ಗದಗ : ಬಿಜೆಪಿಯಿಂದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆ ಖಂಡಿಸಿ ಗದಗ ನಗರದ ಫೀಲ್ಟ್ ಮಾರ್ಷಲ್ ಕೆ ಎಂ ಕಾರ್ಯಪ್ಪ ವೃತ್ತದಲ್ಲಿ ಪ್ರತಿಭಟನೆ ನಡೆಸಲಾಯಿತು.
ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ಸಮಾಜದಿಂದ ಪ್ರತಿಭಟನೆ ನಡೆಸಿ, ಮಾಜಿ ಸಿಎಂ ಬಿ ಎಸ್ ವೈ ಹಾಗೂ ವಿಜಯೇಂದ್ರ ಫೋಟೋಗಳಿಗೆ ಧಿಕ್ಕಾರ ಬರೆದು, ಅಡ್ಜಸ್ಟ್ಮೆಂಟ್ ರಾಜಕಾರಣ ಮಾಡುತ್ತಿರೋ ವಿಜಯೇಂದ್ರ ಎಂದು ಆಕ್ರೋಶ ವ್ಯಕ್ತಪಡಿಸಿದರು. ಚುನಾವಣೆಗಳಲ್ಲಿ ಹಿಂದುತ್ವದ ಪ್ರಚಾರಕ್ಕೆ ಯತ್ನಾಳ್ ಬೇಕು ಈಗ ಬೇಡವೇ ಅಂತಾ ಕಿಡಿ ಕಾರಿದ್ದು, ಕೂಡಲೇ ಉಚ್ಚಾಟನೆ ಹಿಂಪಡೆಯುವಂತೆ ಒತ್ತಾಯಿಸಿದರು.
ಬಸನಗೌಡ ಪಾಟೀಲ್ ಯತ್ನಾಳ್ ನಮ್ಮ ಪಕ್ಷಕ್ಕೆ ಕರೆದುಕೊಳ್ತೀನಿ ; ಶಾಸಕ ರಾಜು ಕಾಗೆ
ಅಲ್ಲದೇ ಪ್ರತಿಭಟನಾಕಾರರು, ಮಾಜಿ ಬಿಎಸ್ ವೈ ಭಾವಚಿತ್ರ ಸುಡಲು ಮುಂದಾಗಿದ್ದು, ಈ ವೇಳೆ ಪೊಲೀಸರು ಹಾಗೂ ಪ್ರತಿಭಟನಾಕಾರರ ವಿರುದ್ದ ಕೆಲ ಕಾಲ ವಾಗ್ವಾದ ನಡೆಯಿತು.