ರೀಲ್ಸ್ ಶೋಕಿಗೆ ಬಿದ್ದು ಜೈಲು ಕಂಬಿ ಹಿಂದೆ ಲಾಕ್ ಆಗಿರುವ ಮಚ್ಚೇಶ್ವರಿಗೆ ಸದ್ಯಕ್ಕಂತೂ ಬಿಡುಗಡೆ ಭಾಗ್ಯವಿಲ್ಲ. ಯುಗಾದಿ ಹಬ್ಬಕ್ಕೆ ಹೋಳಿಗೆ ತಿನ್ನಬೇಕಿದ್ದವರು ಜೈಲಲ್ಲಿ ಮುದ್ದೇ ಮುರಿಯುವ ಪರಿಸ್ಥಿತಿ ತಂದುಕೊಂಡಿದ್ದಾರೆ. ಮಚ್ಚು ಹಿಡಿದು ಕ್ಯಾಮೆರಾ ಫೋಸ್ ಕೊಟ್ಟವರಿಗೆ ಖಾಕಿ ಸರಿಯಾಗಿಯೇ ಡ್ರಿಲ್ ಮಾಡ್ತಿದೆ.
ಮಚ್ಚು ಹಿಡಿದು ರೀಲ್ಸ್ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ರಜತ್ ಮತ್ತು ವಿನಯ್ ಗೌಡರನ್ನು 24ನೇ ಎಸಿಎಂಎಂ ಕೋರ್ಟ್ ಏಪ್ರಿಲ್ 9ವರೆಗೆ ನ್ಯಾಯಾಂಗ ಬಂಧನ ವಿಧಿಸಿದೆ. ಮೂರು ದಿನಗಳ ಕಸ್ಟಡಿ ಮುಕ್ತಾಯವಾದ ಹಿನ್ನೆಲೆಯಲ್ಲಿ ಬಸವೇಶ್ವರ ನಗರ ಪೊಲೀಸರು ಇಬ್ಬರು ಆರೋಪಿಗಳನ್ನು ಕೋರ್ಟ್ ಹಾಜರುಪಡಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಧೀಯರು ಮಚ್ಚೇಶ್ವರಿಗೆ ಇನ್ನೂ 12 ದಿನ ಕಾಲ ಪರಪ್ಪನ ಅಗ್ರಹಾರ ಜೈಲಿಗೆ ಕಳುಹಿಸಿದೆ.
ಮುಚ್ಚು ಹಿಡಿದು ರೋಡ್ ನಲ್ಲಿಯೇ ರೀಲ್ಸ್ ಮಾಡಿದ್ದ ರಜತ್ ಹಾಗೂ ವಿನಯ್ ಗೌಡ ಇಬ್ಬರನ್ನು ಪೊಲೀಸ್ ಬಂಧಿಸಿ ತನಿಖೆಯನ್ನು ಚುರುಕುಗೊಳಿಸಿದೆ. ಇದೂವರೆಗೂ ಒರಿಜಿನಲ್ ಮಚ್ಚು ಸಿಗದೇ ಇರೋ ಕಾರಣ ಆರೋಪಿಗಳು ಮತ್ತಷ್ಟು ಫಜೀತಿ ಸಿಲುಕಿದ್ದಾರೆ. ಇನ್ನೂ ರಜತ್ ರು ದರ್ಶನ್ ನಟನೆಯ ‘ಕರಿಯ’ ಸಿನಿಮಾ ಲುಕ್‌ನಲ್ಲಿ ಕಾಣಿಸಿಕೊಂಡಿದ್ರೆ, ಇತ್ತ ವಿನಯ್ ಪುಷ್ಪರಾಜ್ ಲುಕ್‌ನಲ್ಲಿ ಮಚ್ಚು ಹಿಡಿದು ಇಬ್ಬರು ರೀಲ್ಸ್ ಮಾಡಿದ್ದರು. ಇದರಿಂದ ಈಗ ಇಬ್ಬರೂ ಕಾನೂನು ಸಂಕಷ್ಟ ಎದುರಿಸುವಂತಾಗಿದೆ.