೆ. ಪಾತ್ರವೊಂದನ್ನು ಪಡೆಯಲು ನಟಿ ಹೀಗೆಲ್ಲ ಮಾಡಿದ್ದು, ಅದನ್ನು ಯಾರೋ ರೆಕಾರ್ಡ್ ಮಾಡಿಕೊಂಡು ಇದೀಗ ವೈರಲ್ ಮಾಡಿದ್ದಾರೆ ಎಂಬ ವಾದಗಳು ಸಾಮಾಜಿಕ ಜಾಲತಾಣದಲ್ಲಿ ಕೇಳಿ ಬರುತ್ತಿವೆ.
ವಾಸ್ತು ಪ್ರಕಾರ ಈ ದಿಕ್ಕಿನಲ್ಲಿ ಮಲಗಿ: ಜೀವನದಲ್ಲಿ ಅನಿರೀಕ್ಷಿತ ಅದೃಷ್ಟ ನಿಮ್ಮದಾಗುತ್ತೆ.!
ಶ್ರುತಿ ನಾರಾಯಣ್, ಕೆಲವು ಧಾರಾವಾಹಿ ಹಾಗೂ ಕೆಲವು ಜನಪ್ರಿಯ ಸಿನಿಮಾಗಳಲ್ಲಿಯೂ ನಟಿಸಿದ್ದಾರೆ. ತಮಿಳಿನ ಸೂಪರ್ ಹಿಟ್ ಧಾರಾವಾಹಿ ‘ಕಾರ್ತಿಕ ದೀಪಂ’ನಲ್ಲಿ ಶ್ರುತಿ ನಾರಾಯಣ್ ನಟಿಸಿದ್ದಾರೆ. ಅದರ ಹೊರತಾಗಿ ‘ಮಾರಿ’ ಸಿನಿಮಾದಲ್ಲಿಯೂ ಶ್ರುತಿ ನಟಿಸಿದ್ದರು. ಸಮಂತಾ ಹಾಗೂ ವರುಣ್ ಧವನ್ ನಟಿಸಿರುವ ವೆಬ್ ಸರಣಿ ‘ಸಿಟಾಡೆಲ್: ಹನಿ ಬನಿ’ಯಲ್ಲಿಯೂ ಸಹ ಶ್ರುತಿ ನಾರಾಯಣ್ ನಟಿಸಿದ್ದು ಮಾತ್ರವೇ ಅಲ್ಲದೆ ನಟನೆಗೆ ಒಟಿಟಿ ಅವಾರ್ಡ್ ಸಹ ಪಡೆದುಕೊಂಡಿದ್ದಾರೆ.
ತಮ್ಮ ವಿಡಿಯೋ ವೈರಲ್ ಆಗುತ್ತಿದ್ದಂತೆ ತಮ್ಮ ಇನ್ಸ್ಟಾಗ್ರಾಂನ ಖಾತೆಯನ್ನು ಪ್ರೈವೇಟ್ ಮಾಡಿಕೊಂಡಿರುವ ನಟಿ, ತಮ್ಮ ಚಿತ್ರಗಳಿಗೆ ಯಾರೂ ಕಮೆಂಟ್ ಮಾಡದಂತೆ ಮಾಡಿದ್ದಾರೆ. ವಿಡಿಯೋ ವೈರಲ್ ಆದ ಬಳಿಕ ಇಂದು ಮಧ್ಯಾಹ್ನ ತಮ್ಮ ಕೆಲವು ಚಿತ್ರಗಳನ್ನು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಆದರೆ ಚಿತ್ರಗಳನ್ನು ಸಹ ಪ್ರೈವೇಟ್ ಮಾಡಿರಿಸಿಕೊಂಡಿದ್ದಾರೆ ನಟಿ.