ಧಾರವಾಡ : ರೈತರಿಗಾಗಿ ತಾಲೂಕಿನಲ್ಲಿ ಕೆರೆ ತುಂಬಿಸುವ ಯೋಜನೆಗೆ ಅತಿ ಶೀಘ್ರದಲ್ಲಿ ಚಾಲನೆ ನೀಡಲಾಗುವುದು. ಕರ್ನಾಟಕ ವಿದ್ಯುತ್ ಪ್ರಸರಣ ನಿಗಮದಿಂದ ಬಮ್ಮಿಗಟ್ಟಿ ವ್ಯಾಪ್ತಿಯ ನೆಲ್ಲಿಹರವಿ, ಅರಳಿಕಟ್ಟಿ ಕ್ರಾಸ್ ಹಿರೇಹೊನ್ನಳ್ಳಿ ಭಾಗದಲ್ಲಿ ಉಪ ಕೇಂದ್ರ ಸ್ಥಾಪನೆಗೆ ಟೆಂಡರ್ ಕರೆಯಲಾಗಿದ್ದು ಅತ್ಯಂತ ಹೆಮ್ಮೆಯ ಸಂಗತಿಯಾಗಿದೆ ಎಂದು ಜಿಲ್ಲಾ ಪಂಚ ಗ್ಯಾರಂಟಿ ಅನುಷ್ಠಾನದ ಅಧ್ಯಕ್ಷ ಎಸ್ ಆರ್ ಪಾಟೀಲ್ ಹೇಳಿದರು.
ಪಟ್ಟಣದ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ತಾಲೂಕಿನಾದ್ಯಂತ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಲಾಡ್ ಅವರು ವಿಶೇಷ ಗಮನವನ್ನು ನೀಡುತ್ತಿದ್ದಾರೆ. ಸಂಗಮೇಶ್ವರ ಗ್ರಾಮ ವ್ಯಾಪ್ತಿಯಲ್ಲಿ ಸೇತುವೆ ನಿರ್ಮಾಣ, ವಿವಿಧ ರಸ್ತೆ ಕಾಮಗಾರಿಗಳಿಗೆ ಭೂಮಿ ಪೂಜೆ ಸಚಿವರು ನೇತೃತ್ವದಲ್ಲಿ ನೆರವೇರಿಸಿದ್ದು. ತಾಲೂಕಿನ ಸುತ್ತಮುತ್ತಲಿನ ಪ್ರದೇಶಗಳಲ್ಲಿ 650 ಟ್ರಾನ್ಸರ್ ಗಳು ದುರಸ್ತಿಗೊಂಡಿದ್ದು, ವಿಶೇಷ ಕಾಳಜಿ ಪೂರ್ವಕವಾಗಿ ರೈತರಿಗಾಗಿ ಹೆಸ್ಕಾಂ ಇಲಾಖೆಯಿಂದ ಹೊಸ ಟ್ರಾನ್ಸರ್ ಗಳನ್ನು ತುರ್ತು ಅಳವಡಿಸಲು ಕ್ರಮ ಕೈಗೊಂಡಿದ್ದಾರೆ. ತಬಕದಹೊನ್ನಳ್ಳಿಯ ಭಾಗದಲ್ಲಿರುವ ಉಪ ಕೇಂದ್ರದಲ್ಲಿ ಮೊದಲು 10 ಕಿವಿ ವಿದ್ಯುತ್ತನ್ನು ಪೂರೈಸಲಾಗುತ್ತಿದ್ದು, ಈಗಾಗಲೇ ಹೆಚ್ಚುವರಿ ಯಾಗಿ 20 ಕೆವಿ ವಿದ್ಯುತ್ ಅನ್ನು ಅನ್ನು ಗ್ರಾಮದ ಜಮೀನುಗಳಿಗೆ ಹಾಗೂ ವಿದ್ಯುತ್ ಸಂಪರ್ಕಿಸುವ ಹೊಸ ಲೈನುಗಳನ್ನು ಅಳವಡಿಸಲಾಗುತ್ತಿದೆ ಎಂದರು.
ಮನೆಯಲ್ಲಿ ಸಕಾರಾತ್ಮಕ ಶಕ್ತಿಗಾಗಿ ಇದನ್ನೊಮ್ಮೆ ಟ್ರೈ ಮಾಡಿ..! ಮಿಸ್ ಮಾಡ್ಬೇಡಿ
ಕಾರ್ಯಕ್ರಮದಲ್ಲಿ ಎಸ್.ಆರ್.ಪಾಟೀಲ, ಉಳುವಪ್ಪ ಬಳಗೇರಿ ಪರಶುರಾಮ ಎತ್ತಿನಗುಡ್ಡ, ಹರಿಶಂಕರ ಮಠದ, ನರೇಶ ಮಲ್ನಾಡ್, ಬಿ.ವೈ.ಪಾಟೀಲ, ಮಂಜುನಾಥ ಮುರಳಿ, ಬಾಬು ಅಂಚಟಗೇರಿ, ಅರ್ಜುನ್ ಅಂಗಡಿ, ಲಕ್ಷ್ಮಣ ಲಮಾಣಿ, ಗಣೇಶ ಕೊಳೆನವರ, ಸೊಖನೇಶ್ವರ ಶಿವಲಿಂಗಪ್ಪ ಮುಗಣ್ಣವರ, ಸಹದೇವ ಉಳ್ಳಾಗಡ್ಡಿ, ಪರಶುರಾಮ ಎತ್ತಿನಗುಡ್ಡ, ರೈತ ಮುಖಂಡ ಯಲ್ಲಪ್ಪ ಕುಂದಗೋಳ, ಬಾಳು ಖಾನಾಪುರ್, ಹನುಮಂತ ಚವರ್ಗುಡ್ಡ, ವಿಜಯ್ ಮುರಾರಿ, ಮಂಜುನಾಥ ವಾಲಿಕಾರ, ಮಾಲಾ ತುರುವಿಹಾಳ, ಕಾರ್ಯಕರ್ತರು ಇತರರಿದ್ದರು.