BSNL ಗ್ರಾಹಕರಿಗೆ ಗುಡ್ ನ್ಯೂಸ್ ಒಂದು ಸಿಕ್ಕಿದೆ. ಕಡಿಮೆ ದರದಲ್ಲಿ ಹಲವು ಬೆನಿಫಿಟ್ಸ್ ಇದ್ದು, ನೂತನ ಪ್ಲ್ಯಾನ್ ಗೆ ಗ್ರಾಹಕರು ಖುಷ್ ಆಗಿದ್ದಾರೆ.
ಹೃದಯ ಸಮಸ್ಯೆ ಇದ್ರೆ ವಾರಕ್ಕೆ ಎರಡು ಬಾರಿ ಮೀನು ತಿನ್ನೋದು ಬೆಸ್ಟ್ ಅಂತೆ!
ಸರ್ಕಾರಿ ಸ್ವಾಮ್ಯದ ಭಾರತ್ ಸಂಚಾರ್ ನಿಗಮ ಲಿಮಿಟೆಡ್ ತನ್ನ ಬಳಕೆದಾರರಿಗಾಗಿ 107 ರೂಪಾಯಿ ಮತ್ತು 153 ರೂಪಾಯಿಯ ಪ್ರಿಪೇಯ್ಡ್ ಪ್ಲಾನ್ ನೀಡುತ್ತಿದೆ. ಇದು ಕೈಗೆಟಕುವ ಬೆಲೆಯಲ್ಲಿದೆ. ಎರಡು ಪ್ಲಾನ್ಗಳು ಹಲವು ಬೆನಿಫಿಟ್ಗಳನ್ನು ಗ್ರಾಹಕರಿಗೆ ಒದಗಿಸುತ್ತಿದೆ
ಬಜೆಟ್ ಬೆಲೆಯ ಪ್ಲಾನ್ ಇದಾಗಿದೆ. 107 ರೂಪಾಯಿಯ ಪ್ಲಾನ್ ರೀಚಾರ್ಜ್ ಮಾಡಿದರೆ ಕೆಲವು ಪ್ರಯೋಜನವನ್ನು ಬಳಕೆದಾರರು ಪಡೆಯಬಹುದಾಗಿದೆ. ಅದರಲ್ಲೂ ಕಡಿಮೆ ಡೇಟಾ ಪ್ರಯೋಜನ ಬೇಕೆನ್ನುವವರಿಗೆ ಈ ಪ್ಲಾನ್ ಬೆಸ್ಟ್ ಎನಿಸಿಕೊಂಡಿದೆ.
ಅಂದಹಾಗೆ 107 ರೂಪಾಯಿಯ ಪ್ಲಾನ್ 35 ದಿನಗಳ ಮಾನ್ಯತೆ ಪಡೆದಿದೆ. ಇದರಲ್ಲಿ ಅನಿಯಮಿತ ಕರೆ ಬದಲಿಗೆ, ಎಲ್ಲಾ ನೆಟ್ವರ್ಕ್ಗೆ 200 ನಿಮಿಷಗಳ ಕರೆ ಆಯ್ಕೆಯಾಗಿ ಸಿಗಲಿದೆ. ಜೊತೆಗೆ 3GBಯ ಡೇಟಾ ನೀಡುತ್ತಿದೆ. ಅದು 4G ನೆಟ್ವರ್ಕ್ನಲ್ಲಿ ಕಾರ್ಯನಿರ್ವಹಿಸುತ್ತದೆ.
ಪ್ರಿಪೇಯ್ಡ್ ಗ್ರಾಹಕರಿಗೆ 153 ರೂಪಾಯಿ ಪ್ಲಾನ್ ರೀಚಾರ್ಜ್ ಮಾಡಿದ್ರೆ ಅನಿಯಮಿತ ಕರೆ ಸೌಲಭ್ಯ ಬಳಸಬಹುದಾಗಿದೆ. 26GBಯ ಡೇಟಾ ಬಳಸಬಹುದಾಗಿದೆ. ಇದು 4Gಯಲ್ಲಿ ಕಾರ್ಯನಿರ್ವಹಿಸುತ್ತದೆ.
ಗ್ರಾಹಕರು 26GB ಡೇಟಾದ ನಂತರ ಅದರ ವೇಗವು 40ಕೆಬಿಪಿಎಸ್ಗೆ ಕಡಿಮೆಯಾಗುತ್ತದೆ. ಈ ಯೋಜನೆ 26 ದಿನಗಳ ಮಾನ್ಯತೆ ಪಡೆದಿದೆ.