ವಿಜಯಪುರ: ಒಂದು ಕಡೆ ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆ ಖಂಡಿಸಿ ಪ್ರತಿಭಟನೆ ನಡೆಯುತಿದ್ದರೆ. ಇತ್ತ ವಿಜಯೇಂದ್ರ ಆಪ್ತರು ಸುದ್ದಿಗೋಷ್ಟಿ ನಡೆಸಿದ್ದಾರೆ. ಯತ್ನಾಳ್ ಉಚ್ಚಾಟನೆ ಸಮರ್ಥಿಸಿಕೊಂಡಿರುವ ಬಿಜೆಪಿ ಮುಖಂಡ ಸುರೇಶ ಬಿರಾದಾರ್ ನಿನ್ನೆ ಯತ್ನಾಳ್ ಪರ ಪಂಚಮಸಾಲಿ ಪ್ರತಿಭಟನೆ ಖಂಡಿಸಿದ್ದಾರೆ.
ಇಂದು ನಗರದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ನಿನ್ನೆ ಪ್ರತಿಭಟನೆ ಪಂಚಮಸಾಲಿ ಸಮುದಾಯವನ್ನ ಇಕ್ಕಟ್ಟಿಗೆ ಸಿಲುಕಿಸಿದೆ. ನಿನ್ನೆ ಯತ್ನಾಳ್ ಬ್ಯಾಂಕ್ ನೌಕರರೇ ಹೆಚ್ಚಾಗಿದ್ದರು. ನಿನ್ನೆ ನಡೆದದ್ದು ಪಂಚಮಸಾಲಿ ಹೋರಾಟ ಅಲ್ಲ, ವಿಜಯೇಂದ್ರ, ಯಡಿಯೂರಪ್ಪರನ್ನ ಟಾರ್ಗೆಟ್ ಮಾಡಲಾಗ್ತಿದೆ. ವಿನಾಕಾರಣ ಬಿ ಎಸ್ ವೈ ಕುಟುಂಬನ್ನ ಲಿಂಗಾಯತ ವಿರೋಧಿ, ಭ್ರಷ್ಟಾಚಾರಿಗಳು ಎಂದು ಬಿಂಬಿಸಲಾಗ್ತಿದೆ. ಪ್ರತಿಭಟನೆಗಳಲ್ಲಿ ಬಿ ಎಸ್ ವೈ ಹಾಗೂ ವಿಜಯೇಂದ್ರ ಪೋಟೊಗಳಿಗೆ ಅವಮಾನ ಮಾಡಲಾಗಿದೆ, ಇದು ಸರಿಯಲ್ಲ, ಯತ್ನಾಳ್ ಮಾತುಗಳನ್ನ ನಿಯಂತ್ರಣದಲ್ಲಿ ಇಟ್ಟುಕೊಳ್ಳಬೇಕು, ಮುಂದೆ ಒಳ್ಳೆ ಭವಿಷ್ಯ ಇದೆ ಎಂದರು.
ಇನ್ನೂ ಯತ್ನಾಳ್ ಉಚ್ಚಾಟನೆ ಬೆನ್ನಲ್ಲೇ ರಾಜೀನಾಮೆ ಪರ್ವ ವಿಚಾರವಾಗಿ ಪ್ರತಿಕ್ರಿಯಿಸಿ, 174 ಪದಾಧಿಕಾರಿಗಳ ರಾಜೀನಾಮೆ ಅಗಿಲ್ಲ. ಪಕ್ಷದ ಕಚೇರಿಗೆ ಬರೀ ಎರಡು ರಾಜೀನಾಮೆ ಮಾತ್ರ ಬಂದಿವೆ. 174 ಅನ್ನೋದು ಬರೀ ಗೊಂದಲ ಸೃಷ್ಟಿ. ಅಷ್ಟು ಕಾರ್ಯಕರ್ತರು ರಾಜೀನಾಮೆ ಕೊಟ್ಟಿಲ್ಲ ಎಂದರು.