ಬೆಂಗಳೂರು:- ನೀವು ಐಸ್ ಕ್ರೀಂ ಪ್ರಿಯರಾ!? ಹಾಗಿದ್ರೆ ಬೇಸಿಗೆ ಅಂತ ಹೆಚ್ಚು ಸೇವಿಸೋ ಮುನ್ನ ಈ ಸ್ಟೋರಿ ನೋಡಿ.
ರಾಜಣ್ಣ ಹಾಗೂ ಪುತ್ರ ರಾಜೇಂದ್ರಗೆ ಸರ್ಕಾರ ಸೂಕ್ತ ಭದ್ರತೆ ಕೊಡಿ: ಎನ್.ರವಿಕುಮಾರ್!
ಐಸ್ ಕ್ರೀಂ ತಯಾರಿಸುವ ಘಟಕಗಳಲ್ಲಿ ಶ್ವಚ್ಛತೆ ಇರುವುದಿಲ್ಲ. ಇದರಿಂದ ಕಲುಷಿತ ಪದಾರ್ಥ ಐಸ್ ಕ್ರೀಂಗಳ ಜೊತೆ ದೇಹಸೇರಿ ಅನಾರೋಗ್ಯಕ್ಕೆ ಕಾರಣವಾದರೆ ಮತ್ತೊಂದಡೆ ಐಸ್ ಕ್ರೀಂಗಳ ತಯಾರಿಸಲು ಇತ್ತೀಚೆಗೆ ಕೃತಕ ಕಲರ್ ಹಾಗೂ ಕೃತಕ ಸಿಹಿಕಾರಕಗಳನ್ನ ಬಳಕೆ ಮಾಡಲಾಗುತ್ತಿದೆ. ಹೀಗಾಗಿ ಆಹಾರ ಇಲಾಖೆ ಐಸ್ ಕ್ರೀಂ ತಯಾರಿಕಾ ಘಟಕಗಳ ಮೇಲೆ ದಾಳಿ ಮಾಡಿ ಸ್ಯಾಂಪಲ್ಸ್ ಸಂಗ್ರಹಿಸುತ್ತಿದೆ.
ಈ ಕೃತಕ ಸಿಹಿಕಾರಕದಲ್ಲಿ ಆಸ್ಪರ್ಟೇಮ್, ಅಸೆಸಲ್ಫೇಮ್ ಪೊಟ್ಯಾಸಿಯಮ್ ನಿಂದ ಸಿದ್ಧವಾದ ಐಸ್ ಕ್ರೀಂಗಳನ್ನ ಅತಿಯಾಗಿ ಸೇವನೆಯಿಂದ ಬೊಜ್ಜು , ಕ್ಯಾನ್ಸರ್ ಸೇರಿದ್ದಂತೆ ಅನೇಕ ಕಾಯಿಲೆಗಳು ಬರುತ್ತಿವೆ. ಹೀಗಾಗಿ ಆಹಾರ ಇಲಾಖೆ ರಾಜ್ಯದ ವಿವಿಧ ಭಾಗಗಳಲ್ಲಿನ ಐಸ್ ಕ್ರೀಂ ತಯಾರಿಕಾ ಘಟಕಗಳ ಮೇಲೆ ದಾಳಿ ಮಾಡಿದ್ದು, ಈ ವೇಳೆ ಶ್ವಚ್ಛತೆ ತಯಾರಿಕೆಗಳ ಬಗ್ಗೆ ಪರಶೀಲನೆ ನಡೆಸುತ್ತಿದೆ. ಅಲ್ಲದೆ ಐಸ್ ಕ್ರೀಂಗಳ ಸ್ಯಾಂಪಲ್ಸ್ ಗಳನ್ ಸಂಗ್ರಹಿಸಲು ಮುಂದಾಗಿದೆ.
ಬೇಸಿಗೆ ಸಮಯದಲ್ಲಿ ಐಸ್ ಕ್ರೀಂಗಳಿಗೆ ಹೆಚ್ಚು ಬೇಡಿಕೆ ಇರುವುದಿರಂದ ಕೃತಕ ಕಲರ್ ಹಾಗೂ ಟೆಸ್ಟಿಂಗ್ ಪೌಡರ್ ಗಳ ಬಳಕೆ ಮಾಡಲಾಗುತ್ತಿದೆ. ಹಾಗೂ ಐಸ್ ಕ್ರೀಂ ತಯಾರಿಕಾ ಘಟಕಗಳಲ್ಲಿ ಶ್ವಚ್ಛತೆ ಇರುವುದಿಲ್ಲ. ಹೀಗಾಗಿ FSSAI ದಾಳಿ ನಡೆಸಿ ಐಸ್ ಕ್ರೀಂಗಳ ಸ್ಯಾಂಪಲ್ಸ್ ಪಡೆಯುತ್ತಿದೆ. ಬೆಂಗಳೂರು ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಕಾರ್ಯಾಚರಣೆ ಮಾಡಲು ಮುಂದಾಗಿದ್ದು, ಸ್ಯಾಂಪಲ್ ಕಲೆಕ್ಟ್ ಮಾಡಿ ಲ್ಯಾಬ್ ಗೆ ಕಳಸಲು ಆಹಾರ ಇಲಾಖೆ ಮುಂದಾಗಿದೆ.
ಬೇಸಿಗೆಯಲ್ಲಿ ಐಸ್ ಕ್ರೀಂ, ತಂಪು ಪಾನೀಯಗಳಿಗೆ ಹೆಚ್ಚು ಜನರು ಹಾಗೂ ಮಕ್ಕಳು ಮುಗಿಬೀಳುವುದು ಹೆಚ್ಚು. ಈ ಹಿನ್ನೆಲೆಯಲ್ಲಿ ಅಲರ್ಟ್ ಆಗಿರುವ ಅಧಿಕಾರಿಗಳು ಐಸ್ ಕ್ರೀಂ, ಕೂಲ್ ಡ್ರಿಂಕ್ಸ್ ಘಟಕಗಳ ಮೇಲೆ ಎಫ್ಎಸ್ಎಸ್ಎಐ ದಾಳಿ ಮಾಡಿ ಸ್ಯಾಂಪಲ್ ಕಲೆಕ್ಟ್ ಮಾಡಿ ಪ್ರಯೋಗಾಲಯಕ್ಕೆ ಕಳುಹಿಸಿದ್ದಾರೆ. ಮುಂದಿನ ವಾರ ಈ ಐಸ್ ಕ್ರೀಂ ಸ್ಯಾಂಪಲ್ಸ್ ವರದಿ ಬರಲಿದ್ದು, ಅದರ ಆಧಾರದ ಮೇಲೆ ಕ್ರಮಕ್ಕೆ ಆಹಾರ ಇಲಾಖೆ ಮುಂದಾಗಿದೆ.