Close Menu
Ain Live News
    Facebook X (Twitter) Instagram YouTube
    Thursday, July 3
    Facebook X (Twitter) Instagram YouTube
    Ain Live News
    Demo
    • Home
    • ಬೆಂಗಳೂರು
    • ರಾಜಕೀಯ
    • ಜಿಲ್ಲೆ
    • ಸಿನಿಮಾ
    • ಲೈಫ್ ಸ್ಟೈಲ್
    • ಜ್ಯೋತಿಷ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಕ್ರೀಡೆ
    • ತಂತ್ರಜ್ಞಾನ
    • ಕೃಷಿ
    • ಗ್ಯಾಲರಿ
    • ವಿಡಿಯೋ
    Facebook X (Twitter) Instagram YouTube
    Ain Live News

    ́ಮಿಸ್ಟರ್ ಅಂಡ್ ಮಿಸಸ್ ರಾಜಾಹುಲಿʼಗೆ ಸಚಿವ ಹೆಚ್.ಪಾಟೀಲ್ ಸಾಥ್

    By Author AINMarch 28, 2025
    Share
    Facebook Twitter LinkedIn Pinterest Email
    Demo

    ಸೇವಾ ಮನೋಭಾವದ ಹಳ್ಳಿಯ ಯುವಕನೊಬ್ಬನ ಸುತ್ತ ನಡೆಯುವ ಕಥಾಹಂದರ ಒಳಗೊಂಡ ಚಿತ್ರ ‘ಮಿಸ್ಟರ್ ಅಂಡ್ ಮಿಸಸ್ ರಾಜಾಹುಲಿ’. ಈಹಿಂದೆ ಯಶ್ ನಟನೆಯ ರಾಜಾಹುಲಿ ಚಿತ್ರಕ್ಕೆ ಅಸಿಸ್ಟೆಂಟ್ ಆಗಿ ಕೆಲಸ ಮಾಡಿದ್ದ ಹೊನ್ನರಾಜ್ ಈ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು ಇದೇ ಮೊದಲಬಾರಿಗೆ ಆ್ಯಕ್ಷನ್ ಕಟ್ ಹೇಳಿದ್ದಾರೆ. ಅಲ್ಲದೆ ಶ್ರೀ ಸತ್ಯಲಕ್ಷ್ಮಿ ಕ್ರಿಯೇಶನ್ಸ್ ಮೂಲಕ ಚಿತ್ರ ನಿರ್ಮಾಣ ಸಹ ಮಾಡಿದ್ದಾರೆ.

    ಹೊನ್ನರಾಜ್ ಅವರೇ ನಾಯಕನಾಗಿಯೂ ನಟಿಸಿರುವ ಮಿಸ್ಟರ್ ಅಂಡ್ ಮಿಸಸ್ ರಾಜಾಹುಲಿ ಬಿಡುಗಡೆಗೆ ಸಿದ್ದವಾಗಿದ್ದು, ಹೊನ್ನರಾಜ್ ರ ಹುಟ್ಟುಹಬ್ಬದಂದು ಚಿತ್ರದ ಟೀಸರನ್ನು ಸಚಿವರಾದ ಹೆಚ್.ಕೆ.ಪಾಟೀಲ್ ಅವರು ಬಿಡುಗಡೆ ಮಾಡಿದರು. ನಂತರ ಮಾತನಾಡಿದ ಸಚಿವರು ಹೊನ್ನರಾಜ್ ಸಿನಿಮಾ ಬಗ್ಗೆ ಸಾಕಷ್ಟು ಕನಸುಗಳನ್ಬು ಕಟ್ಟಿಕೊಂಡಿದ್ದಾರೆ. ಈ ಚಿತ್ರ ಮಾಡಲು ತುಂಬಾ ಕಷ್ಟಪಟ್ಟಿದ್ದಾರೆ. ಬೆವರು, ರಕ್ತ ಸುರಿಸಿದ್ದಾರೆ. ಈ ಚಿತ್ರದಿಂದ ಅವರಿಗೆ ಪ್ರಶಸ್ತಿ ಬರುವಂತಾಗಲಿ, ಎನ್ನುತ್ತಾ ಅವರ ಹುಟ್ಟುಹಬ್ಬಕ್ಕೆ ಶುಭ ಹಾರೈಸಿದರು.


    ಈ ಸಂದರ್ಭದಲ್ಲಿ ನಾಯಕ ಹೊನ್ನರಾಜ್ ಮಾತನಾಡುತ್ತ ನಾನು ಪಾಟೀಲರ ಮನೆಯ ಮುಂದೆ ಆಡಿ ಬೆಳೆದ ಹುಡುಗ. ಈ ಕಥೆ ರೆಡಿ ಮಾಡಿಕೊಂಡು ಅವರಿಗೆ ಹೇಳಿದೆ. ನಂತರ ಅವರು ತಮ್ಮ ಸ್ನೇಹಿತರಿಗೆ ಹೇಳಿ ನನ್ನನ್ನು ಪರಿಚಯಿಸಿದರು. ಅವರು ನೀಡಿದ ಸಹಕಾರದಿಂದ ಚಿತ್ರವೀಗ ಬಿಡುಗಡೆ ಹಂತ ತಲುಪಿದೆ. ನೈಜ ಘಟನೆಯನ್ನು ಆಧರಿಸಿದ ಫ್ಯಾಮಿಲಿ ಎಂಟರ್ ಟೈನರ್ ಇದಾಗಿದ್ದು ಸೆನ್ಸಾರ್ ನಿಂದ ಯು/ಎ ಸಿಕ್ಕಿದೆ. ಚಿತ್ರದಲ್ಲಿ ನಾಯಕ ಯಶ್ ಅಭಿಮಾನಿ, ಸ್ನೇಹಕ್ಕೆ ಹೆಚ್ಚು ಬೆಲೆ ಕೊಡುವವನು‌, ಸದಾ ಸಮಾಜ ಸೇವೆಯಲ್ಲಿ ತೊಡಗಿರುವ ನಾಯಕ ಮದುವೆ ಆಗ್ತಾನೋ ಇಲ್ಲವೋ, ಎನ್ನುವುದೇ ಚಿತ್ರದ ಕಥೆ. ಯಶ್ ಅವರಿಗೂ ಚಿತ್ರದ ಬಗ್ಗೆ ಹೇಳಿದೆ, ಒಳ್ಳೆದಾಗಲಿ ಎಂದು ಹಾರೈಸಿದರು. ಇಲ್ಲಿ ನಾನೊಬ್ಬನೇ ಪ್ರೊಡ್ಯೂಸರ್ ಅಲ್ಲ. ನನ್ನ ಹಿಂದೆ ನೂರಾರು ಜನ ಕೈಜೋಡಿಸಿದ್ದಾರೆ ಎಂದು ಹೇಳಿದರು‌.

    ಮದ್ದೂರು, ಹುಳಿಯಾರು, ಚಿಕ್ಕನಾಯಕನಾಹಳ್ಳಿ, ಶ್ರೀರಂಗಪಟ್ಟಣದ ಸುತ್ತಮುತ್ತ ಈ ಚಿತ್ರವನ್ನು ಚಿತ್ರೀಕರಿಸಲಾಗಿದ್ದು, ನಾಯಕಿ ಶೃತಿ ಬಬಿತ ಬಜಾರಿ ಹುಡುಗಿಯಾಗಿ ಕಾಣಿಸಿಕೊಂಡಿದ್ದಾರೆ. ಚಿತ್ರದ 4 ಹಾಡುಗಳಿಗೆ ವಿನು ಮನಸು ಸಂಗೀತ ನೀಡಿದ್ದಾರೆ. ವೇದಿಕಯಲ್ಲಿ ಚಿತ್ರದ ನಿರ್ಮಾಪಕಿ ಮಂಜುಳಾ ರಾಘವೇಂದ್ರ, ಕಾರ್ಯಕಾರಿ ನಿರ್ಮಾಪಕ ಸಂಜಯ್ ಶ್ರೀನಿವಾಸ್ ಅಲ್ಲದೆ ಮಾಜಿ ಮಹಾಪೌರರಾದ ಹುಚ್ಚಪ್ಪ, ನಿರ್ಮಾಪಕರಾದ ಕಲ್ಕೆರೆ ಸುನಿಲ್, ಎಂ. ಮುನಿರಾಜು ಇತರರಿದ್ದರು. ವಿನು ಮನಸು ಅವರ ಸಂಗೀತ, ಶಿವಪುತ್ರ ಅವರ ಛಾಯಾಗ್ರಹಣ, ಗಿರೀಶ್ ಅವರ ನೃತ್ಯ ನಿರ್ದೇಶನ‌ ಈ ಚಿತ್ರಕ್ಕಿದೆ. ಮೈಸೂರು ಮಂಜುಳ , ರೇಖಾದಾಸ್ ಮತ್ತಿತರರು ಚಿತ್ರದಲ್ಲಿ ನಟಿಸಿದ್ದಾರೆ.

    Demo
    Share. Facebook Twitter LinkedIn Email WhatsApp

    Related Posts

    TNIT ಸೌಥ್ ಇಂಡಿಯಾ ಮೀಡಿಯಾ ಅವಾರ್ಡ್‌ನ ಮೊದಲ ಹೆಜ್ಜೆ !

    July 2, 2025

    ಗೋಲ್ಡನ್‌ ಸ್ಟಾರ್‌ ಗಣೇಶ್‌ ಜೊತೆ ಕೈ ಜೋಡಿಸಿದ ಜೇಮ್ಸ್‌ ಡೈರೆಕ್ಟರ್‌ ಚೇತನ್‌ ಕುಮಾರ್‌..ಹೊಸ ಸಿನಿಮಾ ಅನೌನ್ಸ್!

    July 2, 2025

    ಯಶ್-ರಾಧಿಕಾ ರೋಮ್ಯಾಂಟಿಕ್‌ Photo..ಪತ್ನಿಯನ್ನು ಎತ್ತಿಕೊಂಡು ಮುದ್ದಾಡಿದ ರಾಕಿಭಾಯ್!‌

    July 2, 2025

    ಧೀರೇನ್‌ ರಾಮ್‌ ಕುಮಾರ್‌ ನಟಿಸುತ್ತಿರುವ ʼಪಬ್ಬಾರ್‌ʼ ಸಿನಿಮಾದ ಫಸ್ಟ್‌ ಶೆಡ್ಯುಲ್ಡ್‌ ಕಂಪ್ಲೀಟ್‌

    July 2, 2025

    ಬ್ಯಾಂಗಲ್ ಬಂಗಾರಿ ಹಾಡಿಗೆ 10 ಮಿಲಿಯನ್ ವೀವ್ಸ್…ದಾಖಲೆ ಬರೆದ ಯುವರಾಜ್ ಕುಮಾರ್ ಎಕ್ಕ ಸಿನಿಮಾ ಹಾಡು

    July 2, 2025

    ಹುಟ್ಟುಹಬ್ಬದ ದಿನದಂದೆ ಹೊಸ ಅವತಾರವೆತ್ತ ಗೋಲ್ಡನ್‌ ಸ್ಟಾರ್‌ ಗಣೇಶ್…ಭಜರಂಗಿ ಗೆಟಪ್‌ನಲ್ಲಿ ಮಳೆ ಹುಡ್ಗ ದರ್ಶನ!

    July 2, 2025

    ವಿಜಯ್‌ ರಾಘವೇಂದ್ರ ಜೊತೆ ಎರಡನೇ ಮದುವೆ ಬಗ್ಗೆ ಮೌನ ಮುರಿದ ಮೇಘನಾ ರಾಜ್…!

    July 2, 2025

    ಆಷಾಢ ಮಾಸ: ಚಾಮುಂಡಿ ತಾಯಿಗೆ ಶಿವಣ್ಣ ದಂಪತಿ ಪೂಜೆ!

    July 2, 2025

    Viral Photo.. ಸಿನಿಮಾ ಸೆಟ್’ನಲ್ಲಿ ಚಿರಂಜೀವಿ-ಪವನ್ ಕಲ್ಯಾಣ್..! ಯಾವುದು ಆ ಸಿನಿಮಾ..?

    July 1, 2025

    ಸತೀಶ್ ನೀನಾಸಂ ನಟನೆಯ ́ದಿ ರೈಸ್ ಆಫ್ ಅಶೋಕʼ ಡಬ್ಬಿಂಗ್ ಮುಕ್ತಾಯ

    July 1, 2025

    ನಿಮಗೆ ಗೊತ್ತೆ..? ವಿರಾಟ್ ಕೊಹ್ಲಿ ನಾದಿನಿ ತೆಲುಗಿನ ಸ್ಟಾರ್ ನಟಿ! ಈ ಸುಂದರಿ ಯಾರು ಗೊತ್ತಾ..?

    July 1, 2025

    BBK 12: ಬಿಗ್ ಬಾಸ್ ಸೀಸನ್ 12 ನಿರೂಪಣೆಗೆ ಕಿಚ್ಚ ಸುದೀಪ್ ಫಿಕ್ಸ್..! ಫ್ಯಾನ್ಸ್ ಗೆ ಗುಡ್ ನ್ಯೂಸ್

    June 30, 2025
    © 2025 Copyright � All rights reserved AIN Developed by Notch IT Solutions..
    • Latest Trending news today
    • Trending News in kannada
    • Kannada online news
    • latest trends and news from India and around the world
    • New Kannada news channel
    • latest and breaking news in Kannada
    • Business News Kannada
    • Karnataka news headlines
    • Live Updates on Karnataka
    • flash news in Kannada politics

    Type above and press Enter to search. Press Esc to cancel.