ಬೆಂಗಳೂರು:- ಹಾಲಿನ ದರ ಏರಿಕೆ ಮಾಡಿರುವ ರಾಜ್ಯ ಸರ್ಕಾರದ ಕ್ರಮವನ್ನು ಡಿಕೆ ಸುರೇಶ್ ಖಂಡಿಸಿದ್ದಾರೆ.
ಲಂಚಕ್ಕೆ ಬೇಡಿಕೆ: ರೆಡ್ ಹ್ಯಾಂಡ್ ಆಗಿ ‘ಲೋಕಾ’ ಬಲೆಗೆ ಬಿದ್ದ ರಾಜ್ಯ ಮಾಹಿತಿ ಆಯೋಗದ ಆಯುಕ್ತ!
ಈ ಸಂಬಂಧ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಹಾಲಿನ ದರವನ್ನು 9 ರೂ. ಏರಿಕೆ ಮಾಡಿದೆ. ಈಗ ಹಾಲಿನ ದರ, ಮುಂದೆ ನೀರಿನ ದರ, ಆಮೇಲೆ ವಿದ್ಯುತ್ ದರ, ಬಹುಶಃ ಸೇವಿಸುವ ಗಾಳಿಗೂ ಬೆಲೆ ನಿಗದಿ ಪಡಿಸುವ ದಿನ ಬಹಳ ದೂರ ಇಲ್ಲ ಎಂದರು.
ಹಾಲಿನ ದರ ಹೆಚ್ಚಿಸಿ ರೈತರಿಗೆ ಪ್ರೋತ್ಸಾಹಧನ ನೀಡ ಬೇಕೆಂಬುದು ಒಪ್ಪಿತ ಮಾತು. ಹಾಗೆಂದ ಮಾತ್ರಕ್ಕೆ ಗ್ರಾಹಕರ ಜೇಬಿನಿಂದ ಕಿತ್ತು ಕೊಡುವುದು ಕಾಂಗ್ರೆಸ್ ಸರ್ಕಾರ ಹೇಳಿಕೊಳ್ಳುವ ಸಾಮಾಜಿಕ ನ್ಯಾಯದ ಪರಿಕಲ್ಪನೆ ಇದೆಯೇ ಎಂದು ಪ್ರಶ್ನಿಸಿದ್ದಾರೆ.
ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಕೂಡಲೇ, ಆಗಸ್ಟ್ 2023 ರಲ್ಲಿ, ಹಾಲಿನ ಬೆಲೆ ಲೀಟರ್ಗೆ 3 ರೂ.ಗಳಷ್ಟು ಏರಿಕೆಯಾಯಿತು. ಅದಾದ ಬಳಿಕ 2024ರ ಜೂನ್ 26ಕ್ಕೆ ನಂದಿನಿಯ ಎಲ್ಲಾ ಹಾಲಿನ ಬೆಲೆಯನ್ನು 2 ರೂಪಾಯಿ ಏರಿಕೆ ಮಾಡಿತು. ಈಗ ಮತ್ತೊಂದು ಸುತ್ತಿನ ಹಾಲಿನ ಬೆಲೆ ಏರಿಕೆಯಾಗಿದೆ. ಏಪ್ರಿಲ್ 1 ರಿಂದ ಹಾಲಿನ ದರ ಲೀಟರ್ 4 ರೂಪಾಯಿ ಏರಿಕೆ ಘೋಷಣೆ ಮಾಡಿದೆ.
ಗ್ಯಾರಂಟಿ ಉಚಿತ, ಬೆಲೆ ಏರಿಕೆ ಖಚಿತ ಎಂಬ ಈ ನಿಲುವು ರಾಜ್ಯದ ಆರ್ಥಿಕ ವ್ಯವಸ್ತೆ ದಿಕ್ಕೆಟ್ಟಿರುವ ದ್ಯೋತಕವಾಗಿದೆ. ಈಗ ಹಾಲಿನ ದರ, ಮುಂದೆ ನೀರಿನ ದರ, ಆಮೇಲೆ ವಿದ್ಯುತ್ ದರ, ಬಹುಶಃ ಸೇವಿಸುವ ಗಾಳಿಗೂ ಬೆಲೆ ನಿಗದಿ ಪಡಿಸುವ ದಿನ ಬಹಳ ದೂರ ಇಲ್ಲ.
ರಾಜ್ಯ ಕಾಂಗ್ರೆಸ್ ಸರ್ಕಾರದ ನಿರಂತರ ಬೆಲೆ ಏರಿಕೆಯ ಬರೆಯಿಂದ ಬಳಲುತ್ತಿರುವ ಜನಸಾಮಾನ್ಯರಿಗೆ ಇಂದು ಹಾಲಿನ ದರ ಏರಿಕೆ ಮಾಡಿ ಮತ್ತೆ ಸುಲಿಗೆ ಮಾಡುವ ಕಾರ್ಯ ಮುಂದುವರೆಸಿದೆ ಸಿದ್ದರಾಮಯ್ಯ ನೇತೃತ್ವದ ಸರ್ಕಾರ. ಬೆಲೆಏರಿಕೆ ಕಾಂಗ್ರೆಸ್ ಅಘೋಷಿತ ಗ್ಯಾರಂಟಿ ಎಂಬುದು ಪ್ರತಿನಿತ್ಯ ರುಜುವಾತು ಆಗುತ್ತಿದೆ. ನಿಜಕ್ಕೂ ರಾಜ್ಯದ ಜನರ ಪಾಲಿಗೆ ಬೆಲೆ ಏರಿಕೆಯ ಗ್ಯಾರಂಟಿ ಕೊಟ್ಟಿರುವ ಅತ್ಯಂತ ಅಮಾನವೀಯ ಹಾಗೂ ಖಂಡನೀಯ ಎಂದಿದ್ದಾರೆ.