ಧಾರವಾಡ:- ಧಾರವಾಡದಲ್ಲಿ ಅಮಾನವೀಯ ಘಟನೆಯೊಂದು ಜರುಗಿದೆ. ಬುದ್ದಿಮಾಂದ್ಯ ವ್ಯಕ್ತಿ ಮೇಲೆ ಕಲ್ಲೆಸೆದು ಹಲ್ಲೆ ಮಾಡಿರುವ ಘಟನೆ ಧಾರವಾಡ ಎಪಿಎಂಸಿಯಲ್ಲಿ ಜರುಗಿದೆ. ಹಲ್ಲೆಯಿಂದ ತೀವ್ರ ಗಾಯಗೊಂಡಿದ್ದ ಬುದ್ದಿಮಾಂದ್ಯ ವ್ಯಕ್ತಿ ಸಾವನ್ನಪ್ಪಿದ್ದಾರೆ.
ವಾಹನ ಸವಾರರ ಗಮನಕ್ಕೆ: ಬೆಂಗಳೂರಿನ ಫ್ಲೈಓವರ್ಗಳಲ್ಲಿ ರಾತ್ರಿ ಸಂಚಾರಕ್ಕೆ ನಿರ್ಬಂಧ?
ಇನ್ಯಾಸ್ ಮಕಾಂದಾರ್ ಸಾವನ್ನಪ್ಪಿದ ದುರ್ದೈವಿ. ಸ್ಥಳಕ್ಕೆ ಉಪನಗರ ಪೊಲೀಸರು ಭೇಟಿ ನೀಡಿ ಪರಿಶಿಲನೆ ಮಾಡಿದ್ದಾರೆ. ಬುದ್ದಿಮಾಂದ್ಯನನ್ನ ಜಿಲ್ಲಾಸ್ಪತ್ರೆಗೆ ಸ್ಥಳೀಯರು ದಾಖಲಿಸಿದ್ದರು. ಆದರೆ ದುರಾದೃಷ್ಟವಶಾತ್ ಚಿಕಿತ್ಸೆ ಫಲಕಾರಿಯಾಗದೇ ಬುದ್ದಿಮಾಂದ್ಯ ಸಾವನ್ನಪ್ಪಿದ್ದಾರೆ. ಬುದ್ದಿಮಾಂದ್ಯ ಮೇಲಿನ ಹಲ್ಲೆ ಹಿನ್ನಲೆ, ಜಿಲ್ಲಾಸ್ಪತ್ರೆಗೆ ಹಾಗೂ ಹಲ್ಲೆ ನಡೆದ ಸ್ಥಳಕ್ಕೆ ಹುಧಾ ಕಮಿಷನರ್ ಶಶಿಕುಮಾರ್ ಭೇಟಿ ನೀಡಿ ಪರಿಶೀಲನೆ ಮಾಡಿದರು. ಎಪಿಎಂಸಿಯಲ್ಲಿ ಪೊಲೀಸರು ಸಿಸಿಟಿವಿ ಪರಿಶಿಲನೆ ಮಾಡುತ್ತಿದ್ದು, ದೃಶ್ಯ ಆಧರಿಸಿ ಮುಂದಿನ ತನಿಖೆ ಕೈಗೊಂಡಿದ್ದಾರೆ.
ಉಪನಗರ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ.