ಕನ್ನಡ ಬೆಳ್ಳಿಪರದೆಗೆ ತುಂಟ ತುಂಟಿಗಳ ಮೂಲಕ ಕಿಸ್ ಕೊಟ್ಟು ತೆಲುಗಿನಲ್ಲಿ ಕಿಸಿಕ್ ಎಂದು ಕುಣಿದು ಈಗ ಬಾಲಿವುಡ್ ಅಂಗಳದಲ್ಲಿ ರಶ್ಮಿಕಾ ಮಂದಣ್ಣಳಂತೆ ಮೋಡಿ ಮಾಡೋದಿಕ್ಕೆ ರೆಡಿಯಾಗಿರುವ ನಟಿ ಶ್ರೀಲೀಲಾ. ತೆಲುಗಿನಲ್ಲಿ ಶ್ರೀಲೀಲಾ ಕ್ರೇಜ್ ಜೋರಾಗಿಯೇ ಇದೆ. ಪೆಳ್ಳಿ ಸಂದಡಿ ಮೂಲಕ ಟಾಲಿವುಡ್ ಗೆ ಎಂಟ್ರಿ ಕೊಟ್ಟಿದ್ದ ಭರಾಟೆ ಬ್ಯೂಟಿ ಈಗ ಮಹೇಶ್ ಬಾಬು, ಅಲ್ಲು ಅರ್ಜುನ್, ಬಾಲಯ್ಯ ಹಾಗೂ ಪವನ್ ಕಲ್ಯಾಣ್ ಅವರಂತಹ ಸ್ಟಾರ್ ಹೀರೋಗಳ ಜೊತೆ ನಟಿಸಿದ್ದಾರೆ. ಈ ನಡುವೆ ಬಿಟೌನ್ ನತ್ತ ಹೆಜ್ಜೆ ಇಟ್ಟಿದ್ದಾರೆ.
ಬಾಲಿವುಡ್ ನಲ್ಲಿ ಸದ್ಯ ಬಹುಬೇಡಿಕೆ ಕ್ರಿಯೇಟ್ ಮಾಡಿಕೊಂಡಿರುವ ಕಾರ್ತಿಕ್ ಆರ್ಯನ್ ಹೊಸ ಸಿನಿಮಾದಲ್ಲಿ ಶ್ರೀಲೀಲಾ ನಾಯಕಿ. ಈ ಹಿಂದೆ ಬಿಡುಗಡೆಯಾಗಿದ್ದ ಈ ಚಿತ್ರದ ಸಣ್ಣ ತುಣುಕು ನೋಡಿ ಫ್ಯಾನ್ಸ್ ಎಕ್ಸೈಟ್ ಆಗಿದ್ದಾರೆ. ಮುತ್ತಿನ ಮತ್ತೇರಿಸಿದ್ದ ಶ್ರೀಲೀಲಾ ಕಾರ್ತಿಕ್ ನೋಡಿ ಬಿಟೌನ್ ಹೊಸ ಜೋಡಿ ಅಂತಾ ಕರೆಯುತ್ತಿದ್ದಾರೆ. ಈ ಸಿನಿಮಾಗೆ ಆಶಿಕಾ-3 ಎಂಬ ಟೈಟಲ್ ಇಡಲು ಚಿತ್ರತಂಡ ಸಜ್ಜಾಗುತ್ತಿದೆಯಂತೆ. ಬಾಲಿವುಡ್ನ ಪ್ರಖ್ಯಾತ ನಿರ್ದೇಶಕ ಅನುರಾಗ್ ಬಸು ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಸದ್ಯ ಈ ಚಿತ್ರ ಶೂಟಿಂಗ್ ಹಂತದಲ್ಲಿದೆ. ಈ ಸಿನಿಮಾ ಜೊತೆಗೆ ಸೈಫ್ ಅಲಿ ಖಾನ್ ಮಗ ಇಬ್ರಾಹಿಂ ಅಲಿ ಖಾನ್ ಅಭಿನಯದ ಚೊಚ್ಚಲ ಚಿತ್ರಕ್ಕೆ ಶ್ರೀಲೀಲಾ ನಾಯಕಿ ಅಭಿನಯಿಸುತ್ತಿದ್ದಾರೆ.
ಎರಡು ಹಿಂದಿ ಚಿತ್ರಗಳು ಶ್ರೀಲೀಲಾ ಅಕೌಂಟ್ ನಲ್ಲಿವೆ. ಇನ್ನು ಕಾರ್ತಿಕ್ ಆರ್ಯನ್ ʼಪತಿ ಪತ್ನಿ ಔರ್ ವೋ-2ʼ ಚಿತ್ರಕ್ಕೂ ಶ್ರೀಲೀಲಾ ನಾಯಕಿಯಾಗಿ ಕರೆತರಲು ಚಿತ್ರತಂಡ ಪ್ಲಾನ್ ಮಾಡಿತ್ತು. ಆದರೆ ಆ ಅವಕಾಶವೀಗ ಮಸ್ತ್ ಮಸ್ತ್ ಹುಡ್ಗಿ ರವೀನಾ ಟಂಡನ್ ಪುತ್ರಿಗೆ ಸಿಕ್ಕಿದೆಯಂತೆ. ಚೊಚ್ಚಲ ಚಿತ್ರದಲ್ಲಿಯೇ ರವೀನಾ ಪುತ್ರ ರಾಶಾ ಥಡಾನಿ ಭಾರೀ ಮೆಚ್ಚುಗೆ ಪಡೆದುಕೊಂಡಿದ್ದಾರೆ. ಹೀಗಾಗಿ ʼಪತಿ ಪತ್ನಿ ಔರ್ ವೋ-2ʼ ಸಿನಿಮಾದಲ್ಲಿ ಶ್ರೀಲೀಲಾ ಬದಲು ರಾಶಾ ಥಡಾನಿಗೆ ಚಾನ್ಸ್ ಕೊಡಲು ಚಿತ್ರತಂಡ ಚಿಂತನೆ ಮಾಡ್ತಿದೆಯಂತೆ. ಈಗಾಗಲೇ ಆಶಿಕಿ-3 ಚಿತ್ರದಲ್ಲಿ ಕಾರ್ತಿಕ್ ಆರ್ಯನ್ ಗೆ ಶ್ರೀಲೀಲಾ ಜೋಡಿಯಾಗಿ ನಟಿಸುತ್ತಿದ್ದು, ʼಪತಿ ಪತ್ನಿ ಔರ್ ವೋ-2ʼ ಫ್ರೆಶ್ ಫೇಸ್ ಬೇಕಾಗುತ್ತದೆ. ಹೀಗಾಗಿ ರಾಶಾ ಥಡಾನಿಯನ್ನು ಹೀರೋಯಿನ್ ಆಗಿ ಅಪ್ರೋಚ್ ಮಾಡಿದೆಯಂತೆ ಚಿತ್ರತಂಡ.